Sarfaraz Khan Selection: ಟೀಂ ಇಂಡಿಯಾಕ್ಕೆ ಸರ್ಫರಾಜ್ ಖಾನ್ ಆಯ್ಕೆಯಾಗದಿರಲು ಹೊರಬಿತ್ತು ಕಾರಣ..!

|

Updated on: Jun 26, 2023 | 7:22 AM

Indian Cricket Team: ಕಳೆದ ವಾರ ವೆಸ್ಟ್ ಇಂಡೀಸ್ ಪ್ರವಾಸಕ್ಕಾಗಿ ಭಾರತದ ಟೆಸ್ಟ್ ತಂಡವನ್ನು ಪ್ರಕಟಿಸಿದಾಗ ಸರ್ಫರಾಜ್ ಖಾನ್ ಅವರನ್ನು ಭಾರತ ಟೆಸ್ಟ್ ತಂಡಕ್ಕೆ ಆಯ್ಕೆಯಾಗಿರಲಿಲ್ಲ.

1 / 7
ದೇಶಿ ಕ್ರಿಕೆಟ್‌ನಲ್ಲಿ ನಿರಂತರ ಉತ್ತಮ ಪ್ರದರ್ಶನ ನೀಡಿದರೂ ಟೀಂ ಇಂಡಿಯಾದಲ್ಲಿ ಆಯ್ಕೆಯಾಗದೆ ಸದಾ ಚರ್ಚೆಗೆ ಗ್ರಾಸವಾಗಿದ್ದ ಸರ್ಫರಾಜ್ ಖಾನ್‌ ಏಕೆ ಟೀಂ ಇಂಡಿಯಾಕ್ಕೆ ಆಯ್ಕೆಯಾಗುತ್ತಿಲ್ಲ ಎಂದು ಟೀಂ ಇಂಡಿಯಾ ಅಭಿಮಾನಿಗಳು ಸೇರಿದಂತೆ ಹಲವು ಮಾಜಿ ಕ್ರಿಕೆಟಿಗರು ಕೂಡ ಬಿಸಿಸಿಐ ವಿರುದ್ಧ ಗುಡುಗಿದ್ದರು. ಆದರೆ ಇದೀಗ ಸರ್ಫರಾಜ್ ಖಾನ್ ಯಾವ ಕಾರಣದಿಂದಾಗಿ ಭಾರತ ತಂಡಕ್ಕೆ ಆಯ್ಕೆಯಾಗುತ್ತಿಲ್ಲ ಎಂಬ ಮಾಹಿತಿ ಹೊರಬಿದ್ದಿದೆ.

2 / 7
ಕಳೆದ ವಾರ ವೆಸ್ಟ್ ಇಂಡೀಸ್ ಪ್ರವಾಸಕ್ಕಾಗಿ ಭಾರತದ ಟೆಸ್ಟ್ ತಂಡವನ್ನು ಪ್ರಕಟಿಸಿದಾಗ ಸರ್ಫರಾಜ್ ಖಾನ್ ಅವರನ್ನು ಭಾರತ ಟೆಸ್ಟ್ ತಂಡಕ್ಕೆ ಆಯ್ಕೆಯಾಗಿರಲಿಲ್ಲ. ಸರ್ಫರಾಜ್ ಅವರನ್ನು ತಂಡದಿಂದ ಕೈಬಿಟ್ಟಿದ್ದನ್ನು ಟೀಂ ಇಂಡಿಯಾದ ಮಾಜಿ ಕ್ರಿಕೆಟಿಗರಾದ ಸುನಿಲ್ ಗವಾಸ್ಕರ್, ಆಕಾಶ್ ಚೋಪ್ರಾ, ವಾಸಿಂ ಅಕ್ರಮ್ ಸೇರಿದಂತೆ ಹಲವರು ಆಯ್ಕೆ ಮಂಡಳಿಯನ್ನು ಗುರಿಯಾಗಿಸಿಕೊಂಡು ಆಕ್ರೋಶ ಹೊರ ಹಾಕಿದ್ದರು.

3 / 7
ವಾಸ್ತವವಾಗಿ ಸರ್ಫರಾಜ್ ಕಳೆದ ಮೂರು ರಣಜಿ ಟ್ರೋಫಿ ಸೀಸನ್​ಗಳಲ್ಲಿ ಸ್ಥಿರ ಪ್ರದರ್ಶನ ನೀಡಿದ್ದರೂ ಅವರಿಗೆ ಭಾರತ ತಂಡದಲ್ಲಿ ಅವಕಾಶ ಸಿಗುತ್ತಿಲ್ಲ. ಈ ಬಗ್ಗೆ ಪಿಟಿಐನಲ್ಲಿ ಮಾತನಾಡಿದ ಬಿಸಿಸಿಐ ಅಧಿಕಾರಿಯೊಬ್ಬರು, ಸರ್ಫರಾಜ್ ಅವರನ್ನು ಆಯ್ಕೆ ಮಾಡದಿರುವ ಹಿಂದೆ ಹಲವು ಕಾರಣಗಳಿವೆ. ರಣಜಿಯ ಕಳೆದ ಮೂರು ಸೀಸನ್​​ಗಳಲ್ಲಿ 900 ಪ್ಲಸ್ ರನ್ ಗಳಿಸಿದ ಆಟಗಾರನನ್ನು ಪರಿಗಣಿಸದಿರಲು ಆಯ್ಕೆದಾರರು ಮೂರ್ಖರೇ?.

4 / 7
ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ಬೇಕಾದ ಫಿಟ್ನೆಸ್ ಅವರಲ್ಲಿ ಇಲ್ಲ. ಹೀಗಾಗಿ ಸರ್ಫರಾಜ್ ತನ್ನ ಫಿಟ್ನೆಸ್ ಮೇಲೆ ಕೆಲಸ ಮಾಡಬೇಕು. ಸ್ವಲ್ಪ ತೂಕವನ್ನು ಕಳೆದುಕೊಳ್ಳಬೇಕು ಮತ್ತು ಫಿಟ್ ಆಗಬೇಕು.  ಏಕೆಂದರೆ ಇದು ಕೇವಲ ಬ್ಯಾಟಿಂಗ್ ಫಿಟ್‌ನೆಸ್ ಅಲ್ಲ, ಅದು ಆಯ್ಕೆಯ ಏಕೈಕ ಮಾನದಂಡವಾಗಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.

5 / 7
ಈ ಹಿಂದೆ ಸರ್ಫರಾಜ್ ಖಾನ್ ಎನ್‌ಸಿಎಯಲ್ಲಿದ್ದಾಗ ಯೋಯೋ ಟೆಸ್ಟ್‌ನಲ್ಲಿ ಭಾಗವಹಿಸಿದ್ದರು. ಆ ಟೆಸ್ಟ್​ನಲ್ಲಿ ಸರ್ಫರಾಜ್ ಕೇವಲ 16.5 ಸ್ಕೋರ್ ಗಳಿಸಿದ್ದರು ಎಂದು ಕ್ರಿಕೆಟಿಗನ ಆಪ್ತ ಮೂಲವೊಂದು ತಿಳಿಸಿದೆ. ಇದಲ್ಲದೇ ಮೈದಾನದ ಹೊರಗೆ ಅವರ ವರ್ತನೆಯೂ ಅವರ ಆಯ್ಕೆಗೆ ಅಡ್ಡಿಯಾಗುತ್ತಿದೆ. ಸರ್ಫರಾಜ್ ಅವರ ಮಾತುಗಳು ಮತ್ತು ನಡೆಗಳು ಅನೇಕ ಜನರನ್ನು ಕೆರಳಿಸಿದೆ ಎಂದಿದ್ದಾರೆ.

6 / 7
ವರದಿಯೊಂದರ ಪ್ರಕಾರ, ಈ ವರ್ಷ ರಣಜಿ ಟ್ರೋಫಿಯಲ್ಲಿ ಡೆಲ್ಲಿ ವಿರುದ್ಧ ಶತಕ ಬಾರಿಸಿದ ನಂತರ ಸರ್ಫರಾಜ್ ಸಂಭ್ರಮಿಸಿದ ರೀತಿಯನ್ನು ಆ ವೇಳೆ ದೆಹಲಿ ಸ್ಟೇಡಿಯಂನಲ್ಲಿದ್ದ ಮಾಜಿ ಆಯ್ಕೆ ಸಮಿತಿ ಅಧ್ಯಕ್ಷ ಚೇತನ್ ಶರ್ಮಾ ಇಷ್ಟಪಡಲಿಲ್ಲ. ಕಳೆದ ವರ್ಷ ಮಧ್ಯಪ್ರದೇಶದ ಕೋಚ್ ಚಂದ್ರಕಾಂತ್ ಪಂಡಿತ್ ಕೂಡ ಸರ್ಫರಾಜ್ ವರ್ತನೆಯ ವಿರುದ್ಧ ಅಸಮಾಧಾನಗೊಂಡಿದ್ದರು ಎಂದು ತಿಳಿದುಬಂದಿದೆ.

7 / 7
ಹಾಗೆಯೇ ದೇಶಿ ಕ್ರಿಕೆಟ್​ನಲ್ಲಿ ಸತತವಾಗಿ ಉತ್ತಮ ಪ್ರದರ್ಶನ ನೀಡುತ್ತಿರುವ ಸರ್ಫರಾಜ್ ಕಳೆದ ಕೆಲವು ವರ್ಷಗಳಿಂದ ಐಪಿಎಲ್​ನಲ್ಲಿ ಉತ್ತಮ ಪ್ರದರ್ಶನ ನೀಡುವಲ್ಲಿ ವಿಫಲರಾಗುತ್ತಿದ್ದಾರೆ. ಅಷ್ಟೇ ಅಲ್ಲ ಅವರಿಂದ ಯಾವುದೇ ದೊಡ್ಡ ಇನ್ನಿಂಗ್ಸ್ ಕೂಡ ಆಡಲು ಸಾಧ್ಯವಾಗಲಿಲ್ಲ. ಐಪಿಎಲ್‌ನಲ್ಲಿ ರನ್ ಗಳಿಸಲು ಸರ್ಫರಾಜ್ ಅಸಮರ್ಥತೆ ಮತ್ತು ಶಾರ್ಟ್ ಬಾಲ್ ವಿರುದ್ಧ ಅವರ ದೌರ್ಬಲ್ಯವೇ ಆಯ್ಕೆಯಾಗದಿರಲು ಕಾರಣವೇ ಎಂದು ಬಿಸಿಸಿಐ ಅಧಿಕಾರಿಯನ್ನು ಕೇಳಿದಾಗ? ಇದು ಮಾಧ್ಯಮಗಳು ಸೃಷ್ಟಿಸಿರುವ ಕಥೆ ಎಂಬ ಉತ್ತರವನ್ನು ಬಿಸಿಸಿಐ ಅಧಿಕಾರಿ ನೀಡಿದ್ದಾರೆ.

Published On - 7:19 am, Mon, 26 June 23