AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

IPL: ‘ತಂಡದಿಂದ ಬಿಡುಗಡೆ ಮಾಡಿ’; ಸಿಎಸ್​ಕೆ ತೊರೆಯಲು ನಿರ್ಧರಿಸಿದ ಲೆಜೆಂಡರಿ ಆಟಗಾರ

Ashwin Leaves CSK: ರವಿಚಂದ್ರನ್ ಅಶ್ವಿನ್ ಅವರು ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ತೊರೆಯಲು ನಿರ್ಧರಿಸಿದ್ದಾರೆ ಎಂಬ ಸುದ್ದಿ ಹೊರಬಿದ್ದಿದೆ. ಕಳಪೆ ಪ್ರದರ್ಶನದ ನಂತರ, ಅಶ್ವಿನ್ ಐಪಿಎಲ್ 2026 ರ ಮಿನಿ ಹರಾಜಿನಲ್ಲಿ ಭಾಗವಹಿಸಲು ಬಯಸುತ್ತಾರೆ ಎಂದು ಹೇಳಲಾಗಿದೆ. ಅವರ ಅನುಭವ ಮತ್ತು ಕೌಶಲ್ಯದ ಹೊರತಾಗಿಯೂ, ಚೆನ್ನೈ ತಂಡದಲ್ಲಿ ಅವರಿಗೆ ಸೀಮಿತ ಅವಕಾಶಗಳು ಸಿಕ್ಕಿದವು. ಹರಾಜಿನಲ್ಲಿ ಅವರನ್ನು ಮತ್ತೊಂದು ತಂಡ ಆಯ್ಕೆ ಮಾಡಿಕೊಳ್ಳುವ ನಿರೀಕ್ಷೆಯಿದೆ.

ಪೃಥ್ವಿಶಂಕರ
|

Updated on: Aug 08, 2025 | 3:44 PM

Share
2024 ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ವಿದಾಯ ಹೇಳಿದ್ದ ಟೀಂ ಇಂಡಿಯಾದ ಅನುಭವಿ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಪ್ರಸ್ತುತ ಐಪಿಎಲ್‌ನಲ್ಲಿ ಮಾತ್ರ ಆಡುತ್ತಿದ್ದಾರೆ. ಕಳೆದ ಆವೃತ್ತಿಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಸೇರಿಕೊಂಡಿದ್ದ ಅಶ್ವಿನ್ ಹೇಳಿಕೊಳ್ಳುವಂತಹ ಪ್ರದರ್ಶನ ನೀಡಲಿಲ್ಲ. ಇದರಿಂದ ಅಶ್ವಿನ್​ಗೂ ತಂಡದಲ್ಲಿ ಹೆಚ್ಚಿನ ಅವಕಾಶಗಳು ಸಿಕ್ಕಿರಲಿಲ್ಲ.

1 / 6
ಇದೀಗ ಮುಂದಿನ ಆವೃತ್ತಿಗೂ ಮುನ್ನವೇ ಅಶ್ವಿನ್ ಮಹತ್ವದ ನಿರ್ಧಾರ ತೆಗೆದುಕೊಂಡಿದ್ದು, ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ತೊರೆಯಲು ನಿರ್ಧರಿಸಿದ್ದಾರೆ ಎಂದು ವರದಿಯಾಗಿದೆ. ಅಲ್ಲದೆ ಅಶ್ವಿನ್, ಈಗಾಗಲೇ ಚೆನ್ನೈ ಸೂಪರ್ ಕಿಂಗ್ಸ್ ಆಡಳಿತ ಮಂಡಳಿಯ ಬಳಿ ತನ್ನನ್ನು ತಂಡದಿಂದ ಬಿಡುಗಡೆ ಮಾಡುವಂತೆ ಕೇಳಿಕೊಂಡಿದ್ದಾರೆ ಎಂದು ವರದಿಯಾಗಿದೆ. ಒಂದು ವೇಳೆ ಆರ್ ಅಶ್ವಿನ್ ಸಿಎಸ್​ಕೆ ತಂಡದಿಂದ ಬಿಡುಗಡೆಯಾದರೆ, ಅವರು ಐಪಿಎಲ್ 2026 ರ ಮಿನಿ ಹರಾಜಿನಲ್ಲಿ ಕಾಣಿಸಿಕೊಳ್ಳಲಿದ್ದಾರೆ.

2 / 6
ವಾಸ್ತವವಾಗಿ ಅಶ್ವಿನ್ ಚೆನ್ನೈ ತಂಡವನ್ನು ತೊರೆಯಲು ಕಾರಣವೇನು ಎಂಬುದು ಇದುವರೆಗೆ ತಿಳಿದಿಲ್ಲ. ಆದರೆ ಅಶ್ವಿನ್ ಹರಾಜಿಗೆ ಹೋಗಲು ಬಯಸುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. 10 ವರ್ಷಗಳ ನಂತರ ಅಶ್ವಿನ್ ಚೆನ್ನೈ ತಂಡಕ್ಕೆ ಮರಳಿದ್ದ ಅಶ್ವಿನ್ ಅವರನ್ನು ಈ ಪ್ರಾಂಚೈಸಿ 9.75 ಕೋಟಿ ರೂ.ಗಳಿಗೆ ಖರೀದಿಸಿತ್ತು. ಆದರೆ ಅಶ್ವಿನ್ ನಿರೀಕ್ಷೆಗೆ ತಕ್ಕಂತ ಪ್ರದರ್ಶನ ನೀಡಲಿಲ್ಲ.

3 / 6
ಬೌಲಿಂಗ್‌ನಲ್ಲಿ ತಮ್ಮ ಛಾಪು ಕಳೆದುಕೊಂಡಿರುವ ಅಶ್ವಿನ್​ಗೆ ಕಳೆದ ಆವೃತ್ತಿಯಲ್ಲಿ 9 ಪಂದ್ಯಗಳಲ್ಲಿ ಆಡುವ ಅವಕಾಶ ನೀಡಲಾಯಿತು. ಆದರೆ ಈ ಪಂದ್ಯಗಳಲ್ಲಿ ಅಶ್ವಿನ್ ಪ್ರದರ್ಶನ ಶೋಚನೀಯವಾಗಿತ್ತು. ಅಶ್ವಿನ್ ಕೇವಲ 7 ವಿಕೆಟ್‌ಗಳನ್ನು ಮಾತ್ರ ಪಡೆಯಲು ಸಾಧ್ಯವಾಯಿತು. ಇದರ ಜೊತೆಗೆ ಅಶ್ವಿನ್ ಪ್ರತಿ ಓವರ್‌ಗೆ 9.13 ರ ಎಕಾನಮಿಯಲ್ಲಿ ರನ್ ಬಿಟ್ಟುಕೊಟ್ಟು ದುಬಾರಿಯಾದರು.

4 / 6
ಇಡೀ ಆವೃತ್ತಿಯಲ್ಲಿ ಅಶ್ವಿನ್ 186 ಎಸೆತಗಳನ್ನು ಬೌಲ್ ಮಾಡಿ 283 ರನ್‌ಗಳನ್ನು ಬಿಟ್ಟುಕೊಟ್ಟರು. ಹಾಗೆಯೇ ಅಶ್ವಿನ್ ಬ್ಯಾಟಿಂಗ್‌ನಲ್ಲಿಯೂ ಸಂಪೂರ್ಣವಾಗಿ ವಿಫಲರಾದರು. ಆಡಿದ 9 ಪಂದ್ಯಗಳಲ್ಲಿ ಕೇವಲ 33 ರನ್‌ಗಳನ್ನು ಗಳಿಸಿದರು. ಇದರಲ್ಲಿ ಕೇವಲ 3 ಬೌಂಡರಿ ಮತ್ತು 1 ಸಿಕ್ಸರ್ ಮಾತ್ರ ಸೇರಿತ್ತು.

5 / 6
ಆದಾಗ್ಯೂ ಐಪಿಎಲ್‌ನಲ್ಲಿ ಅಶ್ವಿನ್ ಅವರ ಪ್ರದರ್ಶನ ಅದ್ಭುತವಾಗಿದೆ. ಇದುವರೆಗೆ ಆಡಿರುವ 221 ಪಂದ್ಯಗಳಲ್ಲಿ 187 ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಅಶ್ವಿನ್ ಅವರ ಎಕಾನಮಿ ದರ 7.20 ಆಗಿದೆ. ಇದಲ್ಲದೆ, ಅಶ್ವಿನ್ ಕೆಳ ಕ್ರಮಾಂಕದಲ್ಲಿ ಬ್ಯಾಟಿಂಗ್‌ನಲ್ಲಿಯೂ ಉತ್ತಮ ಕೊಡುಗೆ ನೀಡುತ್ತಾರೆ. ಅವರ ಅನುಭವವು ಯಾವುದೇ ಐಪಿಎಲ್ ತಂಡಕ್ಕೆ ಉಪಯುಕ್ತವಾಗಬಹುದು.

6 / 6
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ

ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!

ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ

ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್

ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ

ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು

ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ

ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!

ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು

ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ