IND vs AUS: ರೋಹಿತ್ ಬದಲಿಯಾಗಿ ಬಂದವನ್ನೂ ಫೇಲ್; ಆರಂಭಿಕನಾಗಿ ರಾಹುಲ್ ಕೂಡ ವಿಫಲ

IND vs AUS: ಸಿಡ್ನಿಯಲ್ಲಿ ನಡೆಯುತ್ತಿರುವ ಬಾರ್ಡರ್-ಗವಾಸ್ಕರ್ ಟ್ರೋಫಿಯ ಐದನೇ ಟೆಸ್ಟ್ ಪಂದ್ಯದಿಂದ ರೋಹಿತ್ ಶರ್ಮಾ ಅವರನ್ನು ಕೈಬಿಡಲಾಗಿದೆ. ಇತ್ತ ರನ್ ಬರದಿಂದ ಬಳಲುತ್ತಿರುವ ರೋಹಿತ್ ಅವರ ಬದಲಿಯಾಗಿ ಬಂದಿದ್ದ ಶುಭ್ಮನ್ ಗಿಲ್ ಕೂಡ ನಿರಾಶೆ ಮೂಡಿಸಿದ್ದಾರೆ. ಕೆ.ಎಲ್. ರಾಹುಲ್ ಕೂಡ ಒಂದಂಕಿಗೆ ಸುಸ್ತಾಗಿದ್ದಾರೆ. ರೋಹಿತ್ ಅವರನ್ನು ಹೊರಗಿಟ್ಟಿದ್ದರಿಂದ ತಂಡಕ್ಕೆ ಯಾವುದೇ ಪ್ರಯೋಜನವಾಗಿಲ್ಲ ಎಂಬುದು ಸ್ಪಷ್ಟವಾಗಿದೆ.

ಪೃಥ್ವಿಶಂಕರ
|

Updated on:Jan 03, 2025 | 9:09 AM

ಟೀಂ ಇಂಡಿಯಾದ ನಿಯಮಿತ ನಾಯಕ ರೋಹಿತ್ ಶರ್ಮಾ ಸಿಡ್ನಿಯಲ್ಲಿ ನಡೆಯುತ್ತಿರುವ ಬಾರ್ಡರ್-ಗವಾಸ್ಕರ್ ಟ್ರೋಫಿಯ ಐದನೇ ಟೆಸ್ಟ್ ಪಂದ್ಯದಲ್ಲಿ ಆಡುತ್ತಿಲ್ಲ. ಪಂದ್ಯದ ಆರಂಭಕ್ಕೆ ಒಂದು ದಿನ ಮೊದಲೇ ಪ್ಲೇಯಿಂಗ್ ಇಲೆವೆನ್‌ ಬಗ್ಗೆ ಮಾತನಾಡಿದ್ದ ಮುಖ್ಯ ಕೋಚ್ ಗೌತಮ್ ಗಂಭೀರ್, ರೋಹಿತ್ ಆಡುವ ಬಗ್ಗೆ ಅಡ್ಡಗೋಡೆಯ ಮೇಲೆ ದೀಪವಿಟ್ಟಿದ್ದರು. ಇದೀಗ ಐದನೇ ಟೆಸ್ಟ್​ನಿಂದ ರೋಹಿತ್‌ನನ್ನು ಹೊರಗಿಟ್ಟಿರುವುದು ಖಚಿತವಾಗಿದೆ.

1 / 6
ವಾಸ್ತವವಾಗಿ ಟೆಸ್ಟ್ ಮಾದರಿಯಲ್ಲಿ ಹಲವು ದಿನಗಳಿಂದ ರನ್ ಬರ ಎದುರಿಸುತ್ತಿರುವ ರೋಹಿತ್​, ಆಸ್ಟ್ರೇಲಿಯಾ ಪ್ರವಾದಲ್ಲೂ ಫಾರ್ಮ್​ ಕಂಡುಕೊಳ್ಳುವಲ್ಲಿ ವಿಫಲರಾಗಿದ್ದಾರೆ. ಹೀಗಾಗಿ ಅವರನ್ನು ತಂಡದಿಂದ ಕೈಬಿಡಬೇಕು ಎಂಬುದು ಹಲವರ ಅಭಿಪ್ರಾಯವಾಗಿತ್ತು. ಅದರಂತೆ ಇದೀಗ ಅವರನ್ನು ತಂಡದಿಂದ ಕೈಬಿಟ್ಟು ಬೇರೆಯವರಿಗೆ ಅವಕಾಶ ಕೊಡಲಾಗಿದೆ.

2 / 6
ಆದರೆ ರೋಹಿತ್ ಬದಲಿಯಾಗಿ ತಂಡ ಸೇರಿಕೊಂಡಿರುವ ಶುಭ್​ಮನ್ ಗಿಲ್ ಕೂಡ ಐದನೇ ಟೆಸ್ಟ್ ಪಂದ್ಯದಲ್ಲಿ ಯಾವುದೇ ಪ್ರಭಾವ ಬೀರಲು ಸಾಧ್ಯವಾಗಿಲ್ಲ. ಇತ್ತ ರೋಹಿತ್ ಶರ್ಮಾ ಅನುಪಸ್ಥಿತಿಯಲ್ಲಿ ಮತ್ತೆ ಆರಂಭಿಕನಾಗಿ ಕಣಕ್ಕಿಳಿದಿದ್ದ ಕೆಎಲ್ ರಾಹುಲ್​ಗೂ ಕೂಡ ಒಂದಂಕಿ ದಾಟಲು ಸಾಧ್ಯವಾಗಲಿಲ್ಲ. ಇದರರ್ಥ ರೋಹಿತ್​ರನ್ನು ಹೊರಗಿಟ್ಟು ಬೇರೆಯವರನ್ನು ಆಡಿಸಿದರೂ ಯಾವುದೇ ವ್ಯತ್ಯಾಸವಾಗಿಲ್ಲ.

3 / 6
ಐದನೇ ಟೆಸ್ಟ್​ನಿಂದ ರೋಹಿತ್ ಅವರನ್ನು ಹೊರಗಿಟ್ಟಿದ್ದರಿಂದ ಕೆಎಲ್ ರಾಹುಲ್​ಗೆ ಮತ್ತೆ ಆರಂಭಿಕ ಜವಬ್ದಾರಿಯನ್ನು ನೀಡಲಾಯಿತು. ಆದರೆ ಈ ಹಿಂದೆ ಆರಂಭಿಕನಾಗಿ ಯಶಸ್ವಿಯಾಗಿದ್ದ ರಾಹುಲ್, ಈ ಪಂದ್ಯದಲ್ಲಿ ಕೇವಲ 4 ರನ್​ಗಳಿಗೆ ಸುಸ್ತಾದರು. ಅಂದರೆ ರೋಹಿತ್ ಪ್ರದರ್ಶನವನ್ನೇ ಇಲ್ಲಿ ರಾಹುಲ್ ಕೂಡ ಮತ್ತೊಮ್ಮೆ ಪುನರಾವರ್ತಿಸದರು ಎಂದರೆ ತಪ್ಪಾಗಲಾರದು.

4 / 6
ಹಾಗೆಯೇ ರೋಹಿತ್ ಅವರನ್ನು ತಂಡದಿಂದ ಕೈಬಿಟ್ಟ ಕಾರಣ ಕೊನೆಯ ಟೆಸ್ಟ್​ನ ಆಡುವ ಹನ್ನೊಂದರ ಬಳಗಕ್ಕೆ ಆಯ್ಕೆಯಾಗಿದ್ದ ಶುಭ್​ಮನ್ ಗಿಲ್ ಕೂಡ ಬಿಗ್ ಇನ್ನಿಂಗ್ಸ್ ಆಡುವಲ್ಲಿ ವಿಫಲರಾಗಿದ್ದಾರೆ. ಮೂರನೇ ಕ್ರಮಾಂಕದಲ್ಲಿ ಬ್ಯಾಟಿಂಗ್​ಗೆ ಬಂದ ಗಿಲ್ ತಮ್ಮ ಇನ್ನಿಂಗ್ಸ್​ನಲ್ಲಿ 64 ಎಸೆತಗಳನ್ನು ಎದುರಿಸಿ 20 ರನ್ ಗಳಿಸಲಷ್ಟೇ ಶಕ್ತರಾದರು. ಅಂದರೆ ರೋಹಿತ್ ಬದಲಿಯಾಗಿ ಬಂದ ಗಿಲ್ ಕೂಡ ತಂಡದ ನಂಬಿಕೆಯನ್ನು ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಲಿಲ್ಲ.

5 / 6
ಇನ್ನು ಪಂದ್ಯದ ಬಗ್ಗೆ ಹೇಳುವುದಾದರೆ.. ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡುತ್ತಿರುವ ಟೀಂ ಇಂಡಿಯಾ ಮೂರಂಕಿ ದಾಟುವುದಕ್ಕೂ ಮುನ್ನವೇ ಪ್ರಮುಖ 4 ವಿಕೆಟ್​ಗಳನ್ನು ಕಳೆದುಕೊಂಡಿದೆ. ಮೊದಲ ನಾಲ್ವರು ಆಟಗಾರರು ಪೆವಿಲಿಯನ್ ಸೇರಿಕೊಂಡಿದ್ದಾರೆ. ಅನುಭವಿ ವಿರಾಟ್ ಕೊಹ್ಲಿ ಕೂಡ ಅಭಿಮಾನಿಗಳಿಗೆ ನಿರಾಸೆ ಮೂಡಿಸಿದ್ದಾರೆ.

6 / 6

Published On - 9:08 am, Fri, 3 January 25

Follow us