Sign In

By signing in or creating an account, you agree with Associated Broadcasting Company's Terms & Conditions and Privacy Policy.

ಭಾರತ-ಆಸ್ಟ್ರೇಲಿಯಾ ಮೂರನೇ ಏಕದಿನಕ್ಕೆ ಮಳೆಯ ಕಾಟ?: ರಾಜ್ಕೋಟ್ ಹವಾಮಾನ ಹೀಗಿದೆ

Rajkot Weather Forecast on September 27: ಇಂದೋರ್​ನಲ್ಲಿ ನಡೆದ ಭಾರತ-ಆಸ್ಟ್ರೇಲಿಯಾ ಎರಡನೇ ಏಕದಿನ ಪಂದ್ಯಕ್ಕೆ ಮಳೆ ಅಡ್ಡಿ ಪಡಿಸಿತ್ತು. ಆಸ್ಟ್ರೇಲಿಯಾ ಟಾರ್ಗೆಟ್ ಬೆನ್ನಟ್ಟುವ ನಡುವೆ ಮಳೆ ಬಂದ ಕಾರಣ ಡಕ್ವರ್ತ್ ಲೂಯಿಸ್ ನಿಯಮವನ್ನು ಅಳವಡಿಸಲಾಯಿತು. ಹಾಗಾದರೆ, ಇಂಡೋ-ಆಸೀಸ್ ತೃತೀಯ ಏಕದಿನಕ್ಕೆ ವರುಣನ ಕಾಟ ಇದೆಯೇ?, ರಾಜ್ಕೋಟ್ ಹವಾಮಾನ ಹೇಗಿದೆ ನೋಡೋಣ.

Vinay Bhat
|

Updated on: Sep 26, 2023 | 7:58 AM

ಭಾರತ ಹಾಗೂ ಆಸ್ಟ್ರೇಲಿಯಾ ನಡುವಣ ಅಂತಿಮ ಮೂರನೇ ಏಕದಿನ ಪಂದ್ಯ ಸೆಪ್ಟೆಂಬರ್ 27 ರಂದು ರಾಜ್ಕೋಟ್​ನ ಸೌರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್ ಸ್ಟೇಡಿಯಂನಲ್ಲಿ ನಡೆಯಲಿದೆ. ಇದಕ್ಕಾಗಿ ಟೀಮ್ ಇಂಡಿಯಾ ಆಟಗಾರರು ಸೋಮವಾರ ಸಂಜೆ ರಾಜ್ಕೋಟ್​ಗೆ ತಲುಪಿದ್ದಾರೆ.

1 / 6
ವಿಶ್ರಾಂತಿಯಲ್ಲಿದ್ದ ವಿರಾಟ್ ಕೊಹ್ಲಿ, ಹಾರ್ದಿಕ್ ಪಾಂಡ್ಯ, ಕುಲ್ದೀಪ್ ಯಾದವ್ ಹಾಗೂ ಇನ್ನೂ ಕೆಲ ಆಟಗಾರರು ಮೂರನೇ ಪಂದ್ಯದಲ್ಲಿ ಆಡಲಿದ್ದು, ತಂಡ ಸೇರಿಕೊಂಡಿದ್ದಾರೆ. ನಾಯಕ ರೋಹಿತ್ ಶರ್ಮಾ ಇಂದು ತಂಡ ಸೇರಿಕೊಳ್ಳುವ ಸಾಧ್ಯತೆ ಇದೆ. ಭಾರತದ ಇಬ್ಬರು ಆಟಗಾರರನ್ನು ಹೊರತು ಪಡಿಸಿ ಉಳಿದೆಲ್ಲ ಪ್ಲೇಯರ್ಸ್ ರಾಜ್ಕೋಟ್​ಗೆ ಬಂದಿದ್ದಾರೆ. ಶುಭ್​ಮನ್ ಗಿಲ್ ಹಾಗೂ ಶಾರ್ದೂಲ್ ಠಾಕೂರ್​ಗೆ ರೆಸ್ಟ್ ನೀಡಲಾಗಿದೆ.

2 / 6
ಇಂದೋರ್​ನಲ್ಲಿ ನಡೆದ ಎರಡನೇ ಏಕದಿನ ಪಂದ್ಯಕ್ಕೆ ಮಳೆ ಅಡ್ಡಿ ಪಡಿಸಿತ್ತು. ಆಸ್ಟ್ರೇಲಿಯಾ ಟಾರ್ಗೆಟ್ ಬೆನ್ನಟ್ಟುವ ನಡುವೆ ಮಳೆ ಬಂದ ಕಾರಣ ಡಕ್ವರ್ತ್ ಲೂಯಿಸ್ ನಿಯಮವನ್ನು ಅಳವಡಿಸಲಾಯಿತು. ಹಾಗಾದರೆ, ಇಂಡೋ-ಆಸೀಸ್ ತೃತೀಯ ಏಕದಿನಕ್ಕೆ ವರುಣನ ಕಾಟ ಇದೆಯೇ?, ರಾಜ್ಕೋಟ್ ಹವಾಮಾನ ಹೇಗಿದೆ ನೋಡೋಣ.

3 / 6
ಬುಧವಾರ (ಸೆಪ್ಟೆಂಬರ್ 27) ಹೆಚ್ಚಾಗಿ ಮೋಡ ಕವಿದ ವಾತಾವರಣ ಇರಲಿದೆ. ಇಂದು ಮಳೆ ಬೀಳುವ ನಿರೀಕ್ಷೆ ಇದ್ದು, ಪಂದ್ಯದ ದಿನ ಮಳೆಯ ಸಾಧ್ಯತೆ ಕಮ್ಮಿ. ಗರಿಷ್ಠ ತಾಪಮಾನವು 34 C ಆಗಿರಬಹುದು ಎಂದು ನಿರೀಕ್ಷಿಸಲಾಗಿದೆ, ಆದರೆ ದಿನದ ಆಟದ ಕೊನೆಯಲ್ಲಿ 25 C ಗೆ ಕಡಿಮೆಯಾಗುತ್ತದೆ.

4 / 6
ರಾಜ್ಕೋಟ್​ನಲ್ಲಿ ಭಾನುವಾರ (ಸೆಪ್ಟೆಂಬರ್ 24) ದಿಂದ ಮಂಗಳವಾರ (ಸೆಪ್ಟೆಂಬರ್ 26) ವರೆಗೆ ಮಳೆಯಾಗುವ ಮುನ್ಸೂಚನೆ ನೀಡಲಾಗಿತ್ತು. ಆದರೆ ಪಂದ್ಯದ ದಿನ - ಬುಧವಾರ (ಸೆಪ್ಟೆಂಬರ್ 27) ಮಳೆ ಬೀಳುವ ಸಾಧ್ಯತೆ ಕೇವಲ 6 ಪ್ರತಿಶತದಷ್ಟು ಮಾತ್ರ. ಆದ್ದರಿಂದ, ಭಾರತ-ಆಸ್ಟ್ರೇಲಿಯಾ 3ನೇ ಏಕದಿನಕ್ಕೆ ಮಳೆಯ ಕಾಟ ಇರುವುದಿಲ್ಲ.

5 / 6
ಸೌರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್ ಸ್ಟೇಡಿಯಂನ ಪಿಚ್ ಬಗ್ಗೆ ನೋಡುವುದಾದರೆ, ಭಾರತದಲ್ಲಿನ ಹೆಚ್ಚಿನ ಮೇಲ್ಮೈಗಳಂತೆ, SCA ಸ್ಟೇಡಿಯಂನಲ್ಲಿನ ವಿಕೆಟ್​ಗಳು ಸಹ ಬ್ಯಾಟಿಂಗ್ ಸ್ನೇಹಿ ಆಗಿದೆ. ದೇಶೀಯ ಮತ್ತು ಅಂತರರಾಷ್ಟ್ರೀಯ ಪಂದ್ಯಗಳಲ್ಲಿ ಇಲ್ಲಿ ದೊಡ್ಡ ಸ್ಕೋರ್ ಆಗುತ್ತದೆ. ಇಲ್ಲಿಯವರೆಗೆ ನಡೆದ ಮೂರು ಏಕದಿನ ಪಂದ್ಯಗಳಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ತಂಡ ಎಲ್ಲ ಪಂದ್ಯಗಳನ್ನು ಗೆದ್ದಿದೆ.

6 / 6
Follow us
ಸಪ್ತಗಿರಿ ವಿಶ್ವವಿದ್ಯಾಲಯ ಉತ್ತಮ ಗುಣಮಟ್ಟದ ಶಿಕ್ಷಣ ಒದಗಿಸುತ್ತಿದೆ: ಉಮೇಶ್

ಛತ್ತೀಸ್‌ಗಢದ ದಾಂತೇಶ್ವರಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ಅಮಿತ್ ಶಾ

ಹಾಲ್​ ಟಿಕೆಟ್​​ನೊಂದಿಗೆ ಮಾದರಿ ಒಎಂಆರ್ ಶೀಟ್ ಕೂಡ ಡೌನ್ಲೋಡ್: ಪ್ರಸನ್ನ

ಪುಟ್ಟ ಬಾಲಕನ ದೈವ ನರ್ತನ: ಮೈ ಜುಮ್ಮೆನಿಸುವ ವಿಡಿಯೋ ನೋಡಿ

CET ಪರೀಕ್ಷೆ ಬಗ್ಗೆ ಭಯ ಬೇಡ; ತಜ್ಞರು ನೀಡಿರುವ ಟಿಪ್ಸ್​​ ಇಲ್ಲಿದೆ

ಒಂದು ಕಾಲದ ಜೋಡೆತ್ತುಗಳು, ಈಗ ಬದ್ಧ ವೈರಿಗಳು!
ಒಂದು ಕಾಲದ ಜೋಡೆತ್ತುಗಳು, ಈಗ ಬದ್ಧ ವೈರಿಗಳು!
KSRTC ಬಸ್​​ನಲ್ಲಿ ಅಕ್ರಮ ಗೋಮಾಂಸ ಸಾಗಿಸುತ್ತಿದ್ದ ಶಕೀರಾ ವಶಕ್ಕೆ

ಇಂಜಿನಿಯರಿಂಗ್​​ಗೆ ಯಾವ ಕಾಲೇಜು, ಯಾವ ಕೋರ್ಸ್ ಬೆಸ್ಟ್?

ಮಾಜಿ ಪ್ರಧಾನಿಯ ಮಗನಾಗಿ ಸರ್ಕಾರಿ ಜಮೀನು ಒತ್ತುವರಿ ಮಾಡ್ತೀನಾ? ಕುಮಾರಸ್ವಾಮಿ

ಪಂದ್ಯವಾಡು ಫೈನ್ ಕಟ್ಟು: ಬ್ಯಾಕ್ ಟು ಬ್ಯಾಕ್ ದಂಡ ಕಟ್ಟಿದ ದಿಗ್ವೇಶ್ ರಾಠಿ