IND vs ENG: ಟೆಸ್ಟ್ ಸರಣಿ ನಡುವೆ ಟೀಂ ಇಂಡಿಯಾದಿಂದ ಹೊರಬಿದ್ದ ವೇಗಿ ಆವೇಶ್ ಖಾನ್..!
IND vs ENG: ಹೈದರಾಬಾದ್ ನಡೆಯುತ್ತಿರುವ ಭಾರತ ಮತ್ತು ಇಂಗ್ಲೆಂಡ್ ನಡುವಿನ 5 ಪಂದ್ಯಗಳ ಟೆಸ್ಟ್ ಸರಣಿಯ ಮೊದಲ ಪಂದ್ಯ ಆರಂಭಕ್ಕೂ ಮುನ್ನ ಟೀಂ ಇಂಡಿಯಾದಿಂದ ವೇಗದ ಬೌಲರ್ ಆವೇಶ್ ಖಾನ್ ಅವರನ್ನು ಬಿಡುಗಡೆ ಮಾಡಲಾಗಿದೆ.
1 / 6
ಹೈದರಾಬಾದ್ ನಡೆಯುತ್ತಿರುವ ಭಾರತ ಮತ್ತು ಇಂಗ್ಲೆಂಡ್ ನಡುವಿನ 5 ಪಂದ್ಯಗಳ ಟೆಸ್ಟ್ ಸರಣಿಯ ಮೊದಲ ಪಂದ್ಯ ಆರಂಭಕ್ಕೂ ಮುನ್ನ ಟೀಂ ಇಂಡಿಯಾದಿಂದ ವೇಗದ ಬೌಲರ್ ಆವೇಶ್ ಖಾನ್ ಅವರನ್ನು ಬಿಡುಗಡೆ ಮಾಡಲು ನಿರ್ಧರಿಸಲಾಗಿದೆ.
2 / 6
ವಾಸ್ತವವಾಗಿ ಈ ಹಿಂದೆ ಬಿಸಿಸಿಐ ತಂಡವನ್ನು ಪ್ರಕಟಿಸಿದ್ದಾಗ ಆವೇಶ್ ಖಾನ್ ಕೂಡ ಮೊದಲ ಎರಡು ಟೆಸ್ಟ್ ಪಂದ್ಯಗಳಿಗೆ ತಂಡದಲ್ಲಿ ಆಯ್ಕೆಯಾಗಿದ್ದರು. ಆದರೆ ಇದೀಗ ತಂಡದಿಂದ ಬಿಡುಗಡೆಯಾಗಿರುವ ಆವೇಶ್ ನಡೆಯುತ್ತಿರುವ ರಣಜಿ ಟ್ರೋಫಿಯಲ್ಲಿ ಮಧ್ಯಪ್ರದೇಶ ತಂಡದ ಪರ ಕಣಕ್ಕಿಳಿಯಲ್ಲಿದ್ದಾರೆ.
3 / 6
ಪಂದ್ಯ ಆರಂಭಕ್ಕೂ ಮುನ್ನ ನಡೆದ ಟಾಸ್ ಮುಗಿದ ಬಳಿಕ ಬಿಸಿಸಿಐ ತನ್ನ ಅಧಿಕೃತ ಎಕ್ಸ್ ಖಾತೆಯಲ್ಲಿ ಈ ಮಾಹಿತಿ ನೀಡಿದೆ. ಇನ್ನು ಭಾರತ ತಂಡ ಮೊದಲ ಟೆಸ್ಟ್‌ನಲ್ಲಿ ಮೂವರು ಸ್ಪಿನ್ನರ್‌ಗಳು ಮತ್ತು ಇಬ್ಬರು ವೇಗದ ಬೌಲರ್‌ಗಳೊಂದಿಗೆ ಮೈದಾನಕ್ಕಿಳಿದಿದೆ.
4 / 6
ಅಷ್ಟಕ್ಕೂ ಆವೇಶ್ ಖಾನ್ರನ್ನು ತಂಡದಿಂದ ಕೈಬಿಡಲು ಕಾರಣವೂ ಇದ್ದು, ಹೈದರಾಬಾದ್ ಪಿಚ್ ಸ್ಪಿನ್ನರ್ಗಳಿಗೆ ಹೆಚ್ಚು ನೆರವಾಗಲಿದೆ. ಹೀಗಾಗಿ ತಂಡದಲ್ಲಿ ಮೂರನೇ ವೇಗದ ಬೌಲರ್ ಅನ್ನು ಆಡಿಸುವ ಅಗತ್ಯವಿಲ್ಲ ಎಂದು ಭಾವಿಸಿರುವ ಆಡಳಿತ ಮಂಡಳಿ ಆವೇಶ್ ಖಾನ್ರನ್ನು ತಂಡದಿಂದ ಹೊರಗಿಟ್ಟಿದೆ.
5 / 6
ಈಗ ತಂಡದಿಂದ ಹೊರನಡೆದಿರುವ ಆವೇಶ್, ನಡೆಯುತ್ತಿರುವ ರಣಜಿ ಟ್ರೋಫಿಯ ಮುಂದಿನ ಪಂದ್ಯದಲ್ಲಿ ಮಧ್ಯಪ್ರದೇಶ ಪರ ಆಡಲಿದ್ದಾರೆ. ಇನ್ನು ವಿರಾಟ್ ಕೊಹ್ಲಿ ಮೊದಲ ಎರಡು ಟೆಸ್ಟ್ ಪಂದ್ಯಗಳನ್ನು ಆಡದ ಕಾರಣ, ಅವರ ಸ್ಥಾನಕ್ಕೆ ರಜತ್ ಪಾಟಿದಾರ್ ಅವರನ್ನು ಆಯ್ಕೆ ಮಾಡಲಾಗಿದೆ.
6 / 6
ಅವೇಶ್ ಖಾನ್ಗೆ ಟೆಸ್ಟ್ ಮಾದರಿಯಲ್ಲಿ ಟೀಂ ಇಂಡಿಯಾ ಪರ ಪದಾರ್ಪಣೆ ಮಾಡುವ ಅವಕಾಶ ಈವರೆಗೆ ಸಿಕ್ಕಿಲ್ಲ. ಆದರೆ ಉಳಿದೆರಡು ಮಾದರಿಗಳಲ್ಲಿ ಟೀಂ ಇಂಡಿಯಾವನ್ನು ಪ್ರತಿನಿಧಿಸಿರುವ ಅವೇಶ್ 20 ಟಿ20 ಪಂದ್ಯಗಳಲ್ಲಿ 32.53 ಸರಾಸರಿಯಲ್ಲಿ 19 ವಿಕೆಟ್ ಹಾಗೂ 8 ಏಕದಿನ ಪಂದ್ಯಗಳಲ್ಲಿ 9 ವಿಕೆಟ್ ಪಡೆದಿದ್ದಾರೆ.