AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Team India: ಟೀಮ್ ಇಂಡಿಯಾ ಟಿ20 ತಂಡದಿಂದ 9 ಆಟಗಾರರು ಔಟ್..!

India squad for Sri Lanka T20 series 2023: ಈ ವರ್ಷ ನಡೆದ ಟಿ20 ವಿಶ್ವಕಪ್​ ತಂಡದಲ್ಲಿ ಸ್ಥಾನ ಪಡೆದಿದ್ದ 9 ಆಟಗಾರರು ಈ ಬಾರಿ ಟೀಮ್ ಇಂಡಿಯಾದಲ್ಲಿ ಸ್ಥಾನ ಪಡೆದಿಲ್ಲ ಎಂಬುದು ವಿಶೇಷ.

TV9 Web
| Edited By: |

Updated on: Dec 28, 2022 | 8:32 PM

Share
ಶ್ರೀಲಂಕಾ ವಿರುದ್ಧದ ಟಿ20 ಸರಣಿಗಾಗಿ ಟೀಮ್ ಇಂಡಿಯಾವನ್ನು ಪ್ರಕಟಿಸಲಾಗಿದೆ. 16 ಸದಸ್ಯರನ್ನು ಒಳಗೊಂಡಿರುವ ಈ ತಂಡದಲ್ಲಿ ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿ ಕಾಣಿಸಿಕೊಂಡಿಲ್ಲ. ಹಿಟ್​ಮ್ಯಾನ್ ಗಾಯದ ಕಾರಣ ಹೊರಗುಳಿದರೆ, ಕಿಂಗ್ ಕೊಹ್ಲಿ ಈ ಸರಣಿಯ ವೇಳೆ ವಿಶ್ರಾಂತಿ ಪಡೆದಿದ್ದಾರೆ. ಹಾಗೆಯೇ ಈ ಬಾರಿ ಕೆಲ ಆಟಗಾರರನ್ನು ತಂಡದಿಂದ ಕೈ ಬಿಡಲಾಗಿದೆ.

1 / 12
ಅಂದರೆ ಈ ವರ್ಷ ನಡೆದ ಟಿ20 ವಿಶ್ವಕಪ್​ ತಂಡದಲ್ಲಿ ಸ್ಥಾನ ಪಡೆದಿದ್ದ 9 ಆಟಗಾರರು ಈ ಬಾರಿ ಟೀಮ್ ಇಂಡಿಯಾದಲ್ಲಿ ಸ್ಥಾನ ಪಡೆದಿಲ್ಲ ಎಂಬುದು ವಿಶೇಷ. ಹಾಗಿದ್ರೆ ಟಿ20 ವರ್ಲ್ಡ್​ಕಪ್ ಟೀಮ್​ನಲ್ಲಿದ್ದ ಯಾವೆಲ್ಲಾ ಆಟಗಾರರು ತಂಡದಿಂದ ಹೊರಬಿದ್ದಿದ್ದಾರೆ ಎಂದು ನೋಡೋಣ...

2 / 12
ಕೆಎಲ್ ರಾಹುಲ್: ಟೀಮ್ ಇಂಡಿಯಾ ಟಿ20 ತಂಡದ ಉಪನಾಯಕರಾಗಿ ಗುರುತಿಸಿಕೊಂಡಿದ್ದ ಕೆಎಲ್ ರಾಹುಲ್ ಸದ್ಯ ಕಳಪೆ ಫಾರ್ಮ್​ನಲ್ಲಿದ್ದಾರೆ. ಹೀಗಾಗಿ ಅವರನ್ನು ಟಿ20 ತಂಡದಿಂದ ಕೈ ಬಿಡಲಾಗಿದೆ.

3 / 12
ರಿಷಭ್ ಪಂತ್: ಭಾರತ ತಂಡದ ಭವಿಷ್ಯದ ನಾಯಕ ಎಂದೇ ಬಿಂಬಿತರಾಗಿದ್ದ ಯುವ ವಿಕೆಟ್ ಕೀಪರ್ ಬ್ಯಾಟ್ಸ್​ಮನ್ ರಿಷಭ್ ಪಂತ್ ಕೂಡ ಈ ವರ್ಷ ಸತತ ವೈಫಲ್ಯ ಹೊಂದಿದ್ದರು. ಹೀಗಾಗಿ ಪಂತ್ ಅವರನ್ನೂ ಸಹ ಟೀಮ್ ಇಂಡಿಯಾದಿಂದ ಹೊರಗಿಡಲಾಗಿದೆ.

4 / 12
ದಿನೇಶ್ ಕಾರ್ತಿಕ್: ಟಿ20 ವಿಶ್ವಕಪ್​ನಲ್ಲಿ ಟೀಮ್ ಇಂಡಿಯಾದ ವಿಕೆಟ್ ಕೀಪರ್ ಬ್ಯಾಟರ್​ ಆಗಿ ಕಾಣಿಸಿಕೊಂಡಿದ್ದ ದಿನೇಶ್ ಕಾರ್ತಿಕ್ ಅವರನ್ನು ಈ ಬಾರಿ ಆಯ್ಕೆಗೆ ಪರಿಗಣಿಸಲಾಗಿಲ್ಲ. ಇದರೊಂದಿಗೆ ಚುಟುಕು ಕ್ರಿಕೆಟ್​ನಲ್ಲಿ ಡಿಕೆಯ ಯುಗಾಂತ್ಯವಾಗಿದೆ ಎಂದೇ ಹೇಳಬಹುದು.

5 / 12
ರವಿಚಂದ್ರನ್ ಅಶ್ವಿನ್: ಟಿ20 ವಿಶ್ವಕಪ್​ನಲ್ಲಿ ಟೀಮ್ ಇಂಡಿಯಾದ ಹಿರಿಯ ಸ್ಪಿನ್ನರ್ ಆಗಿ ಕಾಣಿಸಿಕೊಂಡಿದ್ದ ಅಶ್ವಿನ್ ಅವರಿಗೂ ಈ ಬಾರಿ ತಂಡದಲ್ಲಿ ಅವಕಾಶ ನೀಡಿಲ್ಲ. ಇದರೊಂದಿಗೆ 36 ವರ್ಷದ ಅಶ್ವಿನ್ ಅವರ ಟಿ20 ಕೆರಿಯರ್ ಬಹುತೇಕ ಅಂತ್ಯವಾಗಿದೆ ಎಂದೇ ಹೇಳಬಹುದು.

6 / 12
ಭುವನೇಶ್ವರ್ ಕುಮಾರ್: ಭಾರತ ತಂಡದ ಸ್ವಿಂಗ್ ಬೌಲರ್ ಭುವನೇಶ್ವರ್ ಕುಮಾರ್ ಟಿ20 ವಿಶ್ವಕಪ್​ ತಂಡದಲ್ಲಿದ್ದರು. ಆದರೆ ಈ ಬಾರಿ ಆಯ್ಕೆ ಮಾಡಲಾದ ಟಿ20 ತಂಡದಲ್ಲಿ ಭುವಿಗೆ ಚಾನ್ಸ್ ನೀಡಿಲ್ಲ ಎಂಬುದು ವಿಶೇಷ.

7 / 12
ಮೊಹಮ್ಮದ್ ಶಮಿ: ಟಿ20 ವಿಶ್ವಕಪ್​ ತಂಡದಲ್ಲಿ ಜಸ್​ಪ್ರೀತ್ ಬುಮ್ರಾ ಬದಲಿಯಾಗಿ ಸ್ಥಾನ ಪಡೆದಿದ್ದ ಮೊಹಮ್ಮದ್ ಶಮಿ ಅವರನ್ನು ಸಹ ಈ ಬಾರಿ ಆಯ್ಕೆಗೆ ಪರಿಗಣಿಸಲಾಗಿಲ್ಲ. ಹೀಗಾಗಿ ಭಾರತ ಟಿ20 ತಂಡದಲ್ಲಿ ಶಮಿ ಅವರ ಕೆರಿಯರ್ ಕೂಡ ಅಂತ್ಯವಾಗಿದೆ ಎಂದೇ ಹೇಳಬಹುದು.

8 / 12
ಮೊಹಮ್ಮದ್ ಸಿರಾಜ್: ಟಿ20 ವಿಶ್ವಕಪ್​ ತಂಡದಲ್ಲಿ ಮೀಸಲು ಆಟಗಾರನಾಗಿ ಆಯ್ಕೆಯಾಗಿದ್ದ ಸಿರಾಜ್ ಶ್ರೀಲಂಕಾ ವಿರುದ್ಧದ ಟಿ20 ಸರಣಿಗೆ ಆಯ್ಕೆಯಾಗಿಲ್ಲ ಎಂಬುದೇ ಅಚ್ಚರಿ.

9 / 12
ರವಿ ಬಿಷ್ಣೋಯ್: ಟಿ20 ವಿಶ್ವಕಪ್ ಟೀಮ್ ಇಂಡಿಯಾದಲ್ಲಿ ಹೆಚ್ಚುವರಿ ಸ್ಪಿನ್ನರ್ ಆಗಿ ಕಾಣಿಸಿಕೊಂಡಿದ್ದ ರವಿ ಬಿಷ್ಣೋಯ್​ಗೂ ಈ ಬಾರಿ ತಂಡದಲ್ಲಿ ಅವಕಾಶ ನೀಡಲಾಗಿಲ್ಲ.

10 / 12
ಶಾರ್ದೂಲ್ ಠಾಕೂರ್: ಟಿ20 ವಿಶ್ವಕಪ್​ನಲ್ಲಿ ಮೀಸಲು ಆಲ್​ರೌಂಡರ್​ ಆಗಿ ಆಯ್ಕೆಯಾಗಿದ್ದ ಶಾರ್ದೂಲ್ ಠಾಕೂರ್​ಗೂ ಈ ಬಾರಿ ತಂಡದಲ್ಲಿ ಚಾನ್ಸ್​ ಸಿಕ್ಕಿಲ್ಲ.

11 / 12
ಪ್ರಸ್ತುತ ಟೀಮ್ ಇಂಡಿಯಾ ಟಿ20 ತಂಡ ಹೀಗಿದೆ: ಭಾರತ ಟಿ20 ತಂಡ: ಹಾರ್ದಿಕ್ ಪಾಂಡ್ಯ (ನಾಯಕ), ಇಶಾನ್ ಕಿಶನ್ (ವಿಕೆಟ್ ಕೀಪರ್), ರುತುರಾಜ್ ಗಾಯಕ್ವಾಡ್, ಶುಭಮನ್ ಗಿಲ್, ಸೂರ್ಯಕುಮಾರ್ ಯಾದವ್ (ಉಪನಾಯಕ), ದೀಪಕ್ ಹೂಡಾ, ರಾಹುಲ್ ತ್ರಿಪಾಠಿ, ಸಂಜು ಸ್ಯಾಮ್ಸನ್, ವಾಷಿಂಗ್ಟನ್ ಸುಂದರ್, ಯುಜ್ವೇಂದ್ರ ಚಾಹಲ್, ಅಕ್ಷರ್ ಪಟೇಲ್, ಅರ್ಷದೀಪ್ ಸಿಂಗ್, ಹರ್ಷಲ್ ಪಟೇಲ್, ಉಮ್ರಾನ್ ಮಲಿಕ್, ಶಿವಂ ಮಾವಿ, ಮುಖೇಶ್ ಕುಮಾರ್.

12 / 12