900 vs 265: ಅನುಭವಿಗಳ ಮುಂದೆ ಟೀಮ್ ಇಂಡಿಯಾದ ಅನಾನುಭವಿಗಳು

India vs Australia: ಆಸ್ಟ್ರೇಲಿಯಾದಲ್ಲಿ ಸರಣಿ ಗೆಲ್ಲಬೇಕಿದ್ದರೆ ವೇಗದ ಬೌಲರ್​ಗಳು ಮಿಂಚಲೇಬೇಕು. ಏಕೆಂದರೆ ಕಾಂಗರೂ ನಾಡಿನಲ್ಲಿ ವೇಗಿಗಳಿಗೆ ಸಹಕಾರಿಯಾಗುವಂತಹ ಪಿಚ್​ಗಳನ್ನು ನಿರ್ಮಿಸಲಾಗುತ್ತದೆ. ಆದರೀಗ ಭಾರತ ತಂಡದಲ್ಲಿ ನುರಿತ ವೇಗಿಗಳು ಇಲ್ಲದಿರುವುದು ಹೊಸ ಚಿಂತೆಗೆ ಕಾರಣವಾಗಿದೆ.

ಝಾಹಿರ್ ಯೂಸುಫ್
|

Updated on: Nov 18, 2024 | 10:53 AM

ಭಾರತ ಮತ್ತು ಆಸ್ಟ್ರೇಲಿಯಾ ನಡುವಣ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಗೆ ವೇದಿಕೆ ಸಿದ್ಧವಾಗಿದೆ. ನವೆಂಬರ್ 22 ರಿಂದ ಶುರುವಾಗಲಿರುವ ಈ ಸರಣಿಯ ಮೊದಲ ಪಂದ್ಯಕ್ಕೆ ಪರ್ತ್​ನ​ ಒಪ್ಟಸ್ ಸ್ಟೇಡಿಯಂ ಆತಿಥ್ಯವಹಿಸಲಿದೆ. ಈ ಸರಣಿಯನ್ನು ಗೆಲ್ಲಲು ಟೀಮ್ ಇಂಡಿಯಾದ ವೇಗಾಸ್ತ್ರವನ್ನು ಪ್ರಯೋಗಿಸಲೇಬೇಕು. ಆದರೆ ಪ್ರಸ್ತುತ ತಂಡದಲ್ಲಿ ಅನಾನುಭವಿಗಳೇ ತುಂಬಿರುವುದು ಟೀಮ್ ಇಂಡಿಯಾದ ಹೊಸ ಚಿಂತೆಗೆ ಕಾರಣವಾಗಿದೆ.

1 / 5
ಈ ಬಾರಿಯ ಸರಣಿಗೆ ಬಿಸಿಸಿಐ ಆಯ್ಕೆ ಸಮಿತಿ 6 ವೇಗಿಗಳನ್ನು ಆಯ್ಕೆ ಮಾಡಿದೆ. ಈ ವೇಗಿಗಳಲ್ಲಿ ಜಸ್​ಪ್ರೀತ್ ಬುಮ್ರಾ ಅವರನ್ನು ಹೊರತುಪಡಿಸಿ ಯಾವುದೇ ಬೌಲರ್ 100 ವಿಕೆಟ್​ಗಳನ್ನು ಕಬಳಿಸಿಲ್ಲ ಎಂಬುದು ಉಲ್ಲೇಖಾರ್ಹ. ಅದರಲ್ಲೂ ಇಬ್ಬರು ವೇಗಿಗಳಿಗೆ ಇದು ಚೊಚ್ಚಲ ಟೆಸ್ಟ್ ಸರಣಿ.

2 / 5
ಇಲ್ಲಿ ಟೀಮ್ ಇಂಡಿಯಾ ಪರ ಅನುಭವಿ ಬೌಲರ್ ಆಗಿ ಜಸ್​ಪ್ರೀತ್ ಬುಮ್ರಾ ಕಾಣಿಸಿಕೊಂಡಿದ್ದಾರೆ. ಬುಮ್ರಾ 173 ಟೆಸ್ಟ್ ವಿಕೆಟ್ ಹೊಂದಿದ್ದರೆ, ಮೊಹಮ್ಮದ್ ಸಿರಾಜ್ 80 ವಿಕೆಟ್​ಗಳೊಂದಿಗೆ ಎರಡನೇ ಸ್ಥಾನದಲ್ಲಿದ್ದಾರೆ. ಇನ್ನುಳಿದಂತೆ ಆಕಾಶ್ ದೀಪ್ (10), ಪ್ರಸಿದ್ಧ್ ಕೃಷ್ಣ (2), ಹರ್ಷಿತ್ ರಾಣಾ (0) ಮತ್ತು ನಿತೀಶ್ ಕುಮಾರ್ ರೆಡ್ಡಿ (0) ಇದ್ದಾರೆ. ಅಂದರೆ ಭಾರತೀಯ ವೇಗಿಗಳ ಒಟ್ಟು ವಿಕೆಟ್​ಗಳ ಸಂಖ್ಯೆ 265 ಮಾತ್ರ.

3 / 5
ಅದೇ ಆಸ್ಟ್ರೇಲಿಯಾ ತಂಡದಲ್ಲಿರುವ ವೇಗಿಗಳು ಜೊತೆಗೂಡಿ ಈವರೆಗೆ 900 ವಿಕೆಟ್​ಗಳನ್ನು ಕಬಳಿಸಿದ್ದಾರೆ. ಇಲ್ಲಿ ಮಿಚೆಲ್ ಸ್ಟಾರ್ಕ್​ 358 ಟೆಸ್ಟ್ ವಿಕೆಟ್​ಗಳನ್ನು ಹೊಂದಿದ್ದು, ಜೋಶ್ ಹ್ಯಾಝಲ್​ವುಡ್ 273 ವಿಕೆಟ್​ಗಳನ್ನು ಕಬಳಿಸಿದ್ದಾರೆ. ಹಾಗೆಯೇ ನಾಯಕ ಪ್ಯಾಟ್ ಕಮಿನ್ಸ್ 269 ವಿಕೆಟ್​ಗಳನ್ನು ಹೊಂದಿದ್ದಾರೆ.

4 / 5
ಅಂದರೆ ಇಲ್ಲಿ ವಿಕೆಟ್​ಗಳ ಸಂಖ್ಯೆಯಲ್ಲಿ ಹಾಗೂ ಅನುಭವದಲ್ಲಿ ಆಸ್ಟ್ರೇಲಿಯಾ ವೇಗಿಗಳಿಗೆ ಸರಿಸಾಟಿಯಾಗಿ ಭಾರತದ ಯಾವುದೇ ಬೌಲರ್ ಇಲ್ಲ. ಅಲ್ಲದೆ ಜಸ್​ಪ್ರೀತ್ ಬುಮ್ರಾ ಅವರನ್ನು ಹೊರತುಪಡಿಸಿ ಭಾರತವು ನುರಿತ ಅನುಭವಿ ಬೌಲರ್ ಅನ್ನು ಸಹ ಹೊಂದಿಲ್ಲ. ಹೀಗಾಗಿಯೇ ಬಾರ್ಡರ್ ಗವಾಸ್ಕರ್ ಟೆಸ್ಟ್ ಸರಣಿಯನ್ನು ಇದೀಗ ಅನುಭವಿ ವೇಗಿಗಳು vs ಅನಾನುಭವಿ ವೇಗಿಗಳ ನಡುವಣ ಕದನ ಎಂದು ಬಿಂಬಿಸಲಾಗುತ್ತಿದೆ. ಈ ಕದನದಲ್ಲಿ ಗೆಲ್ಲೋರು ಯಾರು ಎಂಬುದೇ ಈಗ ಕುತೂಹಲ.

5 / 5
Follow us
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ

ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?

ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್

ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್

ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ

ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್

ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ

ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್

ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್

ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ