AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸುಳ್ಳು ಹೇಳಿ ಇಶಾನ್ ಕಿಶನ್​ರನ್ನು ತಂಡದಿಂದ ಹೊರಗಿಟ್ರಾ ಗೌತಮ್ ಗಂಭೀರ್

India vs New Zealand: ಭಾರತದ ವಿರುದ್ಧದ 4ನೇ ಟಿ20 ಪಂದ್ಯದಲ್ಲಿ  ಮೊದಲು ಬ್ಯಾಟ್ ಮಾಡಿದ ನ್ಯೂಝಿಲೆಂಡ್ ತಂಡ 20 ಓವರ್​ಗಳಲ್ಲಿ ಕಲೆಹಾಕಿದ್ದು ಬರೋಬ್ಬರಿ 215 ರನ್​ಗಳು. ಈ ಗುರಿಯನ್ನು ಬೆನ್ನತ್ತಿದ ಟೀಮ್ ಇಂಡಿಯಾ ಕೇವಲ 165 ರನ್​ಗಳಿಸಿ ಆಲೌಟ್ ಆಗಿ 50 ರನ್​ಗಳಿಂದ ಸೋಲೊಪ್ಪಿಕೊಂಡಿತು. ಈ ಪಂದ್ಯದಲ್ಲಿ ಟೀಮ್ ಇಂಡಿಯಾ ಪರ ಇಶಾನ್ ಕಿಶನ್ ಕಣಕ್ಕಿಳಿದಿರಲಿಲ್ಲ.

ಝಾಹಿರ್ ಯೂಸುಫ್
|

Updated on: Jan 29, 2026 | 9:11 AM

Share
ಭಾರತ ಮತ್ತು ನ್ಯೂಝಿಲೆಂಡ್ ನಡುವಣ 4ನೇ ಟಿ20 ಪಂದ್ಯದಲ್ಲಿ ಇಶಾನ್ ಕಿಶನ್ (Ishan Kishan) ಕಣಕ್ಕಿಳಿದಿರಲಿಲ್ಲ. ನಿಗಲ್ ಇಂಜುರಿಯ ಕಾರಣ ಇಶಾನ್ ಇಂದು ಆಡುತ್ತಿಲ್ಲ ಎಂದು ಟೀಮ್ ಇಂಡಿಯಾ ನಾಯಕ ಸೂರ್ಯಕುಮಾರ್ ಯಾದವ್ ಟಾಸ್ ವೇಳೆ ತಿಳಿಸಿದ್ದರು.

1 / 5
ಆದರೆ ಇದೇ ವೇಳೆ ಇಶಾನ್ ಕಿಶನ್ ಮೈದಾನದಲ್ಲಿ ಬ್ಯಾಟ್ ಹಿಡಿದು ನಿಂತಿರುವುದು ವಿಡಿಯೋದಲ್ಲಿ ಸೆರೆಯಾಗಿತ್ತು. ಅಂದರೆ ಈ ಪಂದ್ಯಕ್ಕೂ ಮುನ್ನ ಇಶಾನ್ ಅಭ್ಯಾಸದಲ್ಲಿ ನಿರತರಾಗಿದ್ದದ್ದು ಇದರಿಂದ ಸ್ಪಷ್ಟವಾಗಿತ್ತು. ಇದಾದ ಬಳಿಕ ಹಲವು ಬಾರಿ ಮೈದಾನಕ್ಕೆ ಆಗಮಿಸಿದ್ದರು.

2 / 5
ಅಂದರೆ ಪಂದ್ಯದುದ್ದಕ್ಕೂ ವಾಟರ್ ಬಾಯ್ ಆಗಿ ಮೈದಾನಕ್ಕೆ ಆಗಮಿಸಿದ್ದ ಇಶಾನ್ ಕಿಶನ್ ಯಾವುದೇ ಫಿಟ್​ನೆಸ್ ಸಮಸ್ಯೆ ಇಲ್ಲದಂತೆ ಕಂಡು ಬಂದರು. ಅದರಲ್ಲೂ ಅವರು ವೇಗದಲ್ಲಿ ಓಡುತ್ತಿರುವ ದೃಶ್ಯಗಳು ಕ್ಯಾಮೆರಾದಲ್ಲಿ ಸೆರೆಯಾಗಿತ್ತು. ಹೀಗಾಗಿಯೇ ಇದೀಗ ಇಶಾನ್ ಕಿಶನ್ ಅವರ ಗಾಯದ ಕುರಿತು ಸೋಷಿಯಲ್ ಮೀಡಿಯಾದಲ್ಲಿ ಚರ್ಚೆಯಾಗುತ್ತಿದೆ.

3 / 5
ನಿಗಲ್ ಇಂಜುರಿ ಎಂಬುದು ಸಣ್ಣ ನೋವಿನ ಸಮಸ್ಯೆ. ಕೈ ಕಾಲು ಅಥವಾ ದೇಹದ ಭಾಗದಲ್ಲಿ ಕಾಣಿಸಿಕೊಳ್ಳುವ ಈ ನೋವಿನ ಸಮಸ್ಯೆಯಿದ್ದರೆ ಇಶಾನ್ ಕಿಶನ್ ಅವರಿಗೆ ಸಂಪೂರ್ಣ ವಿಶ್ರಾಂತಿ ನೀಡಬೇಕಿತ್ತು. ಇದರ ಹೊರತಾಗಿ ಅವರನ್ನು ವಾಟರ್ ಬಾಯ್ ಆಗಿ ಬಳಸಿಕೊಂಡಿರುವುದೇಕೆ? ಎಂದು ಅನೇಕರು ಪ್ರಶ್ನಿಸಿದ್ದಾರೆ.

4 / 5
ಒಟ್ಟಿನಲ್ಲಿ ಟೀಮ್ ಇಂಡಿಯಾ ಕೋಚ್​ನ ನಡೆಯು ಇದೀಗ ಚರ್ಚೆಗೆ ಗ್ರಾಸವಾಗಿದ್ದು, ಅದರಲ್ಲೂ ಗೌತಮ್ ಗಂಭೀರ್ ಸುಳ್ಳು ಹೇಳಿ ಅತ್ಯುತ್ತಮ ಫಾರ್ಮ್​ನಲ್ಲಿರುವ ಇಶಾನ್ ಅವರನ್ನು ಆಡುವ ಬಳಗದಿಂದ ಹೊರಗಿಟ್ರಾ ಎಂಬ ಪ್ರಶ್ನೆಯೊಂದು ಹುಟ್ಟಿಕೊಂಡಿದೆ.

5 / 5