- Kannada News Photo gallery Cricket photos Including Pakistan This Nine Teams Could Not Beat India In ODI World Cup Till Now
ಪಾಕ್ ಸೇರಿದಂತೆ ಈ 9 ತಂಡಗಳು ಏಕದಿನ ವಿಶ್ವಕಪ್‌ನಲ್ಲಿ ಒಮ್ಮೆಯೂ ಭಾರತವನ್ನು ಸೋಲಿಸಿಲ್ಲ..!
ODI World Cup Records: ಭಾರತ ತಂಡ ಇದುವರೆಗೆ ಆಡಿದ 12 ಏಕದಿನ ವಿಶ್ವಕಪ್‌ಗಳಲ್ಲಿ ಹಲವು ಏರಿಳಿತಗಳನ್ನು ಕಂಡಿದೆ. ಇದರಲ್ಲಿ ಬಲಿಷ್ಠ ತಂಡಗಳನ್ನು ಮಣಿಸಿರುವ ಭಾರತ, ಅತಿ ದುರ್ಬಲ ತಂಡಗಳ ಎದುರು ಸೋಲಿನ ಶಾಕ್ ಎದುರಿಸಿದೆ. ಆದರೆ ಇದುವರೆಗೆ ನಡೆದಿರುವ ವಿಶ್ವಕಪ್‌ನಲ್ಲಿ ಭಾರತವನ್ನು ಒಮ್ಮೆಯೂ ಸೋಲಿಸಿದ ಈ 9 ತಂಡಗಳ ಬಗ್ಗೆ ನಾವು ನಿಮಗೆ ಹೇಳಲಿದ್ದೇವೆ.
Updated on: Oct 01, 2023 | 10:25 AM

ಈ ಬಾರಿಯ ಏಕದಿನ ವಿಶ್ವಕಪ್‌ನ 13ನೇ ಸೀಸನ್ ಭಾರತದಲ್ಲಿ ನಡೆಯಲಿದೆ. ಭಾರತ ತಂಡ ಇದುವರೆಗೆ ಆಡಿದ 12 ಏಕದಿನ ವಿಶ್ವಕಪ್‌ಗಳಲ್ಲಿ ಹಲವು ಏರಿಳಿತಗಳನ್ನು ಕಂಡಿದೆ. ಇದರಲ್ಲಿ ಬಲಿಷ್ಠ ತಂಡಗಳನ್ನು ಮಣಿಸಿರುವ ಭಾರತ, ಅತಿ ದುರ್ಬಲ ತಂಡಗಳ ಎದುರು ಸೋಲಿನ ಶಾಕ್ ಎದುರಿಸಿದೆ. ಆದರೆ ಇದುವರೆಗೆ ನಡೆದಿರುವ ವಿಶ್ವಕಪ್‌ನಲ್ಲಿ ಭಾರತವನ್ನು ಒಮ್ಮೆಯೂ ಸೋಲಿಸಿದ ಈ 9 ತಂಡಗಳ ಬಗ್ಗೆ ನಾವು ನಿಮಗೆ ಹೇಳಲಿದ್ದೇವೆ.

ಕ್ರಿಕೆಟ್ ಲೋಕದಲ್ಲಿ ಭಾರತ ಹಾಗೂ ಪಾಕಿಸ್ತಾನ ನಡುವಿನ ಪಂದ್ಯಕ್ಕೆ ಅದರದ್ದೇ ಆದ ಇತಿಹಾಸವಿದೆ. ಆದರೆ ಏಕದಿನ ವಿಶ್ವಕಪ್‌ನಲ್ಲಿ ಈ ಸಾಂಪ್ರದಾಯಿಕ ಎದುರಾಳಿಗಳ ಮುಖಾಮುಖಿಯಲ್ಲಿ ಪಾಕ್ ತಂಡ ಒಮ್ಮೆಯೂ ಭಾರತವನ್ನು ಸೋಲಿಸಿಲ್ಲ.

ಇದುವರೆಗೆ ಏಕದಿನ ವಿಶ್ವಕಪ್‌ನಲ್ಲಿ ಭಾರತ ಮತ್ತು ಪಾಕಿಸ್ತಾನ 7 ಬಾರಿ ಮುಖಾಮುಖಿಯಾಗಿದ್ದು, ಪ್ರತಿ ಬಾರಿಯೂ ಭಾರತ ಗೆದ್ದಿದೆ. ಪಾಕಿಸ್ತಾನವನ್ನು ಹೊರತುಪಡಿಸಿ, ವಿಶ್ವಕಪ್‌ನಲ್ಲಿ ಇಲ್ಲಿಯವರೆಗೆ ಭಾರತವನ್ನು ಸೋಲಿಸಲು ಸಾಧ್ಯವಾಗದ ಅನೇಕ ತಂಡಗಳ ಪಟ್ಟಿ ಇಲ್ಲಿದೆ.

ಪಾಕಿಸ್ತಾನ ಹೊರತುಪಡಿಸಿ ಕೀನ್ಯಾ ಕೂಡ ಭಾರತದ ವಿರುದ್ಧ ಏಕದಿನ ವಿಶ್ವಕಪ್‌ನಲ್ಲಿ ಆಡಿದೆ. ಆದರೆ ಈ 4 ಪಂದ್ಯಗಳಲ್ಲೂ ಭಾರತ ಗೆದ್ದಿದೆ.

ಭಾರತ ಹಾಗೂ ಐರ್ಲೆಂಡ್ ಏಕದಿನ ವಿಶ್ವಕಪ್‌ನಲ್ಲಿ ಇದುವರೆಗೆ 2 ಪಂದ್ಯಗಳನ್ನು ಆಡಿದ್ದು, ಈ ಎರಡಲ್ಲೂ ಐರ್ಲೆಂಡ್ ಸೋತಿದೆ.

ನೆದರ್ಲೆಂಡ್ಸ್ ಕೂಡ ಭಾರತದ ವಿರುದ್ಧ 2 ವಿಶ್ವಕಪ್ ಪಂದ್ಯಗಳನ್ನು ಆಡಿದ್ದು, ಈ ಎರಡೂ ಪಂದ್ಯಗಳಲ್ಲೂ ಸೋತಿದೆ.

ವಿಶ್ವಕಪ್‌ನಲ್ಲಿ ಒಮ್ಮೆ ಮಾತ್ರ ಯುಎಇ ತಂಡವನ್ನು ಎದುರಿಸಿರುವ ಭಾರತ, ಆ ಪಂದ್ಯದಲ್ಲಿ ಸುಲಭ ಗೆಲುವು ಸಾಧಿಸಿದೆ.

ಏಕದಿನ ವಿಶ್ವಕಪ್‌ನಲ್ಲಿ ಭಾರತ- ನಮೀಬಿಯಾ ಒಮ್ಮೆ ಮಾತ್ರ ಮುಖಾಮುಖಿಯಾಗಿದ್ದು, ಈ ಪಂದ್ಯದಲ್ಲಿ ಭಾರತ ಗೆಲುವು ಸಾಧಿಸಿದೆ.

ಅಫ್ಘಾನಿಸ್ತಾನ ಕೂಡ ಭಾರತವನ್ನು ಒಮ್ಮೆ ಮಾತ್ರ ವಿಶ್ವಕಪ್‌ನಲ್ಲಿ ಎದುರಿಸಿದ್ದು, ಈ ಪಂದ್ಯದಲ್ಲಿ ಸೋಲುಂಡಿದೆ.

ಏಕದಿನ ವಿಶ್ವಕಪ್‌ನಲ್ಲಿ ಒಮ್ಮೆ ಮಾತ್ರ ಬರ್ಮುಡಾ ತಂಡವನ್ನು ಎದುರಿಸಿರುವ ಭಾರತ ಆ ಪಂದ್ಯದಲ್ಲಿ ದಾಖಲೆಯ ಗೆಲುವು ಸಾಧಿಸಿದೆ.

ಇದಲ್ಲದೆ ಭಾರತ ಹಾಗೂ ಪೂರ್ವ ಆಫ್ರಿಕಾ ತಂಡ ಒಮ್ಮೆ ಮಾತ್ರ ಏಕದಿನ ವಿಶ್ವಕಪ್‌ನಲ್ಲಿ ಮುಖಾಮುಖಿಯಾಗಿದ್ದು, ಆ ಪಂದ್ಯದಲ್ಲಿ ಭಾರತ ಗೆಲುವು ದಾಖಲಿಸಿತ್ತು.




