IND vs NZ: ತವರಿನಲ್ಲಿ ಸತತ 14ನೇ ಟೆಸ್ಟ್ ಸರಣಿ ಗೆದ್ದ ಭಾರತ! 6 ವರ್ಷಗಳ ಹಿಂದಿನ ಈ ದಾಖಲೆಯೂ ಪುಡಿಪುಡಿ
TV9 Web | Updated By: ಪೃಥ್ವಿಶಂಕರ
Updated on:
Dec 06, 2021 | 11:06 AM
IND vs NZ: ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್ ಸರಣಿಯು ತವರಿನಲ್ಲಿ ಭಾರತ ತಂಡದ ಸತತ 14 ನೇ ಟೆಸ್ಟ್ ಸರಣಿ ಜಯವಾಗಿದೆ. ಭಾರತವು 2013 ರಿಂದ ಇಲ್ಲಿಯವರೆಗಿನ ತನ್ನ ಪಯಣದಲ್ಲಿ ಈ ಎಲ್ಲಾ ವಿಜಯಗಳನ್ನು ಸಾಧಿಸಿದೆ.
1 / 4
ನ್ಯೂಜಿಲೆಂಡ್ ತಂಡವನ್ನು ಸೋಲಿಸಿ ಭಾರತ ಸರಣಿ ವಶಪಡಿಸಿಕೊಂಡಿದ್ದು ಮಾತ್ರವಲ್ಲದೆ ಹಲವು ದಾಖಲೆಗಳನ್ನು ನಾಶಪಡಿಸಿದೆ. ಇದರಲ್ಲಿ ಅವರ ದೊಡ್ಡ ಗೆಲುವಿನ ದಾಖಲೆಯಾದರೆ, ಈ ಮೂಲಕ ಕಳೆದ 8 ವರ್ಷಗಳಿಂದ ತವರು ನೆಲದಲ್ಲಿ ಅವರ ಆಳ್ವಿಕೆ ಹಾಗೇ ಉಳಿದಿದೆ.
2 / 4
ಮುಂಬೈ ಟೆಸ್ಟ್‌ನಲ್ಲಿ ಭಾರತ 372 ರನ್‌ಗಳಿಂದ ನ್ಯೂಜಿಲೆಂಡ್ ಅನ್ನು ಸೋಲಿಸಿತು. ಇದು ರನ್‌ಗಳ ಲೆಕ್ಕದಲ್ಲಿ ಭಾರತದ ಅತಿ ದೊಡ್ಡ ಗೆಲುವಾಗಿದೆ. ಇದಕ್ಕೂ ಮುನ್ನ ದಕ್ಷಿಣ ಆಫ್ರಿಕಾ ವಿರುದ್ಧ ಭಾರತ ರನ್‌ಗಳ ಅತಿ ದೊಡ್ಡ ಗೆಲುವಿನ ದಾಖಲೆಯಾಗಿತ್ತು.
3 / 4
2015 ರಲ್ಲಿ, ದೆಹಲಿಯಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಆಡಿದ ಟೆಸ್ಟ್ ಪಂದ್ಯವನ್ನು ಭಾರತ 337 ರನ್‌ಗಳಿಂದ ಗೆದ್ದುಕೊಂಡಿತು. ಆದರೆ ಇಂದು 6 ವರ್ಷಗಳ ನಂತರ ರನ್‌ಗಳ ಅಂತರದಿಂದ ಗೆದ್ದ ಈ ದೊಡ್ಡ ದಾಖಲೆಯನ್ನು ಇಂದು ಮುರಿದಿದೆ.
4 / 4
ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್ ಸರಣಿಯು ತವರಿನಲ್ಲಿ ಭಾರತ ತಂಡದ ಸತತ 14 ನೇ ಟೆಸ್ಟ್ ಸರಣಿ ಜಯವಾಗಿದೆ. ಭಾರತವು 2013 ರಿಂದ ಇಲ್ಲಿಯವರೆಗಿನ ತನ್ನ ಪಯಣದಲ್ಲಿ ಈ ಎಲ್ಲಾ ವಿಜಯಗಳನ್ನು ಸಾಧಿಸಿದೆ. ಭಾರತ 2013ರಿಂದ ತವರಿನಲ್ಲಿ ಟೆಸ್ಟ್ ಸರಣಿ ಸೋತಿಲ್ಲ.