ಅರ್ಧಶತಕ ಬಾರಿಸಿ ಟೀಂ ಇಂಡಿಯಾದ ಮಾನ ಉಳಿಸಿದ ಅಭಿಷೇಕ್ ಶರ್ಮಾ

Updated on: Oct 31, 2025 | 4:32 PM

Abhishek Sharma half-century: ಆಸ್ಟ್ರೇಲಿಯಾ ವಿರುದ್ಧದ ಎರಡನೇ ಟಿ20 ಪಂದ್ಯದಲ್ಲಿ ಅಭಿಷೇಕ್ ಶರ್ಮಾ ಕೇವಲ 37 ಎಸೆತಗಳಲ್ಲಿ 68 ರನ್‌ಗಳ ಸ್ಫೋಟಕ ಅರ್ಧಶತಕ ಬಾರಿಸಿ ಭಾರತಕ್ಕೆ ಆಸರೆಯಾದರು. 49 ರನ್‌ಗಳಿಗೆ 5 ವಿಕೆಟ್ ಕಳೆದುಕೊಂಡಿದ್ದಾಗ, ಮೆಲ್ಬೋರ್ನ್‌ನಲ್ಲಿ ಏಕಾಂಗಿ ಹೋರಾಟ ನಡೆಸಿ ತಂಡವನ್ನು 100 ರನ್ ಗಡಿ ದಾಟಿಸಿದರು. ಇದು ಆಸ್ಟ್ರೇಲಿಯಾ ವಿರುದ್ಧ ಅವರ ಮೊದಲ ಅರ್ಧಶತಕವಾಗಿದೆ.

1 / 5
ಆಸ್ಟ್ರೇಲಿಯಾ ವಿರುದ್ಧದ ಮೊದಲ ಟಿ20ಪಂದ್ಯದಲ್ಲಿ ರನ್​ಗಳಿಸಲು ವಿಫಲರಾಗಿದ್ದ ಭಾರತದ ಯುವ ಆರಂಭಿಕ ಆಟಗಾರ ಅಭಿಷೇಕ್ ಶರ್ಮಾ ಎರಡನೇ ಪಂದ್ಯದಲ್ಲಿ ಸ್ಫೋಟಕ ಬ್ಯಾಟಿಂಗ್ ಮಾಡಿ ಅರ್ಧಶತಕ ಬಾರಿಸಿದರು. ಮೆಲ್ಬೋರ್ನ್‌ನಲ್ಲಿ ನಡೆದ ಟಿ20 ಸರಣಿಯ ಎರಡನೇ ಪಂದ್ಯದಲ್ಲಿ ಅಭಿಷೇಕ್ ಕೇವಲ 23 ಎಸೆತಗಳಲ್ಲಿ ತಮ್ಮ ಆರನೇ ಅರ್ಧಶತಕ ಪೂರೈಸಿದರು.

2 / 5
ಅಭಿಷೇಕ್ ಅವರ ಈ ಇನ್ನಿಂಗ್ಸ್ ತುಂಬಾ ವಿಶೇಷವಾಗಿತ್ತು. ಏಕೆಂದರೆ ಭಾರತ ಕೇವಲ 49 ರನ್‌ಗಳಿಗೆ 5 ವಿಕೆಟ್‌ಗಳನ್ನು ಕಳೆದುಕೊಂಡಿದ್ದಾಗ ತಂಡದ ಪರ ಏಕಾಂಗಿ ಹೋರಾಟ ನಡಿಸಿದ ಅಭಿಷೇಕ್ ಸ್ಫೋಟಕ ಬ್ಯಾಟಿಂಗ್ ಮಾಡಿ ಈ ಅರ್ಧಶತಕ ಗಳಿಸಿದರು. ಆಸ್ಟ್ರೇಲಿಯಾ ವಿರುದ್ಧ ಮತ್ತು ಆಸ್ಟ್ರೇಲಿಯಾದಲ್ಲಿ ಅಭಿಷೇಕ್ ಅವರ ಮೊದಲ ಅರ್ಧಶತಕ ಇದಾಗಿತ್ತು.

3 / 5
ಮೆಲ್ಬೋರ್ನ್ ಕ್ರಿಕೆಟ್ ಮೈದಾನದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಭಾರತಕ್ಕೆ ಅತ್ಯಂತ ಕಳಪೆ ಆರಂಭ ಸಿಕ್ಕಿತು. ಟಾಪ್ ಆರ್ಡರ್ ಬ್ಯಾಟರ್​ಗಳಾದ ಶುಭ್​ಮನ್ ಗಿಲ್, ನಾಯಕ ಸೂರ್ಯಕುಮಾರ್ ಯಾದವ್, ಸಂಜು ಸ್ಯಾಮ್ಸನ್ ಮತ್ತು ತಿಲಕ್ ವರ್ಮಾ ಅವರಂತಹ ಸ್ಟಾರ್ ಬ್ಯಾಟ್ಸ್‌ಮನ್‌ಗಳು ಒಂದೇ ಅಂಕಿಯ ಸ್ಕೋರ್‌ಗೆ ಬಲಿಯಾದರು.

4 / 5
ಹೀಗಾಗಿ ಭಾರತ ಕೇವಲ 7.3 ಓವರ್‌ಗಳಲ್ಲಿ 49 ರನ್‌ಗಳಿಗೆ ಐದು ವಿಕೆಟ್‌ಗಳನ್ನು ಕಳೆದುಕೊಂಡಿತ್ತು. ಈ  49 ರನ್‌ಗಳಲ್ಲಿ ಅಭಿಷೇಕ್ ಒಬ್ಬರೇ 34 ರನ್‌ ಬಾರಿಸಿದ್ದರು, ಅದೂ ಕೇವಲ 13 ಎಸೆತಗಳಲ್ಲಿ. ಆದರೆ ನಂತರ, ಅಭಿಷೇಕ್, ಹರ್ಷಿತ್ ರಾಣಾ ಅವರೊಂದಿಗೆ, ಇನ್ನಿಂಗ್ಸ್ ಅನ್ನು ಸ್ಥಿರಗೊಳಿಸಿ 13 ನೇ ಓವರ್‌ನಲ್ಲಿ ತಮ್ಮ ಅರ್ಧಶತಕ ಪೂರೈಸಿದರು. ಅವರು ತಮ್ಮ ಇನ್ನಿಂಗ್ಸ್‌ನಲ್ಲಿ ಏಳು ಬೌಂಡರಿಗಳು ಮತ್ತು ಒಂದು ಸಿಕ್ಸರ್‌ ಕೂಡ ಬಾರಿಸಿದರು.

5 / 5
ಹಾಗೆಯೇ ಅಭಿಷೇಕ್, ಹರ್ಷಿತ್ ರಾಣಾ ಜೊತೆ 56 ರನ್​ಗಳ ಜೊತೆಯಾಟ ನೀಡಿ ತಂಡವನ್ನು 100 ರನ್​ಗಳ ಗಡಿ ದಾಟಿಸಿದರು. ಆದಾಗ್ಯೂ, ಇನ್ನೊಂದು ತುದಿಯಲ್ಲಿ ವಿಕೆಟ್​ಗಳು ಪತನವಾಗುತ್ತಲೇ ಇದ್ದವು. ಅಂತಿಮವಾಗಿ, 19 ನೇ ಓವರ್​ನಲ್ಲಿ ಅಭಿಷೇಕ್ ವಿಕೆಟ್ ಪತನವಾಯಿತು. ಇತ್ತ ಟೀಂ ಇಂಡಿಯಾ ಕೂಡ 125 ರನ್​ಗಳಿಗೆ ಆಲೌಟ್ ಆಯಿತು. ಈ ಪಂದ್ಯದಲ್ಲಿ ಅಭಿಷೇಕ್ ಕೇವಲ 37 ಎಸೆತಗಳಲ್ಲಿ 8 ಬೌಂಡರಿ ಮತ್ತು 2 ಸಿಕ್ಸರ್ ಸಹಿತ 68 ರನ್​ಗಳ ಅದ್ಭುತ ಇನ್ನಿಂಗ್ಸ್ ಆಡಿದರು.