- Kannada News Photo gallery Cricket photos ind vs sl Virat Kohli fan enters ground touches feet gets photo Suryakumar Yadav click picture
IND vs SL: ಮೈದಾನಕ್ಕೆ ನುಗ್ಗಿ ಕೊಹ್ಲಿಯ ಕಾಲು ಹಿಡಿದ ಯುವಕ; ಎಲ್ಲರ ಹೃದಯ ಗೆದ್ದ ಸೂರ್ಯ; ಫೋಟೋ ನೋಡಿ
Virat Kohli: ಈ ಯುವಕ ಕೊಹ್ಲಿಯನ್ನು ಭೇಟಿ ಮಾಡಿದ್ದು ಮಾತ್ರವಲ್ಲದೆ, ಅವರೊಂದಿಗೆ ಫೋಟೋ ತೆಗೆದುಕೊಳ್ಳುವ ಅವಕಾಶವನ್ನು ಗಿಟ್ಟಿಸಿಕೊಂಡಿದ್ದಾನೆ
Updated on:Jan 16, 2023 | 10:46 AM

ಜನವರಿ 15 ಭಾನುವಾರ ವಿರಾಟ್ ಕೊಹ್ಲಿಗೆ ವಿಶೇಷ ದಿನವಾಗಿತ್ತು. ತಿರುವನಂತಪುರದಲ್ಲಿ ನಡೆದ ಶ್ರೀಲಂಕಾ ವಿರುದ್ಧದ ಮೂರನೇ ಮತ್ತು ಕೊನೆಯ ಏಕದಿನ ಪಂದ್ಯದಲ್ಲಿ ಕೊಹ್ಲಿ 166 ರನ್‌ಗಳ ಸ್ಮರಣೀಯ ಇನ್ನಿಂಗ್ಸ್ ಆಡಿದ್ದರು. ಆದರೆ ಈ ದಿನ ಹಲವು ಅಭಿಮಾನಿಗಳಿಗೆ ಕೊಹ್ಲಿಗಿಂತ ವಿಶೇಷವಾಗಿತ್ತು. ತನ್ನ ನೆಚ್ಚಿನ ಆಟಗಾರ ಮೈದಾನದಲ್ಲಿ ಅಬ್ಬರಿಸುವುದನ್ನು ನೋಡಿ ಕಣ್ತುಂಬಿಕೊಳ್ಳುವ ಅವಕಾಶವನ್ನು ಸಾವಿರಾರು ಅಭಿಮಾನಿಗಳು ಪಡೆದರು. ಈ ಪೈಕಿ ಒಬ್ಬ ಅಭಿಮಾನಿಗೆ ಮಾತ್ರ ಕೊಹ್ಲಿಯೊಂದಿಗೆ ಸೆಲ್ಫಿ ತೆಗೆದುಕೊಳ್ಳುವ ಅದೃಷ್ಟ ಖುಲಾಯಿಸಿದೆ.

ಶ್ರೀಲಂಕಾ ವಿರುದ್ಧ ಭಾರತ 317 ರನ್‌ಗಳ ಜಯ ಸಾಧಿಸಿದ ಬಳಿಕ ಕೊಹ್ಲಿ ಸೇರಿದಂತೆ ಹಲವು ಭಾರತೀಯ ಆಟಗಾರರು ಮೈದಾನದಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಯುವಕನೊಬ್ಬ ಮೈದಾನಕ್ಕೆ ಓಡಿ ಬಂದಿದ್ದಾನೆ.

ವಿರಾಟ್ ಕೊಹ್ಲಿಯ ಹುಚ್ಚು ಅಭಿಮಾನಿಯಾಗಿದ್ದ ಆತ ನೇರವಾಗಿ ಕೊಹ್ಲಿ ಬಳಿಗೆ ಹೋಗಿ ಅವರ ಪಾದಗಳನ್ನು ಮುಟ್ಟಲು ಯತ್ನಿಸಿದ್ದಾನೆ.

ಬಳಿಕ ಈ ಯುವಕ ಕೊಹ್ಲಿಯನ್ನು ಭೇಟಿ ಮಾಡಿದ್ದು ಮಾತ್ರವಲ್ಲದೆ, ಕೊಹ್ಲಿಯೊಂದಿಗೆ ಫೋಟೋ ತೆಗೆದುಕೊಳ್ಳುವ ಅವಕಾಶವನ್ನು ಗಿಟ್ಟಿಸಿಕೊಂಡಿದ್ದಾನೆ

ಕೊಹ್ಲಿ ಕೂಡ ಆತನನ್ನು ನಿರಾಸೆಗೊಳಿಸದೆ ಫೋಟೋಗೆ ಪೋಸ್ ಕೊಟ್ಟಿದ್ದಾರೆ. ಈ ನಡುವೆ ಸೂರ್ಯಕುಮಾರ್ ಯಾದವ್ ತಮ್ಮ ಸರಳತೆಯಿಂದ ಎಲ್ಲರ ಹೃದಯ ಗೆಲ್ಲುವಲ್ಲಿ ಯಶಸ್ವಿಯಾದರು. ಸ್ವತಃ ಸೂರ್ಯ, ಕೊಹ್ಲಿ ಬಳಿಗೆ ಹೋಗಿ ಕೊಹ್ಲಿಯೊಂದಿಗೆ ಆ ಯುವ ಅಭಿಮಾನಿಯ ಫೋಟೋವನ್ನು ಕ್ಲಿಕ್ ಮಾಡಿದ್ದಾರೆ.
Published On - 10:46 am, Mon, 16 January 23




