IND vs SA: ಡೆತ್ ಓವರ್ನಲ್ಲಿ ಬರೋಬ್ಬರಿ 160 ರನ್‌ಗಳು: ಇದು ಕೂಡ ವಿಶ್ವ ದಾಖಲೆ..!
TV9 Web | Updated By: ಝಾಹಿರ್ ಯೂಸುಫ್
Updated on:
Oct 03, 2022 | 1:25 PM
India vs South Africa 2nd T20: ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಟೀಮ್ ಇಂಡಿಯಾ ಪರ ಕೆಎಲ್ ರಾಹುಲ್ (57), ಸೂರ್ಯಕುಮಾರ್ ಯಾದವ್ (61) ಹಾಗೂ ವಿರಾಟ್ ಕೊಹ್ಲಿ (49) ಕೊಹ್ಲಿ ಅಬ್ಬರಿಸಿದರು.
1 / 7
ಭಾರತ-ಸೌತ್ ಆಫ್ರಿಕಾ ನಡುವಣ 2ನೇ ಟಿ20 ಪಂದ್ಯವು ರೋಚಕ ಹೋರಾಟಕ್ಕೆ ಸಾಕ್ಷಿಯಾಗಿತ್ತು. ಟೀಮ್ ಇಂಡಿಯಾ ನೀಡಿದ 238 ರನ್ಗಳ ಟಾರ್ಗೆಟ್ ಬೆನ್ನತ್ತಿದ ಸೌತ್ ಆಫ್ರಿಕಾ ತಂಡವು 221 ರನ್ಗಳಿಸಲಷ್ಟೇ ಶಕ್ತರಾದರು. ಇದರೊಂದಿಗೆ ಟೀಮ್ ಇಂಡಿಯಾ 16 ರನ್ಗಳಿಂದ ರೋಚಕ ಜಯ ಸಾಧಿಸಿತು.
2 / 7
ಅಂದರೆ ಈ ಪಂದ್ಯದಲ್ಲಿ ಉಭಯ ತಂಡಗಳಿಂದ ಮೂಡಿಬಂದ ಒಟ್ಟಾರೆ ಸ್ಕೋರ್ 458 ರನ್‌ಗಳು. ಅದರಲ್ಲಿ ಡೆತ್ ಓವರ್ಗಳಲ್ಲಿ ಬರೋಬ್ಬರಿ 160 ರನ್ಗಳನ್ನು ಬಾರಿಸಿರುವುದು ವಿಶೇಷ.
3 / 7
ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಟೀಮ್ ಇಂಡಿಯಾ ಪರ ಕೆಎಲ್ ರಾಹುಲ್ (57), ಸೂರ್ಯಕುಮಾರ್ ಯಾದವ್ (61) ಹಾಗೂ ವಿರಾಟ್ ಕೊಹ್ಲಿ (49) ಕೊಹ್ಲಿ ಅಬ್ಬರಿಸಿದರು. ಪರಿಣಾಮ 15 ಓವರ್ ವೇಳೆಗೆ ಟೀಮ್ ಇಂಡಿಯಾ ಮೊತ್ತ 150 ರ ಗಡಿದಾಟಿತು. ಇನ್ನು ಕೊನೆಯ ಐದು ಓವರ್ಗಳಲ್ಲಿ ಟೀಮ್ ಇಂಡಿಯಾ ಕಲೆಹಾಕಿದ್ದು ಬರೋಬ್ಬರಿ 82 ರನ್‌ಗಳು.
4 / 7
ಇತ್ತ 238 ರನ್ಗಳನ್ನು ಬೆನ್ನತ್ತಿದ ಸೌತ್ ಆಫ್ರಿಕಾ ತಂಡ ಕೂಡ 15 ಓವರ್ಗಳಲ್ಲಿ ತಮ್ಮ ಸ್ಕೋರ್ ಅನ್ನು 150 ರ ಗಡಿದಾಟಿಸಿದ್ದರು. ಅಲ್ಲದೆ ಕೊನೆಯ ಐದು ಓವರ್ಗಳಲ್ಲಿ ಬರೋಬ್ಬರಿ 78 ರನ್ ಸಿಡಿಸುವ ಮೂಲಕ ಪಂದ್ಯ ಗೆಲ್ಲುವ ಪ್ರಯತ್ನ ಮಾಡಿದ್ದರು. ಅಂದರೆ ಎರಡೂ ತಂಡಗಳು ಡೆತ್ ಓವರ್ಗಳಲ್ಲಿ (5+5) ಕಲೆಹಾಕಿರುವುದು ಬರೋಬ್ಬರಿ 160 ರನ್‌ಗಳು. ಇದು ಟಿ20 ಕ್ರಿಕೆಟ್ನಲ್ಲಿ ಹೊಸ ದಾಖಲೆಯಾಗಿದೆ.
5 / 7
ಅಂದರೆ ಟಿ20 ಕ್ರಿಕೆಟ್ನ ಒಂದು ಪಂದ್ಯದ ಡೆತ್ ಓವರ್ಗಳಲ್ಲಿ ಮೂಡಿಬಂದ ಅತ್ಯಧಿಕ ಸ್ಕೋರ್ ಇದಾಗಿದೆ. ಇದಕ್ಕೂ ಮುನ್ನ 2010 ರಲ್ಲಿ ಪಾಕಿಸ್ತಾನ್ (73 ರನ್) ಹಾಗೂ ಆಸ್ಟ್ರೇಲಿಯಾ (75 ರನ್) ಡೆತ್ ಓವರ್ಗಳಲ್ಲಿ 148 ರನ್ ಕಲೆಹಾಕಿದ್ದು ಇದುವರೆಗಿನ ವಿಶ್ವ ದಾಖಲೆಯಾಗಿತ್ತು.
6 / 7
ಇದೀಗ ಭಾರತ - ಸೌತ್ ಆಫ್ರಿಕಾ ಬ್ಯಾಟ್ಸ್ಮನ್ಗಳು ಡೆತ್ ಓವರ್ಗಳಲ್ಲಿ 160 ರನ್ ಬಾರಿಸುವ ಮೂಲಕ ಟಿ20 ಕ್ರಿಕೆಟ್ನಲ್ಲಿ ಹೊಸ ವಿಶ್ವ ದಾಖಲೆಯನ್ನು ನಿರ್ಮಿಸಿದ್ದಾರೆ.
7 / 7
ಈ ಮೂಲಕ ದಶಕಗಳ ಹಿಂದೆ ಪಾಕ್-ಆಸ್ಟ್ರೇಲಿಯಾ ನಿರ್ಮಿಸಿದ ವಿಶ್ವ ದಾಖಲೆಯನ್ನು ಭಾರತ-ಸೌತ್ ಆಫ್ರಿಕಾ ತಂಡಗಳ ಬ್ಯಾಟ್ಸ್ಮನ್ಗಳು ಅಳಿಸಿಹಾಕಿದ್ದಾರೆ.
Published On - 1:25 pm, Mon, 3 October 22