- Kannada News Photo gallery Cricket photos India England Test Series 2025: Pitch & Outfield Ratings Revealed by ICC
IND vs ENG: ಲಾರ್ಡ್ಸ್ ಪಿಚ್‌ಗೆ ತೃಪ್ತಿಕರ; ಇಂಗ್ಲೆಂಡ್ ಪಿಚ್‌ಗಳ ರೇಟಿಂಗ್ ಬಿಡುಗಡೆ ಮಾಡಿದ ಐಸಿಸಿ
ICC Ratings: ಇತ್ತೀಚೆಗೆ ನಡೆದ ಭಾರತ ಮತ್ತು ಇಂಗ್ಲೆಂಡ್ ನಡುವಿನ ಐದು ಟೆಸ್ಟ್ ಪಂದ್ಯಗಳ ಸರಣಿಯ ಪಿಚ್ ಮತ್ತು ಔಟ್‌ಫೀಲ್ಡ್‌ಗಳಿಗೆ ಐಸಿಸಿ ರೇಟಿಂಗ್ ನೀಡಿದೆ. ಲೀಡ್ಸ್, ಎಡ್ಜ್‌ಬಾಸ್ಟನ್, ಲಾರ್ಡ್ಸ್, ಮ್ಯಾಂಚೆಸ್ಟರ್ ಮತ್ತು ಓವಲ್ ಮೈದಾನಗಳ ರೇಟಿಂಗ್‌ಗಳು ಬಿಡುಗಡೆಯಾಗಿವೆ. ಕೆಲವು ಪಿಚ್‌ಗಳು ಅತ್ಯುತ್ತಮ ರೇಟಿಂಗ್ ಪಡೆದರೆ, ಇನ್ನು ಕೆಲವು ತೃಪ್ತಿಕರ ರೇಟಿಂಗ್ ಪಡೆದಿವೆ.
Updated on: Aug 08, 2025 | 9:33 PM

ಇತ್ತೀಚೆಗೆ ಭಾರತ ಮತ್ತು ಇಂಗ್ಲೆಂಡ್ ನಡುವೆ 5 ಟೆಸ್ಟ್ ಪಂದ್ಯಗಳ ಸರಣಿ ನಡೆದಿತ್ತು. ಇಂಗ್ಲೆಂಡ್ ಆತಿಥ್ಯದಲ್ಲಿ ನಡೆದಿದ್ದ ಈ ಟೆಸ್ಟ್ ಸರಣಿ ಅಂತಿಮವಾಗಿ 2-2 ರಿಂದ ಡ್ರಾದಲ್ಲಿ ಕೊನೆಗೊಂಡಿತು. ಇದೀಗ ಭಾರತ ಹಾಗೂ ಇಂಗ್ಲೆಂಡ್ ನಡುವೆ ನಡೆದ ಐದು ಪಂದ್ಯಗಳ ಪಿಚ್ ಮತ್ತು ಔಟ್‌ಫೀಲ್ಡ್ ರೇಟಿಂಗ್ ಅನ್ನು ಐಸಿಸಿ ಬಿಡುಗಡೆ ಮಾಡಿದೆ.

ಭಾರತ ಮತ್ತು ಇಂಗ್ಲೆಂಡ್ ನಡುವಿನ ಮೊದಲ ಟೆಸ್ಟ್ ಪಂದ್ಯವು ಲೀಡ್ಸ್ ಮೈದಾನದಲ್ಲಿ ನಡೆಯಿತು. ಈ ಪಂದ್ಯದ ಕೊನೆಯ ದಿನದಂದು ಇಂಗ್ಲೆಂಡ್ 5 ವಿಕೆಟ್‌ಗಳಿಂದ ಜಯಗಳಿಸಿತು. ಭಾರತ ನೀಡಿದ 371 ರನ್‌ಗಳ ಗುರಿಯನ್ನು ಇಂಗ್ಲೆಂಡ್ ಸುಲಭವಾಗಿ ಬೆನ್ನಟ್ಟಿತು. ಈಗ ಐಸಿಸಿ ಲೀಡ್ಸ್ ಪಿಚ್ ಮತ್ತು ಔಟ್‌ಫೀಲ್ಡ್ ಎರಡಕ್ಕೂ ಅತ್ಯುತ್ತಮ ರೇಟಿಂಗ್ ನೀಡಿದೆ.

ಎರಡೂ ತಂಡಗಳ ನಡುವಿನ ಎರಡನೇ ಟೆಸ್ಟ್ ಪಂದ್ಯವು ಬರ್ಮಿಂಗ್ಹ್ಯಾಮ್‌ನ ಎಡ್ಜ್‌ಬಾಸ್ಟನ್ ಮೈದಾನದಲ್ಲಿ ನಡೆಯಿತು . ಈ ಪಂದ್ಯವನ್ನು ಟೀಮ್ ಇಂಡಿಯಾ 336 ರನ್‌ಗಳಿಂದ ಗೆದ್ದುಕೊಂಡಿತು. ಈ ಪಂದ್ಯದ ಪಿಚ್‌ಗೆ ಐಸಿಸಿ ಉತ್ತಮ ರೇಟಿಂಗ್ ನೀಡಿದೆ . ಔಟ್‌ಫೀಲ್ಡ್ ಅತ್ಯಧಿಕ ರೇಟಿಂಗ್ ಪಡೆದಿದೆ.

ಆ ಬಳಿಕ ಉಭಯ ತಂಡಗಳ ನಡುವೆ ಲಾರ್ಡ್ಸ್ನಲ್ಲಿ ನಡೆದ ಮೂರನೇ ಟೆಸ್ಟ್ ಪಂದ್ಯ ಕೂಡ ಐದು ದಿನ ನಡೆಯಿತ್ತಾದರೂ ಈ ಪಂದ್ಯವನ್ನು ಇಂಗ್ಲೆಂಡ್ ಗೆದ್ದುಕೊಳ್ಳುವಲ್ಲಿ ಯಶಸ್ವಿಯಾಯಿತು. ಇದೀಗ ಐಸಿಸಿ ಲಾರ್ಡ್ಸ್ ಪಿಚ್‌ಗೆ ತೃಪ್ತಿಕರ ಎಂದು ರೇಟಿಂಗ್ ನೀಡಿದೆ.

ಭಾರತ ಹಾಗೂ ಇಂಗ್ಲೆಂಡ್ ನಡುವೆ ನಾಲ್ಕನೇ ಟೆಸ್ಟ್ ಪಂದ್ಯ ಮ್ಯಾಂಚೆಸ್ಟರ್ನಲ್ಲಿ ನಡೆಯಿತು. ಈ ಪಂದ್ಯದಲ್ಲೂ ಇಂಗ್ಲೆಂಡ್ ಮೇಲುಗೈ ಸಾಧಿಸಿತ್ತಾದರೂ, ಹೋರಾಟ ಬಿಡದ ಟೀಂ ಇಂಡಿಯಾ ಪಂದ್ಯವನ್ನು ಡ್ರಾದಲ್ಲಿ ಕೊನೆಗೊಳಿಸುವಲ್ಲಿ ಯಶಸ್ವಿಯಾಯಿತು. ಇದೀಗ ಐಸಿಸಿ ಈ ಪಿಚ್‌ಗೆ ತೃಪ್ತಿಕರ ಎಂದು ರೇಟಿಂಗ್ ನೀಡಿದೆ.

ಓವಲ್ ಮೈದಾನದ ಪಿಚ್ ಹಸಿರಿನಿಂದ ಕೂಡಿತ್ತು. ಇದರಿಂದಾಗಿ ಬೌಲರ್‌ಗಳು ಮೊದಲ 2 ದಿನಗಳಲ್ಲಿ ಸಾಕಷ್ಟು ವಿಕೆಟ್‌ಗಳನ್ನು ಕಬಳಿಸಿದರು. ಆದಾಗ್ಯೂ, ಇದರ ಹೊರತಾಗಿಯೂ, ಪಂದ್ಯವನ್ನು 5 ನೇ ದಿನದವರೆಗೆ ಆಡಲಾಯಿತು. ಕೊನೆಯಲ್ಲಿ, ಮೊಹಮ್ಮದ್ ಸಿರಾಜ್ ಮತ್ತು ಪ್ರಸಿದ್ಧ್ ಕೃಷ್ಣ ಅವರ ಅದ್ಭುತ ಬೌಲಿಂಗ್ ಟೀಮ್ ಇಂಡಿಯಾಕ್ಕೆ 6 ರನ್‌ಗಳ ಗೆಲುವು ತಂದುಕೊಟ್ಟಿತು. ಈ ಪಿಚ್‌ಗೆ ಐಸಿಸಿ ಅತ್ಯುತ್ತಮ ಎಂದು ರೇಟಿಂಗ್ ನೀಡಿದೆ.
