- Kannada News Photo gallery Cricket photos India vs Pakistan T20 World Cup All encounter list India unbeaten
T20 World Cup: ಟಿ20 ವಿಶ್ವಕಪ್ ಇತಿಹಾಸದಲ್ಲಿ ಪಾಕ್ ಎದುರು ಭಾರತದ್ದೇ ಮೇಲುಗೈ..!
T20 World Cup: ಟಿ 20 ವಿಶ್ವಕಪ್‌ನಲ್ಲಿ ಪಾಕಿಸ್ತಾನ ಇದುವರೆಗೆ 5 ಬಾರಿ ಭಾರತದ ಎದುರಾಗಿದೆ. ಆದರೆ ಪ್ರತಿ ಬಾರಿಯೂ ಭಾರತದ ಎದುರು ಸೋತಿದೆ. 2007 ರ ಟಿ 20 ವಿಶ್ವಕಪ್ ನಂತರವೂ ಈ ಪ್ರವೃತ್ತಿ ಅಬಾಧಿತವಾಗಿ ಮುಂದುವರಿದಿದೆ.
Updated on: Oct 19, 2021 | 4:19 PM

ಟಿ 20 ವಿಶ್ವಕಪ್‌ನಲ್ಲಿ ಪಾಕಿಸ್ತಾನ ಇದುವರೆಗೆ 5 ಬಾರಿ ಭಾರತದ ಎದುರಾಗಿದೆ. ಆದರೆ ಪ್ರತಿ ಬಾರಿಯೂ ಭಾರತದ ಎದುರು ಸೋತಿದೆ. 2007 ರ ಟಿ 20 ವಿಶ್ವಕಪ್ ನಂತರವೂ ಈ ಪ್ರವೃತ್ತಿ ಅಬಾಧಿತವಾಗಿ ಮುಂದುವರಿದಿದೆ. ಪಾಕಿಸ್ತಾನದ ಮೇಲೆ 5-0 ಅಂತರದಲ್ಲಿ ಭಾರತ ಗೆದ್ದು ಬೀಗಿದೆ. ಈ ಬಾರಿ ಟೀಮ್ ಇಂಡಿಯಾ ಗೆಲುವಿನ ಸಿಕ್ಸರ್ ಹೊಡೆಯಲು ನೋಡುತ್ತಿದೆ.

2007 ಟಿ 20 ವಿಶ್ವಕಪ್, ಗ್ರೂಪ್ ಮ್ಯಾಚ್, ಭಾರತ ವರ್ಸಸ್ ಪಾಕಿಸ್ತಾನ: ಡರ್ಬನ್‌ನಲ್ಲಿ ಆಡಿದ ಹೈವೋಲ್ಟೇಜ್ ಪಂದ್ಯ ಟೈನಲ್ಲಿ ಅಂತ್ಯಗೊಂಡಿತು. ಭಾರತ ನೀಡಿದ 141 ರನ್ಗಳ ಗುರಿಯನ್ನು ದಾಟಲು ಪಾಕಿಸ್ತಾನಕ್ಕೆ ಸಾಧ್ಯವಾಗಲಿಲ್ಲ. ನಂತರ ಅದನ್ನು ಬಾಲ್ ಔಟ್ ಮೂಲಕ ನಿರ್ಧರಿಸಲಾಯಿತು, ಇದರಲ್ಲಿ ಭಾರತ ಪಾಕಿಸ್ತಾನವನ್ನು ಸೋಲಿಸಿತು.

2012 ಟಿ 20 ವಿಶ್ವಕಪ್, ಸೂಪರ್ 8, ಭಾರತ vs ಪಾಕಿಸ್ತಾನ: ಈ ಬಾರಿ ಸಾಂಪ್ರದಾಯಿಕ ಎದುರಾಳಿಗಳೆರಡೂ ಸೂಪರ್ 8 ರಲ್ಲಿ ಮುಖಾಮುಖಿಯಾಗಿದ್ದರು. ಇದರಲ್ಲಿ ಭಾರತ ಪಾಕಿಸ್ತಾನವನ್ನು 8 ವಿಕೆಟ್ಗಳಿಂದ ಸೋಲಿಸಿತು. ಶ್ರೀಲಂಕಾದಲ್ಲಿ ನಡೆದ ಈ ಪಂದ್ಯಾವಳಿಯಲ್ಲಿ ಭಾರತ ಪಾಕಿಸ್ತಾನವನ್ನು 128 ರನ್‌ಗಳಿಗೆ ಆಲೌಟ್ ಮಾಡಿತು. ಇದಕ್ಕೆ ಉತ್ತರವಾಗಿ ವಿರಾಟ್ ಕೊಹ್ಲಿ 61 ಎಸೆತಗಳಲ್ಲಿ 78 ರನ್ಗಳ ಅಜೇಯ ಇನ್ನಿಂಗ್ಸ್ ಆಡಿ ಭಾರತಕ್ಕೆ ಜಯ ನೀಡಿದರು.

2014 ಟಿ 20 ವಿಶ್ವಕಪ್, ಸೂಪರ್ 10, ಭಾರತ vs ಪಾಕಿಸ್ತಾನ: ಮೊದಲು ಆಡಿದ ಪಾಕಿಸ್ತಾನ 20 ಓವರ್‌ಗಳಲ್ಲಿ 7 ವಿಕೆಟ್ಗೆ 130 ರನ್ ಗಳಿಸಿತು. ಇದಕ್ಕೆ ಉತ್ತರವಾಗಿ ಭಾರತ ಪಂದ್ಯವನ್ನು 7 ವಿಕೆಟ್‌ಗಳಿಂದ ಗೆದ್ದುಕೊಂಡಿತು.

2016 ಟಿ 20 ವಿಶ್ವಕಪ್, ಸೂಪರ್ 10, ಭಾರತ vs ಪಾಕಿಸ್ತಾನ: ಕೋಲ್ಕತ್ತಾದ ಮೈದಾನವನ್ನು ಈಡನ್ ಗಾರ್ಡನ್ಸ್ ಎಂದು ಬದಲಾಯಿಸಲಾಯಿತು. ಆದರೆ ಭಾರತ-ಪಾಕಿಸ್ತಾನ ಮುಖಾಮುಖಿಯ ಫಲಿತಾಂಶ ಬದಲಾಗಲಿಲ್ಲ. ಮಳೆಯಿಂದಾಗಿ, ಈ ಪಂದ್ಯವು 18-18 ಓವರ್‌ಗಳಲ್ಲಿ ಸೀಮಿತಗೊಳಿಸಲಾಯಿತು. ಪಾಕಿಸ್ತಾನ 118 ರನ್ ಗಳಿಸಿತು. ಇದಕ್ಕೆ ಉತ್ತರವಾಗಿ ಭಾರತದ 3 ವಿಕೆಟ್ ಕೂಡ ಬೇಗನೆ ಪತನಗೊಂಡಿತು. ಆದರೆ ವಿರಾಟ್ ಕೊಹ್ಲಿ 37 ಎಸೆತಗಳಲ್ಲಿ 55 ರನ್ಗಳ ಇನ್ನಿಂಗ್ಸ್ ಆಡಿ ಪಂದ್ಯವನ್ನು 6 ವಿಕೆಟ್ಗಳಿಂದ ಗೆದ್ದುಕೊಂಡರು.




