Shubman Gill: ಬಾಬರ್ ಅಜಮ್ ದಾಖಲೆ ಉಡೀಸ್; ಏಕದಿನದಲ್ಲಿ ಶುಭ್​ಮನ್ ಗಿಲ್ ನಂ.1..!

IND vs WI: ಈ ಪಂದ್ಯದಲ್ಲಿ 34 ರನ್‌ ಸಿಡಿಸುತ್ತಿದ್ದಂತೆ ಏಕದಿನದಲ್ಲಿ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಮತ್ತು ಇತರ ಅನುಭವಿ ಆಟಗಾರರು ಮಾಡಲು ಸಾಧ್ಯವಾಗದ ದಾಖಲೆಯನ್ನು ಗಿಲ್ ನಿರ್ಮಿಸಿದರು.

|

Updated on: Jul 30, 2023 | 10:39 AM

ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಅನುಪಸ್ಥಿತಿಯಲ್ಲಿ ಟೀಂ ಇಂಡಿಯಾ ವೆಸ್ಟ್ ಇಂಡೀಸ್ ವಿರುದ್ಧದ ಎರಡನೇ ಏಕದಿನ ಪಂದ್ಯದಲ್ಲಿ ಸೋಲು ಕಂಡಿದೆ. ವಿಂಡೀಸ್ 6 ವಿಕೆಟ್‌ಗಳಿಂದ ಟೀಂ ಇಂಡಿಯಾವನ್ನು ಸೋಲಿಸಿದೆ. ಟೀಂ ಇಂಡಿಯಾವನ್ನು 40.5 ಓವರ್‌ಗಳಲ್ಲಿ 181 ರನ್‌ಗಳಿಗೆ ಸೀಮಿತಗೊಳಿಸಿದ ವಿಂಡೀಸ್, ಆ ಬಳಿಕ 36.4 ಓವರ್‌ಗಳಲ್ಲಿ ಕೇವಲ 4 ವಿಕೆಟ್ ಕಳೆದುಕೊಂಡು ಗೆಲುವಿನ ಸವಾಲನ್ನು ಪೂರ್ಣಗೊಳಿಸಿತು.

1 / 10
ಈ ಗೆಲುವಿನೊಂದಿಗೆ ವಿಂಡೀಸ್ 3 ಪಂದ್ಯಗಳ ಸರಣಿಯಲ್ಲಿ 1-1 ಸಮಬಲ ಸಾಧಿಸಿದೆ. ಉತ್ತಮ ಆರಂಭದ ಬಳಿಕ ಟೀಂ ಇಂಡಿಯಾದ ಬ್ಯಾಟ್ಸ್​ಮನ್​ಗಳು ಕಳಪೆ ಪ್ರದರ್ಶನ ನೀಡಿದ್ದೆ ಸೋಲಿಗೆ ಕಾರಣವಾಯಿತು. ಆರಂಭಿಕ ಜೋಡಿ ಇಶಾನ್ ಕಿಶನ್ ಮತ್ತು ಶುಭ್​ಮನ್ ಗಿಲ್ 90 ರನ್ ಜೊತೆಯಾಟ ತಂಡಕ್ಕೆ ಉತ್ತಮ ಆರಂಭ ನೀಡಿದರೂ ಉಳಿದ ಆಟಗಾರರು ಅದನ್ನು ಮುಂದುವರೆಸಲಿಲ್ಲ.

2 / 10
ಇನ್ನು ಈ ಪಂದ್ಯದಲ್ಲಿ 49 ಎಸೆತಗಳನ್ನು ಎದುರಿಸಿದ ಶುಭ್​ಮನ್ ಗಿಲ್, 5 ಬೌಂಡರಿಗಳ ನೆರವಿನಿಂದ 39 ರನ್ ಕಲೆಹಾಕಿದರು. ಅಲ್ಲದೆ ಇದೇ ಪಂದ್ಯದಲ್ಲಿ 34 ರನ್‌ ಸಿಡಿಸುತ್ತಿದ್ದಂತೆ ಏಕದಿನದಲ್ಲಿ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಮತ್ತು ಇತರ ಅನುಭವಿ ಆಟಗಾರರು ಮಾಡಲು ಸಾಧ್ಯವಾಗದ ದಾಖಲೆಯನ್ನು ಗಿಲ್ ನಿರ್ಮಿಸಿದರು.

3 / 10
ವಾಸ್ತವವಾಗಿ ಏಕದಿನ ಕ್ರಿಕೆಟ್​ನ ಮೊದಲ 26 ಇನ್ನಿಂಗ್ಸ್​ನಲ್ಲಿ ಅತಿ ಹೆಚ್ಚು ರನ್ ಕಲೆಹಾಕಿದ ಬ್ಯಾಟರ್​ಗಳ ಪಟ್ಟಿಯಲ್ಲಿ ಪಾಕಿಸ್ತಾನ ಕ್ರಿಕೆಟ್ ತಂಡದ ನಾಯಕ ಬಾಬರ್ ಅಜಮ್ ಈ ಹಿಂದೆ ಮೊದಲ ಸ್ಥಾನದಲ್ಲಿದ್ದರು. ಆದರೆ ಇದೀಗ ಈ ದಾಖಲೆ ಮುರಿದಿರುವ ಗಿಲ್ ಮೊದಲ ಸ್ಥಾನವನ್ನು ಆಕ್ರಮಿಸಿಕೊಂಡಿದ್ದಾರೆ.

4 / 10
2019 ರಲ್ಲಿ ತಮ್ಮ ಏಕದಿನ ಕ್ರಿಕೆಟ್​ಗೆ ಪಾದಾರ್ಪಣೆ ಮಾಡಿದ ಶುಭ್​ಮನ್ 26 ಇನ್ನಿಂಗ್ಸ್‌ಗಳಲ್ಲಿ 1352 ರನ್ ಕಲೆ ಹಾಕಿದ್ದಾರೆ. 61.45 ಸರಾಸರಿಯಲ್ಲಿ ರನ್​ ಕಲೆಹಾಕಿರುವ ಗಿಲ್ ಖಾತೆಯಲ್ಲಿ 1 ದ್ವಿಶತಕ, 4 ಶತಕ ಮತ್ತು 5 ಅರ್ಧಶತಕಗಳು ಸೇರಿವೆ. ಶುಭ್​ಮನ್​ಗೂ ಮುನ್ನ ಈ ದಾಖಲೆ ಬರೆದಿದ್ದ ಆಟಗಾರರು ಯಾರು ಎಂಬುದನ್ನು ನೋಡುವುದಾದರೆ..

5 / 10
ಶುಭ್​ಮನ್ ಗಿಲ್- 26 ಇನ್ನಿಂಗ್ಸ್, 1352 ರನ್

ಶುಭ್​ಮನ್ ಗಿಲ್- 26 ಇನ್ನಿಂಗ್ಸ್, 1352 ರನ್

6 / 10
ಬಾಬರ್ ಅಜಮ್- 26 ಇನ್ನಿಂಗ್ಸ್, 1322 ರನ್

ಬಾಬರ್ ಅಜಮ್- 26 ಇನ್ನಿಂಗ್ಸ್, 1322 ರನ್

7 / 10
ಜೊನಾಥನ್ ಟ್ರಾಟ್- 26 ಇನ್ನಿಂಗ್ಸ್, 1303 ರನ್

ಜೊನಾಥನ್ ಟ್ರಾಟ್- 26 ಇನ್ನಿಂಗ್ಸ್, 1303 ರನ್

8 / 10
ಫಾಖರ್ ಜಮಾನ್- 26 ಇನ್ನಿಂಗ್ಸ್, 1275 ರನ್

ಫಾಖರ್ ಜಮಾನ್- 26 ಇನ್ನಿಂಗ್ಸ್, 1275 ರನ್

9 / 10
ರಾಸ್ಸೀ ವ್ಯಾನ್ ಡೆರ್ ದುಸ್ಸೆನ್- 26 ಇನ್ನಿಂಗ್ಸ್, 1267 ರನ್

10 / 10
Follow us