India vs Australia 2nd Test: ಕೆಎಲ್ ರಾಹುಲ್ಗೆ ಸಿಗುತ್ತಾ ಚಾನ್ಸ್? ಇಲ್ಲಿದೆ ಮಾಹಿತಿ
TV9 Web | Updated By: ಝಾಹಿರ್ ಯೂಸುಫ್
Updated on:
Feb 14, 2023 | 8:30 PM
India vs Australia 2nd Test: ಮೊದಲ ಟೆಸ್ಟ್ ಪಂದ್ಯದಲ್ಲಿ 20 ರನ್ಗಳಿಸಿ ಔಟಾಗುತ್ತಿದ್ದಂತೆ ಕೆಎಲ್ಆರ್ ಅವರ ಆಯ್ಕೆ ಬಗ್ಗೆ ಪ್ರಶ್ನೆಗಳೆದಿದ್ದವು. ಹೀಗಾಗಿ ಅವರನ್ನು 2ನೇ ಪಂದ್ಯದಿಂದ ಕೈ ಬಿಡಲಾಗುತ್ತೆ ಎನ್ನಲಾಗಿತ್ತು.
1 / 7
ಭಾರತ-ಆಸ್ಟ್ರೇಲಿಯಾ ನಡುವಣ 2ನೇ ಟೆಸ್ಟ್ ಪಂದ್ಯಕ್ಕೆ ದೆಹಲಿಯ ಅರುಣ್ ಜೇಟ್ಲಿ ಸ್ಟೇಡಿಯಂ ಸಜ್ಜಾಗಿದೆ. ಫೆಬ್ರವರಿ 17 ರಿಂದ ಶುರುವಾಗಲಿರುವ ಈ ಪಂದ್ಯದಲ್ಲಿ ಟೀಮ್ ಇಂಡಿಯಾ ಪರ ಶುಭ್ಮನ್ ಗಿಲ್ಗೆ ಅವಕಾಶ ಸಿಗುವ ಸಾಧ್ಯತೆಯಿಲ್ಲ. ಬದಲಾಗಿ ಆರಂಭಿಕರಾಗಿ ಕೆಎಲ್ ರಾಹುಲ್ ಮುಂದುವರೆಯಲಿದ್ದಾರೆ ಎಂಬುದನ್ನು ಬಿಸಿಸಿಐ ಅಧಿಕಾರಿಯೊಬ್ಬರು ಖಚಿತಪಡಿಸಿದ್ದಾರೆ.
2 / 7
ನಾಗ್ಪುರದಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ ಕೆಎಲ್ ರಾಹುಲ್ ಕೇವಲ 20 ರನ್ಗಳಿಸಿ ಔಟಾಗಿದ್ದರು. ಇತ್ತ ಕಳೆದ 5 ಟೆಸ್ಟ್ ಇನಿಂಗ್ಸ್ನಲ್ಲೂ ಕನ್ನಡಿಗನ ಗರಿಷ್ಠ ಸ್ಕೋರ್ 23 ದಾಟಿಲ್ಲ. ಮತ್ತೊಂದೆಡೆ ಕೆಎಲ್ ರಾಹುಲ್ಗೆ ಅವಕಾಶ ನೀಡಿದ ಕಾರಣ ಇನ್ಫಾರ್ಮ್ ಆಟಗಾರ ಶುಭ್ಮನ್ ಗಿಲ್ ಹೊರಗುಳಿಯಬೇಕಾಯಿತು. ಮೊದಲ ಟೆಸ್ಟ್ ಪಂದ್ಯದಲ್ಲಿ 20 ರನ್ಗಳಿಸಿ ಔಟಾಗುತ್ತಿದ್ದಂತೆ ಕೆಎಲ್ಆರ್ ಅವರ ಆಯ್ಕೆ ಬಗ್ಗೆ ಪ್ರಶ್ನೆಗಳೆದಿದ್ದವು. ಹೀಗಾಗಿ ಅವರನ್ನು 2ನೇ ಪಂದ್ಯದಿಂದ ಕೈ ಬಿಡಲಾಗುತ್ತೆ ಎನ್ನಲಾಗಿತ್ತು.
3 / 7
ಈ ಬಗ್ಗೆ ಮಾಹಿತಿ ನೀಡಿರುವ ಬಿಸಿಸಿಐ ಅಧಿಕಾರಿಯೊಬ್ಬರು, ರಾಹುಲ್ ಅವರ ಸಾಮರ್ಥ್ಯದ ಬಗ್ಗೆ ನಾಯಕ ರೋಹಿತ್ ಶರ್ಮಾ ಹಾಗೂ ಕೋಚ್ ರಾಹುಲ್ ದ್ರಾವಿಡ್ಗೆ ಸಂಪೂರ್ಣ ವಿಶ್ವಾಸವಿದೆ. ಎಲ್ಲರೂ ಎದುರಿಸುವಂತಹ ಕೆಟ್ಟ ಫಾರ್ಮ್ ಅವರನ್ನೂ ಕಾಡುತ್ತಿದೆ. ಈ ಹಿಂದೆ ವಿರಾಟ್ ಕೊಹ್ಲಿ ಕೂಡ ಇಂತಹದೊಂದು ಪರಿಸ್ಥಿತಿಯನ್ನು ಎದುರಿಸಿದ್ದರು. ಆ ಬಳಿಕ ಅವರು ಕಂಬ್ಯಾಕ್ ಮಾಡಿದ್ದರು. ಅದೇ ರೀತಿ ರಾಹುಲ್ ಬಗ್ಗೆ ಸಹ ಎಲ್ಲರೂ ತಾಳ್ಮೆಯಿಂದಿರಬೇಕು ಎಂದು ತಿಳಿಸಿದ್ದಾರೆ.
4 / 7
ಏಕೆಂದರೆ ಕೆಎಲ್ ರಾಹುಲ್ ಕ್ಲಾಸಿ ಆಟಗಾರ. ಅವರು ಖಂಡಿತವಾಗಿಯೂ ಪುಟಿದೇಳುತ್ತಾರೆ. ಇದೇ ವಿಶ್ವಾಸದಲ್ಲಿ 2ನೇ ಟೆಸ್ಟ್ ಪಂದ್ಯದಲ್ಲೂ ಕೆಎಲ್ ರಾಹುಲ್ ಅವರಿಗೆ ಅವಕಾಶ ನೀಡಲು ನಿರ್ಧರಿಸಲಾಗಿದೆ. ಅದರಂತೆ ದೆಹಲಿ ಟೆಸ್ಟ್ನಲ್ಲಿ ಅವರಿಗೆ ಸ್ಥಾನ ಸಿಗಲಿದೆ ಎಂದು ಬಿಸಿಸಿಐನ ಹಿರಿಯ ಅಧಿಕಾರಿಯೊಬ್ಬರು ಇನ್ಸೈಡ್‌ಸ್ಪೋರ್ಟ್‌ಗೆ ತಿಳಿಸಿದ್ದಾರೆ.
5 / 7
ಇದಕ್ಕೂ ಮುನ್ನ ಟೀಮ್ ಇಂಡಿಯಾದ ಮಾಜಿ ಆಟಗಾರ ಸುನಿಲ್ ಗವಾಸ್ಕರ್ ಕೂಡ ಕೆಎಲ್ ರಾಹುಲ್ ಅವರಿಗೆ ಮತ್ತೊಂದು ಅವಕಾಶ ನೀಡಬೇಕೆಂದು ವಾದ ಮುಂದಿಟ್ಟಿದ್ದರು. ದೆಹಲಿ ಟೆಸ್ಟ್ನಲ್ಲಿ ಚಾನ್ಸ್ ನೀಡಿದ ಬಳಿಕ ಅವರನ್ನು ಕೈ ಬಿಡಬೇಕೇ ಎಂಬುದನ್ನು ತೀರ್ಮಾನ ಮಾಡಬೇಕು. ಕೇವಲ ಒಂದು ಇನಿಂಗ್ಸ್ನ ಆಧಾರದ ಮೇಲೆ ಅವರ ಸಾಮರ್ಥ್ಯವನ್ನು ಅಳೆಯುವುದು ತಪ್ಪು ಎಂದು ಗವಾಸ್ಕರ್ ಹೇಳಿದ್ದರು.
6 / 7
ಇದೀಗ ಬಿಸಿಸಿಐ ಮೂಲಗಳ ಮಾಹಿತಿ ಪ್ರಕಾರ, ಕೆಎಲ್ ರಾಹುಲ್ ಅವರ ಬೆಂಬಲಕ್ಕೆ ಟೀಮ್ ಇಂಡಿಯಾ ನಾಯಕ ಹಾಗೂ ಕೋಚ್ ನಿಂತಿದ್ದಾರೆ. ಹೀಗಾಗಿ ಫೆಬ್ರವರಿ 17 ರಿಂದ ಶುರುವಾಗಲಿರುವ 2ನೇ ಟೆಸ್ಟ್ ಪಂದ್ಯದಲ್ಲಿ ಕೆಎಲ್ ರಾಹುಲ್ಗೆ ಅವಕಾಶ ಸಿಗಲಿದೆ ಎಂದೇ ಹೇಳಬಹುದು.
7 / 7
ಭಾರತ ಟೆಸ್ಟ್ ತಂಡ: ರೋಹಿತ್ ಶರ್ಮಾ (ನಾಯಕ), ಕೆಎಲ್ ರಾಹುಲ್ (ಉಪ ನಾಯಕ), ಶುಭ್ಮನ್ ಗಿಲ್, ಚೇತೇಶ್ವರ ಪೂಜಾರ, ವಿರಾಟ್ ಕೊಹ್ಲಿ, ಕೆಎಸ್ ಭರತ್ (ವಿಕೆಟ್ ಕೀಪರ್), ಇಶಾನ್ ಕಿಶನ್ (ವಿಕೆಟ್ ಕೀಪರ್), ರವಿಚಂದ್ರನ್ ಅಶ್ವಿನ್, ಅಕ್ಷರ್ ಪಟೇಲ್, ಕುಲ್ದೀಪ್ ಯಾದವ್, ರವೀಂದ್ರ ಜಡೇಜಾ, ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್, ಉಮೇಶ್ ಯಾದವ್, ಜಯದೇವ್ ಉನದ್ಕತ್, ಸೂರ್ಯಕುಮಾರ್ ಯಾದವ್, ಶ್ರೇಯಸ್ ಅಯ್ಯರ್.