Ollie Pope: ಡಬಲ್ ಸೆಂಚುರಿ ಜಸ್ಟ್ ಮಿಸ್: ಆದ್ರೂ ಭರ್ಜರಿ ದಾಖಲೆ ಬರೆದ ಒಲೀ ಪೋಪ್

| Updated By: ಝಾಹಿರ್ ಯೂಸುಫ್

Updated on: Jan 30, 2024 | 12:15 PM

India vs England 1st Test: ಹೈದರಾಬಾದ್​ನ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಭಾರತದ ವಿರುದ್ಧದ ಮೊದಲ ಟೆಸ್ಟ್ ಪಂದ್ಯದ ದ್ವಿತೀಯ ಇನಿಂಗ್ಸ್​ನಲ್ಲಿ ಇಂಗ್ಲೆಂಡ್ ಬ್ಯಾಟರ್ ಒಲೀ ಪೋಪ್ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದ್ದಾರೆ.

1 / 8
India vs England 1st Test: ಹೈದರಾಬಾದ್​ನಲ್ಲಿ ನಡೆಯುತ್ತಿರುವ ಭಾರತದ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಒಲೀ ಪೋಪ್ (Ollie Pope) ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದ್ದಾರೆ. ರಾಜೀವ್ ಗಾಂಧಿ ಇಂಟರ್​​ನ್ಯಾಷನಲ್​ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಈ ಪಂದ್ಯದ ದ್ವಿತೀಯ ಇನಿಂಗ್ಸ್​ನಲ್ಲಿ ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಪೋಪ್ ಜವಾಬ್ದಾರಿಯುತ ಬ್ಯಾಟಿಂಗ್ ಪ್ರದರ್ಶಿಸಿದ್ದರು.

2 / 8
163 ರನ್​ಗಳಿಗೆ 5 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ್ದ ಇಂಗ್ಲೆಂಡ್ ತಂಡಕ್ಕೆ ಆಸರೆಯಾಗಿ ನಿಂತ ಪೋಪ್ 3ನೇ ದಿನದಾಟದಲ್ಲಿ 154 ಎಸೆತಗಳಲ್ಲಿ ಶತಕ ಪೂರೈಸಿದರು. ಇನ್ನು ನಾಲ್ಕನೇ ದಿನದಾಟದಲ್ಲಿ ಎಚ್ಚರಿಕೆಯ ಬ್ಯಾಟಿಂಗ್​ಗೆ ಒತ್ತು ನೀಡಿದ ಒಲೀ ಪೋಪ್ 278 ಎಸೆತಗಳಲ್ಲಿ 196 ರನ್ ಬಾರಿಸಿ ವಿಕೆಟ್ ಒಪ್ಪಿಸಿದರು.

3 / 8
ಕೇವಲ 4 ರನ್​ಗಳಿಂದ ದ್ವಿಶತಕ ವಂಚಿತರಾದರೂ ಈ ಪಂದ್ಯದ ಮೂಲಕ ಒಲೀ ಪೋಪ್ ಹಲವು ದಾಖಲೆಗಳನ್ನು ತಮ್ಮದಾಗಿಸಿಕೊಂಡಿದ್ದಾರೆ. ಅದು ಕೂಡ ಟೆಸ್ಟ್ ಸ್ಪೆಷಲಿಸ್ಟ್ ಇಂಗ್ಲೆಂಡ್​ನ ಅಲಿಸ್ಟರ್ ಕುಕ್ ಅವರ ದಾಖಲೆಯನ್ನು ಮುರಿಯುವ ಮೂಲಕ ಎಂಬುದು ವಿಶೇಷ.

4 / 8
ಈ ಪಂದ್ಯದಲ್ಲಿ 196 ರನ್​ ಬಾರಿಸುವುದರೊಂದಿಗೆ ಭಾರತದಲ್ಲಿ ಟೀಮ್ ಇಂಡಿಯಾ ವಿರುದ್ಧ ಟೆಸ್ಟ್ ಕ್ರಿಕೆಟ್​ನಲ್ಲಿ 2ನೇ ಇನಿಂಗ್ಸ್​ನಲ್ಲಿ ಅತ್ಯಧಿಕ ವೈಯುಕ್ತಿಕ ಸ್ಕೋರ್​ಗಳಿಸಿದ ಇಂಗ್ಲೆಂಡ್ ಬ್ಯಾಟರ್ ಎಂಬ ದಾಖಲೆ ಒಲೀ ಪೋಪ್ ಪಾಲಾಯಿತು. ಇದಕ್ಕೂ ಮುನ್ನ ಈ ದಾಖಲೆ ಕುಕ್ ಹೆಸರಿನಲ್ಲಿತ್ತು.

5 / 8
2012 ರಲ್ಲಿ ಅಹಮದಾಬಾದ್​ನಲ್ಲಿ ನಡೆದ ಟೀಮ್ ಇಂಡಿಯಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದ 2ನೇ ಇನಿಂಗ್ಸ್​ನಲ್ಲಿ ಇಂಗ್ಲೆಂಡ್ ಆರಂಭಿಕ ಬ್ಯಾಟರ್ ಅಲಿಸ್ಟರ್ ಕುಕ್ 176 ರನ್ ಬಾರಿಸಿದ್ದು ಇದುವರೆಗಿನ ದಾಖಲೆಯಾಗಿತ್ತು. ಇದೀಗ ಈ ದಾಖಲೆಯನ್ನು ಒಲೀ ಪೋಪ್ ಮುರಿದಿದ್ದಾರೆ.

6 / 8
ಹಾಗೆಯೇ ಆತಿಥೇಯ ಭಾರತ ತಂಡದ ವಿರುದ್ಧ ಟೆಸ್ಟ್ ಕ್ರಿಕೆಟ್​ನಲ್ಲಿ 2ನೇ ಇನಿಂಗ್ಸ್​ನಲ್ಲಿ ಅತ್ಯಧಿಕ ರನ್ ಕಲೆಹಾಕಿದ ವಿಶ್ವದ ನಾಲ್ಕನೇ ಬ್ಯಾಟರ್ ಎಂಬ ಹೆಗ್ಗಳಿಕೆಗೂ ಒಲೀ ಪೋಪ್ ಪಾತ್ರರಾಗಿದ್ದಾರೆ. ಈ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವುದು ಝಿಂಬಾಬ್ವೆ ಆ್ಯಂಡಿ ಫ್ಲವರ್ ಎಂಬುದು ವಿಶೇಷ.

7 / 8
2000 ರಲ್ಲಿ ನಾಗ್ಪುರದಲ್ಲಿ ನಡೆದ ಭಾರತದ ವಿರುದ್ಧದ ಟೆಸ್ಟ್ ಪಂದ್ಯದ 2ನೇ ಇನಿಂಗ್ಸ್​ನಲ್ಲಿ ಝಿಂಬಾಬ್ವೆ ತಂಡದ ಆ್ಯಂಡಿ ಫ್ಲವರ್ 232 ರನ್​ಗಳ ಅಜೇಯ ಇನಿಂಗ್ಸ್ ಆಡಿದ್ದರು. ಈ ಮೂಲಕ ಆತಿಥೇಯ ಭಾರತದ ವಿರುದ್ಧದ ಟೆಸ್ಟ್​ನ 2ನೇ ಇನಿಂಗ್ಸ್​ನಲ್ಲಿ ಅತ್ಯಧಿಕ ರನ್ ಬಾರಿಸಿದ ಬ್ಯಾಟರ್ ಎಂಬ ದಾಖಲೆಯನ್ನು ಆ್ಯಂಡಿ ಫ್ಲವರ್ ನಿರ್ಮಿಸಿದ್ದಾರೆ.

8 / 8
ಆ್ಯಂಡಿ ಫ್ಲವರ್ (232) ಅಲ್ಲದೆ, ಬ್ರೆಂಡನ್ ಮೆಕಲಂ (225) ಹಾಗೂ ಗ್ಯಾರಿ ಸೋಬರ್ಸ್​ (198) ಭಾರತದಲ್ಲಿ ದ್ವಿತೀಯ ಇನಿಂಗ್ಸ್​ನಲ್ಲಿ ಭರ್ಜರಿ ಪ್ರದರ್ಶನ ನೀಡಿದ್ದಾರೆ. ಇದೀಗ 196 ರನ್ ಬಾರಿಸುವ ಮೂಲಕ ಒಲೀ ಪೋಪ್ ಆತಿಥೇಯ ಭಾರತ ವಿರುದ್ಧ ಟೆಸ್ಟ್​ ​ನಲ್ಲಿ ದ್ವಿತೀಯ ಇನಿಂಗ್ಸ್​ನಲ್ಲಿ ಅತ್ಯಧಿಕ ರನ್ ಕಲೆಹಾಕಿದ ವಿಶ್ವದ ನಾಲ್ಕನೇ ಬ್ಯಾಟರ್ ಎನಿಸಿಕೊಂಡಿದ್ದಾರೆ.

Published On - 12:31 pm, Sun, 28 January 24