IND Vs SA: ಟಿ20 ಕ್ರಿಕೆಟ್​ನಲ್ಲಿ ದಾಖಲೆ ಬರೆದ ರೋಹಿತ್; ಧೋನಿ- ಕೊಹ್ಲಿಯನ್ನು ಹಿಂದಿಕ್ಕಿದ ಹಿಟ್​ಮ್ಯಾನ್.!

| Updated By: ಪೃಥ್ವಿಶಂಕರ

Updated on: Oct 02, 2022 | 9:25 PM

IND Vs SA: ಕ್ರಿಕೆಟ್ ಮೈದಾನದಲ್ಲಿ ಮತ್ತೊಂದು ಹೊಸ ದಾಖಲೆ ಬರೆದಿರುವ ರೋಹಿತ್ 400 ಟಿ20 ಪಂದ್ಯಗಳನ್ನು ಆಡಿದ ಮೊದಲ ಭಾರತೀಯ ಮತ್ತು ವಿಶ್ವದ ಒಂಬತ್ತನೇ ಕ್ರಿಕೆಟಿಗ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

1 / 5
ಗುವಾಹಟಿಯಲ್ಲಿ ನಡೆಯುತ್ತಿರುವ ಭಾರತ- ದಕ್ಷಿಣ ಆಫ್ರಿಕಾ 2ನೇ ಟಿ20 ಪಂದ್ಯದಲ್ಲಿ ನಾಯಕ ರೋಹಿತ್ ಶರ್ಮಾ ಇತಿಹಾಸ ಸೃಷ್ಟಿಸಿದ್ದಾರೆ. ಕ್ರಿಕೆಟ್ ಮೈದಾನದಲ್ಲಿ ಮತ್ತೊಂದು ಹೊಸ ದಾಖಲೆ ಬರೆದಿರುವ ರೋಹಿತ್ 400 ಟಿ20 ಪಂದ್ಯಗಳನ್ನು ಆಡಿದ ಮೊದಲ ಭಾರತೀಯ ಮತ್ತು ವಿಶ್ವದ ಒಂಬತ್ತನೇ ಕ್ರಿಕೆಟಿಗ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

2 / 5
ವೆಸ್ಟ್ ಇಂಡೀಸ್ ಆಟಗಾರ ಕೀರಾನ್ ಪೊಲಾರ್ಡ್ ವಿಶ್ವದಲ್ಲಿ ಅತಿ ಹೆಚ್ಚು ಟಿ20 ಪಂದ್ಯಗಳನ್ನು ಆಡಿದ ದಾಖಲೆ ಹೊಂದಿದ್ದು, ಅವರು ಇದುವರೆಗೆ 614 ಪಂದ್ಯಗಳನ್ನು ಆಡಿದ್ದಾರೆ. ಅವರ ನಂತರ ಡ್ವೇನ್ ಬ್ರಾವೊ (556), ಶೋಯೆಬ್ ಮಲಿಕ್ (481), ಕ್ರಿಸ್ ಗೇಲ್ (463), ಸುನಿಲ್ ನರೈನ್ (435), ರವಿ ಬೋಪ್ರಾ (429), ಆಂಡ್ರೆ ರಸೆಲ್ (428) ಮತ್ತು ಡೇವಿಡ್ ಮಿಲ್ಲರ್ (402) ಇದ್ದಾರೆ.

3 / 5
ಓಪನರ್ ರೋಹಿತ್ ಪುರುಷರ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಟಿ20 ಅಂತರಾಷ್ಟ್ರೀಯ ಪಂದ್ಯಗಳನ್ನು ಆಡಿದ ದಾಖಲೆಯನ್ನು ಹೊಂದಿದ್ದು, ರೋಹಿತ್ ಇದುವರೆಗೆ 140 ಟಿ20 ಪಂದ್ಯಗಳನ್ನು ಆಡಿದ್ದಾರೆ.

4 / 5
ರೋಹಿತ್ ಶರ್ಮಾ, ದಿನೇಶ್ ಕಾರ್ತಿಕ್ ಮತ್ತು ಎಂಎಸ್ ಧೋನಿ ಮಾತ್ರ ಟಿ20ಯಲ್ಲಿ 350ಕ್ಕೂ ಹೆಚ್ಚು ಪಂದ್ಯಗಳನ್ನು ಆಡಿರುವ ಭಾರತೀಯ ಕ್ರಿಕೆಟಿಗರಾಗಿದ್ದಾರೆ. 2007ರ ವಿಶ್ವಕಪ್‌ನಿಂದ ರೋಹಿತ್ ಟಿ20 ಪಂದ್ಯಗಳನ್ನು ಆಡುತ್ತಿದ್ದಾರೆ.

5 / 5
ಇನ್ನು ಈ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಭಾರತ 20 ಓವರ್‌ಗಳಲ್ಲಿ ಮೂರು ವಿಕೆಟ್‌ಗಳ ನಷ್ಟಕ್ಕೆ 237 ರನ್‌ಗಳ ಬೃಹತ್ ಮೊತ್ತವನ್ನು ಗಳಿಸಿದೆ. ಇದು ದಕ್ಷಿಣ ಆಫ್ರಿಕಾ ವಿರುದ್ಧ ಟಿ20ಯಲ್ಲಿ ಗರಿಷ್ಠ ಸ್ಕೋರ್ ಆಗಿದೆ.

Published On - 9:25 pm, Sun, 2 October 22