ಟೀಮ್ ಇಂಡಿಯಾ ಕಂಡಂತಹ ನಂಬರ್ 1 ಟೆಸ್ಟ್ ಕ್ಯಾಪ್ಟನ್ ಎನಿಸಿಕೊಂಡಿರುವ ವಿರಾಟ್ ಕೊಹ್ಲಿ ನೇತೃತ್ವದಲ್ಲಿ ಭಾರತ ತಂಡವು 66 ಟೆಸ್ಟ್ ಪಂದ್ಯಗಳನ್ನಾಡಿದ್ದು, ಇದರಲ್ಲಿ 39 ಗೆಲುವು ದಾಖಲಿಸಿದ್ದಾರೆ. ಹಾಗೆಯೇ 11 ಪಂದ್ಯಗಳಲ್ಲಿ ಟೀಮ್ ಇಂಡಿಯಾ ಡ್ರಾ ಮಾಡಿಕೊಂಡಿರೆ, 16 ಸೋಲುಗಳನ್ನು ಕಂಡಿದೆ. ಹೀಗಾಗಿ ಈ ಬಾರಿ ಕೊಹ್ಲಿ ಪಡೆ ಹರಿಣರ ನಾಡಿನಿಂದ ಸರಣಿ ಜಯದೊಂದಿಗೆ ಹಿಂತಿರುಗುವುದನ್ನು ನಿರೀಕ್ಷಿಸಬಹುದು.