Team India: 112 ವರ್ಷಗಳ ಐತಿಹಾಸಿಕ ದಾಖಲೆ ಸರಿಗಟ್ಟಿದ ಟೀಮ್ ಇಂಡಿಯಾ

| Updated By: ಝಾಹಿರ್ ಯೂಸುಫ್

Updated on: Mar 09, 2024 | 3:18 PM

India vs England Test: ಭಾರತ ಮತ್ತು ಇಂಗ್ಲೆಂಡ್ ನಡುವಣ ಟೆಸ್ಟ್ ಸರಣಿ ಮುಕ್ತಾಯಗೊಂಡಿದೆ. ಐದು ಪಂದ್ಯಗಳ ಈ ಸರಣಿಯ ಮೊದಲ ಪಂದ್ಯದಲ್ಲಿ ಇಂಗ್ಲೆಂಡ್ ಗೆದ್ದರೆ, ಉಳಿದ ನಾಲ್ಕು ಮ್ಯಾಚ್​ಗಳಲ್ಲಿ ಟೀಮ್ ಇಂಡಿಯಾ ಬ್ಯಾಕ್ ಟು ಬ್ಯಾಕ್ ಗೆಲುವು ದಾಖಲಿಸಿದೆ. ಈ ಮೂಲಕ 112 ವರ್ಷಗಳ ಹಳೆಯ ದಾಖಲೆಯನ್ನು ಭಾರತ ತಂಡ ಸರಿಗಟ್ಟಿದೆ.

1 / 5
ಧರ್ಮಶಾಲಾದಲ್ಲಿ ನಡೆದ ಇಂಗ್ಲೆಂಡ್ (England) ವಿರುದ್ಧದ 5ನೇ ಟೆಸ್ಟ್ ಪಂದ್ಯದಲ್ಲಿ ಟೀಮ್ ಇಂಡಿಯಾ (Team India) ಜಯಭೇರಿ ಬಾರಿಸಿದೆ. ಈ ಗೆಲುವಿನೊಂದಿಗೆ ಐದು ಪಂದ್ಯಗಳ ಸರಣಿಯನ್ನು ಭಾರತ ತಂಡ 4-1 ಅಂತರದಿಂದ ಗೆದ್ದುಕೊಂಡಿದೆ. ಈ ಭರ್ಜರಿ ಗೆಲುವಿನೊಂದಿಗೆ ಟೀಮ್ ಇಂಡಿಯಾ ಐತಿಹಾಸಿಕ ದಾಖಲೆಯೊಂದನ್ನು ನಿರ್ಮಿಸಿರುವುದು ವಿಶೇಷ.

2 / 5
ಹೌದು, ಟೆಸ್ಟ್ ಕ್ರಿಕೆಟ್​ನಲ್ಲಿ ಮೊದಲ ಪಂದ್ಯವನ್ನು ಸೋತು, ಆ ಬಳಿಕ 4-1 ಅಂತರದಿಂದ ಸರಣಿ ಗೆದ್ದ ವಿಶೇಷ ದಾಖಲೆಯೊಂದು ಟೀಮ್ ಇಂಡಿಯಾ ಪಾಲಾಗಿದೆ. ಇದಕ್ಕೂ ಮುನ್ನ ಟೆಸ್ಟ್​ ಕ್ರಿಕೆಟ್​ ಇತಿಹಾಸದಲ್ಲಿ ಇಂತಹದೊಂದು ಅಪರೂಪದ ಫಲಿತಾಂಶದ ದಾಖಲೆ ನಿರ್ಮಾಣವಾಗಿದ್ದು ಕೇವಲ 3 ಬಾರಿ ಮಾತ್ರ.

3 / 5
1897-98 ಮತ್ತು 1901-02 ರಲ್ಲಿ ಇಂಗ್ಲೆಂಡ್ ವಿರುದ್ಧ ಮೊದಲ ಟೆಸ್ಟ್ ಪಂದ್ಯವನ್ನು ಸೋತು ಆಸ್ಟ್ರೇಲಿಯಾ ಆ ಬಳಿಕ 4-1 ಅಂತರದಿಂದ 2 ಬಾರಿ ಸರಣಿ ಗೆದ್ದಿತ್ತು. ಇದಾದ ಬಳಿಕ 1912 ರಲ್ಲಿ ಇಂಗ್ಲೆಂಡ್ ತಂಡ ಇಂತಹದೊಂದು ಸಾಧನೆ ಮಾಡಿತ್ತು.

4 / 5
ಇದೀಗ ಬರೋಬ್ಬರಿ 112 ವರ್ಷಗಳ ಬಳಿಕ ಟೀಮ್ ಇಂಡಿಯಾ 4-1 ಅಂತರದಿಂದ ಇಂಗ್ಲೆಂಡ್ ತಂಡವನ್ನು ಬಗ್ಗು ಬಡಿದು ಐತಿಹಾಸಿಕ ಗೆಲುವು ದಾಖಲಿಸಿದೆ. ಈ ಮೂಲಕ ಮೊದಲ ಪಂದ್ಯವನ್ನು ಸೋತು, 4-1 ಅಂತರದಿಂದ ಸರಣಿ ಗೆದ್ದ ವಿಶ್ವದ ಮೂರನೇ ತಂಡ ಎಂಬ ಹೆಗ್ಗಳಿಕೆಗೆ ಟೀಮ್ ಇಂಡಿಯಾ ಪಾತ್ರವಾಗಿದೆ.

5 / 5
ವಿಶೇಷ ಎಂದರೆ ಟೀಮ್ ಇಂಡಿಯಾ ಇಂತಹದೊಂದು ಅಪರೂಪದ ದಾಖಲೆ ಬರೆದಿರುವುದು ಪ್ರಮುಖ ಆಟಗಾರರ ಅನುಪಸ್ಥಿತಿಯಲ್ಲಿ ಎಂಬುದು ಇಲ್ಲಿ ಉಲ್ಲೇಖಾರ್ಹ. ವಿರಾಟ್ ಕೊಹ್ಲಿ, ಮೊಹಮ್ಮದ್ ಶಮಿ, ಕೆಎಲ್ ರಾಹುಲ್ (ಮೊದಲ ಪಂದ್ಯ ಆಡಿದ್ದರು), ಅಜಿಂಕ್ಯ ರಹಾನೆ, ಚೇತೇಶ್ವರ ಪೂಜಾರ ಅವರಂತಹ ಸ್ಟಾರ್ ಆಟಗಾರರಿಲ್ಲದೆ, ಭಾರತ ತಂಡವು ಬಲಿಷ್ಠ ಇಂಗ್ಲೆಂಡ್ ತಂಡವನ್ನು 4-1 ಅಂತರದಿಂದ ಮಣಿಸಿದೆ. ಈ ಮೂಲಕ ಈ ಶತಮಾನದ ಅಭೂತಪೂರ್ವ ಗೆಲುವು ದಾಖಲಿಸಿ ಹೊಸ ಇತಿಹಾಸ ನಿರ್ಮಿಸಿರುವುದು ವಿಶೇಷ.

Published On - 3:09 pm, Sat, 9 March 24