- Kannada News Photo gallery Cricket photos IND vs NED, ICC World Cup 2023 Shreyas Iyer hits maiden World Cup Hundred
Breaking: ಏಕದಿನ ವಿಶ್ವಕಪ್ನಲ್ಲಿ ಚೊಚ್ಚಲ ಶತಕ ಸಿಡಿಸಿದ ಶ್ರೇಯಸ್ ಅಯ್ಯರ್..!
Shreyas Iyer Century: ಬೆಂಗಳೂರಿನ ಎಂ ಚಿನ್ನಸ್ವಾಮಿ ಮೈದಾನದಲ್ಲಿ ನಡೆಯುತ್ತಿರುವ ನೆದರ್ಲೆಂಡ್ಸ್ ವಿಶ್ವಕಪ್ನ ಕೊನೆಯ ಲೀಗ್ ಪಂದ್ಯದಲ್ಲಿ ಟೀಂ ಇಂಡಿಯಾದ ಮಧ್ಯಮ ಕ್ರಮಾಂದಕ ಬ್ಯಾಟರ್ ಶ್ರೇಯಸ್ ಅಯ್ಯರ್ ಏಕದಿನ ವಿಶ್ವಕಪ್ನಲ್ಲಿ ತಮ್ಮ ಚೊಚ್ಚಲ ಶತಕ ಸಿಡಿಸಿ ಮಿಂಚಿದ್ದಾರೆ.
Updated on:Nov 12, 2023 | 6:32 PM

ಬೆಂಗಳೂರಿನ ಎಂ ಚಿನ್ನಸ್ವಾಮಿ ಮೈದಾನದಲ್ಲಿ ನಡೆಯುತ್ತಿರುವ ನೆದರ್ಲೆಂಡ್ಸ್ ವಿಶ್ವಕಪ್ನ ಕೊನೆಯ ಲೀಗ್ ಪಂದ್ಯದಲ್ಲಿ ಟೀಂ ಇಂಡಿಯಾದ ಮಧ್ಯಮ ಕ್ರಮಾಂದಕ ಬ್ಯಾಟರ್ ಶ್ರೇಯಸ್ ಅಯ್ಯರ್ ಏಕದಿನ ವಿಶ್ವಕಪ್ನಲ್ಲಿ ತಮ್ಮ ಚೊಚ್ಚಲ ಶತಕ ಸಿಡಿಸಿ ಮಿಂಚಿದ್ದಾರೆ.

ತಮ್ಮ ಇನ್ನಿಂಗ್ಸ್ನಲ್ಲಿ 94 ಎಸೆತಗಳನ್ನು ಎದುರಿಸಿದ ಶ್ರೇಯಸ್ ಅಯ್ಯರ್ 10 ಬೌಂಡರಿ ಹಾಗೂ 5 ಭರ್ಜರಿ ಸಿಕ್ಸರ್ಗಳ ಸಹಿತ ಅಜೇಯ 128 ರನ್ ಚಚ್ಚಿದರು.

ಇದು ಈ ಮೆಗಾ ಈವೆಂಟ್‌ನಲ್ಲಿ ಅಯ್ಯರ್ ಅವರ ಮೂರನೇ ಸತತ 50ಪ್ಲಸ್ ಸ್ಕೋರ್ ಆಗಿದೆ. ಭಾರತ 129 ರನ್ಗಳಿಗೆ 2 ವಿಕೆಟ್ ಕಳೆದುಕೊಂಡಿದ್ದಾಗ ಬ್ಯಾಟಿಂಗ್ಗೆ ಬಂದ ಅಯ್ಯರ್, ವಿರಾಟ್ ಕೊಹ್ಲಿ ಅವರೊಂದಿಗೆ 71 ರನ್‌ಗಳ ಜೊತೆಯಾಟವನ್ನು ಹಂಚಿಕೊಂಡರು.

ಇದುವರೆಗೆ 56 ಏಕದಿನ ಪಂದ್ಯಗಳನ್ನಾಡಿರುವ ಅಯ್ಯರ್, 47 ಪ್ಲಸ್ ಸರಾಸರಿಯಲ್ಲಿ 2,190 ರನ್ ಗಳಿಸಿದ್ದಾರೆ. ಇದು ಅಯ್ಯರ್ ಅವರ ನಾಲ್ಕನೇ ಏಕದಿನ ಶತಕವಾಗಿದ್ದು, ಈ ಮಾದರಿಯಲ್ಲಿ ಅವರು 17 ಅರ್ಧಶತಕಗಳನ್ನು ಸಿಡಿಸಿದ್ದಾರೆ.

ಒಟ್ಟಾರೆಯಾಗಿ ಈ ಏಕದಿನ ವಿಶ್ವಕಪ್ನಲ್ಲಿ ನಾಲ್ಕನೇ 50ಪ್ಲಸ್ ಸ್ಕೋರ್ ದಾಖಲಿಸಿರುವ ಅಯ್ಯರ್, ಈಗ ಈವೆಂಟ್‌ನಲ್ಲಿ 55 ಕ್ಕಿಂತ ಹೆಚ್ಚು ಸರಾಸರಿಯಲ್ಲಿ 380 ರನ್‌ಗಳ ಗಡಿ ದಾಟಿದ್ದಾರೆ.

ವಿಶ್ವಕಪ್ನ ಚೊಚ್ಚಲ ಶತಕ ಸಿಡಿಸಿದ ಅಯ್ಯರ್ ಅತಿವೇಗವಾಗಿ 2,000 ಏಕದಿನ ರನ್ ದಾಖಲಿಸಿದ 3ನೇ ಭಾರತೀಯ ಎನಿಸಿಕೊಂಡಿದ್ದಾರೆ. ಅಯ್ಯರ್ 54 ಏಕದಿನ ಪಂದ್ಯಗಳ 49 ಇನ್ನಿಂಗ್ಸ್‌ಗಳಲ್ಲಿ ಈ ಸಾಧನೆ ಮಾಡಿದ್ದಾರೆ.

ಈ ಹಿಂದೆ ಶುಭ್ಮನ್ ಗಿಲ್ (38 ಇನ್ನಿಂಗ್ಸ್) ಮತ್ತು ಶಿಖರ್ ಧವನ್ (48 ಇನ್ನಿಂಗ್ಸ್) ಭಾರತದ ಪರ ವೇಗವಾಗಿ 2000 ಏಕದಿನ ರನ್ ಪೂರೈಸಿದ್ದ ಮೈಲಿಗಲ್ಲನ್ನು ಸಾಧಿಸಿದ್ದರು.

ಇದೆಲ್ಲದರ ಜೊತೆಗೆ ಶ್ರೇಯಸ್ ಅಯ್ಯರ್ ಏಕದಿನ ಮಾದರಿಯಲ್ಲಿ ನೆದರ್ಲೆಂಡ್ಸ್ ತಂಡದ ವಿರುದ್ಧ ಶತಕ ಗಳಿಸಿದ ಮೊದಲ ಭಾರತೀಯ ಬ್ಯಾಟರ್ ಎನಿಸಿಕೊಂಡರು.
Published On - 5:37 pm, Sun, 12 November 23
























