Nicholas Pooran: 6,6,6,6,6,6: ನಿಕೋಲಸ್ ಪೂರನ್ ತೂಫಾನ್ ಶತಕ
TV9 Web | Updated By: ಝಾಹಿರ್ ಯೂಸುಫ್
Updated on:
Jun 26, 2023 | 9:23 PM
ICC World Cup Qualifiers 2023: ವಿಶ್ವಕಪ್ ಅರ್ಹತಾ ಸುತ್ತಿನ ಪಂದ್ಯದಲ್ಲಿ ಇದು ನಿಕೋಲಸ್ ಪೂರನ್ ಅವರ 2ನೇ ಶತಕ. ಇದಕ್ಕೂ ಮುನ್ನ ನೇಪಾಳ ವಿರುದ್ಧ 94 ಎಸೆತಗಳಲ್ಲಿ 115 ರನ್ ಬಾರಿಸಿದ್ದರು.
1 / 6
ICC World Cup Qualifiers 2023: ಹರಾರೆಯಲ್ಲಿ ನಡೆಯುತ್ತಿರುವ ಏಕದಿನ ವಿಶ್ವಕಪ್ ಅರ್ಹತಾ ಸುತ್ತಿನ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ದಾಂಡಿಗ ನಿಕೋಲಸ್ ಪೂರನ್ ಸ್ಪೋಟಕ ಶತಕ ಸಿಡಿಸಿ ಮಿಂಚಿದ್ದಾರೆ. ಈ ಪಂದ್ಯದಲ್ಲಿ ಟಾಸ್ ಗೆದ್ದ ನೆದರ್ಲ್ಯಾಂಡ್ಸ್ ತಂಡವು ವಿಂಡೀಸ್ ಅನ್ನು ಬ್ಯಾಟಿಂಗ್ಗೆ ಆಹ್ವಾನಿಸಿತು.
2 / 6
ಅದರಂತೆ ಇನಿಂಗ್ಸ್ ಆರಂಭಿಸಿದ ವೆಸ್ಟ್ ಇಂಡೀಸ್ಗೆ ಬ್ರೆಂಡನ್ ಕಿಂಗ್ (76) ಹಾಗೂ ಜಾನ್ಸನ್ ಚಾರ್ಲ್ಸ್ (54) ಉತ್ತಮ ಆರಂಭ ಒದಗಿಸಿದ್ದರು. ಇವರಿಬ್ಬರ ನಿರ್ಗಮನದ ಬಳಿಕ ಜೊತೆಯಾದ ಶಾಯ್ ಹೋಪ್ ಹಾಗೂ ನಿಕೋಲಸ್ ಪೂರನ್ ಅದ್ಭುತ ಇನಿಂಗ್ಸ್ ಆಡಿದರು.
3 / 6
38 ಎಸೆತಗಳಲ್ಲಿ 2 ಸಿಕ್ಸ್ ಹಾಗೂ 3 ಫೋರ್ನೊಂದಿಗೆ 47 ರನ್ ಬಾರಿಸಿ ಶಾಯ್ ಹೋಪ್ ಔಟಾದರು. ಆದರೆ ಮತ್ತೊಂದೆಡೆ ತೂಫಾನ್ ಬ್ಯಾಟಿಂಗ್ ಪ್ರದರ್ಶಿಸಿದ ಪೂರನ್ ನೆದರ್ಲ್ಯಾಂಡ್ಸ್ ಬೌಲರ್ಗಳ ಬೆಂಡೆತ್ತಿದರು.
4 / 6
ಪೂರನ್ ಸ್ಪೋಟಕ ಬ್ಯಾಟಿಂಗ್ಗೆ ನಲುಗಿದ ನೆದರ್ಲ್ಯಾಂಡ್ಸ್ ಬೌಲರ್ಗಳು ಲಯ ತಪ್ಪಿದರು. ಇದನ್ನೇ ಬಂಡವಾಳ ಮಾಡಿಕೊಂಡ ಎಡಗೈ ದಾಂಡಿಗ 6 ಭರ್ಜರಿ ಸಿಕ್ಸ್ ಹಾಗೂ 9 ಫೋರ್ಗಳನ್ನು ಬಾರಿಸಿದರು.
5 / 6
ಪರಿಣಾಮ ಕೇವಲ 63 ಎಸೆತಗಳಲ್ಲಿ ಭರ್ಜರಿ ಶತಕ ಪೂರೈಸಿದ ಪೂರನ್ ಬ್ಯಾಟ್ ಮೇಲೆತ್ತಿದರು. ಅಲ್ಲದೆ ಅಂತಿಮವಾಗಿ 65 ಎಸೆತಗಳಲ್ಲಿ ಅಜೇಯ 104 ರನ್ ಬಾರಿಸುವ ಮೂಲಕ ವೆಸ್ಟ್ ಇಂಡೀಸ್ ತಂಡದ ಮೊತ್ತವನ್ನು ನಿಗದಿತ 50 ಓವರ್ಗಳಲ್ಲಿ 6 ವಿಕೆಟ್ ನಷ್ಟಕ್ಕೆ 374 ಕ್ಕೆ ತಂದು ನಿಲ್ಲಿಸಿದರು.
6 / 6
ಏಕದಿನ ವಿಶ್ವಕಪ್ ಅರ್ಹತಾ ಸುತ್ತಿನ ಪಂದ್ಯದಲ್ಲಿ ಇದು ನಿಕೋಲಸ್ ಪೂರನ್ ಅವರ 2ನೇ ಶತಕ. ಇದಕ್ಕೂ ಮುನ್ನ ನೇಪಾಳ ವಿರುದ್ಧ 94 ಎಸೆತಗಳಲ್ಲಿ 115 ರನ್ ಬಾರಿಸಿದ್ದರು. ಇದೀಗ ನೆದರ್ಲ್ಯಾಂಡ್ಸ್ ವಿರುದ್ಧ 65 ಎಸೆತಗಳಲ್ಲಿ ಅಜೇಯ 104 ರನ್ಗಳಿಸಿ ಮಿಂಚಿದ್ದಾರೆ.