ಆದರೆ ಈ ಬಾರಿ ಕೂಡ ಆಯ್ಕೆ ಸಮಿತಿ ಸರ್ಫರಾಝ್ ಅವರನ್ನು ಕಡೆಗಣಿಸಿದ್ದರು. ಅಲ್ಲದೆ ವಿಕೆಟ್ ಕೀಪರ್ ಬ್ಯಾಟರ್ ಆಗಿ 23 ವರ್ಷದ ಧ್ರುವ್ ಜುರೇಲ್ಗೆ ಮಣೆ ಹಾಕಿದ್ದರು. ಹಾಗೆಯೇ ವೈಯುಕ್ತಿಕ ಕಾರಣಗಳಿಂದ ಮೊದಲೆರಡು ಟೆಸ್ಟ್ ಪಂದ್ಯಗಳಿಂದ ಹೊರಗುಳಿದಿದ್ದ ವಿರಾಟ್ ಕೊಹ್ಲಿ ಬದಲಿ ಆಟಗಾರನಾಗಿ ರಜತ್ ಪಾಟಿದಾರ್ಗೆ ಚಾನ್ಸ್ ನೀಡಲಾಗಿದೆ. ಈ ಆಯ್ಕೆಗಳ ಬೆನ್ನಲ್ಲೇ ಇದೀಗ ಸ್ಪೋಟಕ ಬ್ಯಾಟಿಂಗ್ ಮೂಲಕ ಸರ್ಫರಾಝ್ ಖಾನ್ ಅಬ್ಬರಿಸಿರುವುದು ವಿಶೇಷ.