IND vs SA: ಈ ಹಿಂದೆ ದಕ್ಷಿಣ ಆಫ್ರಿಕಾ ನೆಲದಲ್ಲಿ ಭಾರತ ಆಡಿದ ಏಕದಿನ ಸರಣಿಗಳ ಪಲಿತಾಂಶ ಇಲ್ಲಿದೆ
TV9 Web | Updated By: ಪೃಥ್ವಿಶಂಕರ
Updated on:
Jan 17, 2022 | 2:57 PM
IND vs SA: 2017-18ರಲ್ಲಿ ವಿರಾಟ್ ಕೊಹ್ಲಿ ನಾಯಕತ್ವದಲ್ಲಿ ಭಾರತ ದಕ್ಷಿಣ ಆಫ್ರಿಕಾ ಪ್ರವಾಸ ಕೈಗೊಂಡಿತ್ತು. ಈ ಪ್ರವಾಸದಲ್ಲಿ, ಎರಡು ತಂಡಗಳ ನಡುವೆ ಆರು ಪಂದ್ಯಗಳ ODI ಸರಣಿಯನ್ನು ಆಡಲಾಯಿತು, ಇದರಲ್ಲಿ ಭಾರತವು 5-1 ರಲ್ಲಿ ಸರಣಿ ಗೆದ್ದಿತು.
1 / 5
ದಕ್ಷಿಣ ಆಫ್ರಿಕಾ ಪ್ರವಾಸ ಭಾರತಕ್ಕೆ ಯಾವಾಗಲೂ ಸವಾಲಿನದ್ದಾಗಿದೆ. ಇಲ್ಲಿ ಭಾರತಕ್ಕೆ ಜಯ ಸಿಕ್ಕಿಲ್ಲ. ಈ ಬಾರಿ ಭಾರತವು ಟೆಸ್ಟ್‌ನಲ್ಲಿ ದಕ್ಷಿಣ ಆಫ್ರಿಕಾವನ್ನು ಸೋಲಿಸುಲ್ಲಿದೆ ಎಂದು ತೋರುತ್ತಿತ್ತು. ಆದರೆ ಆತಿಥೇಯರು ಭಾರತಕ್ಕೆ ಸೋಲಿನ ಕಹಿ ನೀಡಿದರು. ಇದೀಗ ಉಭಯ ತಂಡಗಳ ನಡುವಿನ ಮೂರು ಪಂದ್ಯಗಳ ಏಕದಿನ ಸರಣಿ ಬುಧವಾರದಿಂದ ಆರಂಭವಾಗಲಿದೆ. ಭಾರತವು 2018 ರಲ್ಲಿ ದಕ್ಷಿಣ ಆಫ್ರಿಕಾದ ಹಿಂದಿನ ಸುತ್ತಿನಲ್ಲಿ ಆತಿಥೇಯರನ್ನು ಸೋಲಿಸಿತ್ತು. ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿ ಕಳೆದ ನಾಲ್ಕು ODI ಸರಣಿಗಳಲ್ಲಿ ಭಾರತದ ಸ್ಥಿತಿ ಹೇಗಿತ್ತು ಎಂಬುದನ್ನು ನಾವು ನಿಮಗೆ ಹೇಳುತ್ತಿದ್ದೇವೆ.
2 / 5
2006 ರ ಭಾರತದ ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿ 5 ಏಕದಿನ ಪಂದ್ಯಗಳನ್ನು ಆಡಲಾಯಿತು. ಇದರಲ್ಲಿ ಮೊದಲ ಪಂದ್ಯವನ್ನು ಮಳೆಯಿಂದ ರದ್ದುಗೊಳಿಸಿದರೆ ಉಳಿದ 4 ಏಕದಿನ ಪಂದ್ಯದಲ್ಲಿ ಆಫ್ರಿಕಾ ತಂಡ ಗೆದ್ದು ಬೀಗಿತ್ತು. ಈ ಸರಣಿಯಲ್ಲಿ ಮೊದಲ 3 ಪಂದ್ಯಗಳಲ್ಲಿ ದ್ರಾವಿಡ್ ಭಾರತದ ನಾಯಕತ್ವವಹಿಸಿಕೊಂಡಿದ್ದರೆ ಉಳಿದ ಇನ್ನೆರಡು ಪಂದ್ಯಗಳಿಗೆ ಸೆಹ್ವಾಗ್ ನಾಯಕರಾಗಿದ್ದರು.
3 / 5
2010-11 ರಲ್ಲಿ, ಭಾರತವು ಮಹೇಂದ್ರ ಸಿಂಗ್ ಧೋನಿ ನಾಯಕತ್ವದಲ್ಲಿ ದಕ್ಷಿಣ ಆಫ್ರಿಕಾ ಪ್ರವಾಸ ಮಾಡಿತು. ಈ ಪ್ರವಾಸದಲ್ಲಿ ಭಾರತ ದಕ್ಷಿಣ ಆಫ್ರಿಕಾಕ್ಕೆ ಕಠಿಣ ಸವಾಲು ನೀಡಿತ್ತು. ಮೊದಲ ಪಂದ್ಯದಲ್ಲಿ ಭಾರತ ಸೋತಿದ್ದರೂ, ಜೋಹಾನ್ಸ್‌ಬರ್ಗ್‌ನಲ್ಲಿ ನಡೆದ ಎರಡನೇ ಪಂದ್ಯದಲ್ಲಿ ಭಾರತ ಆತಿಥೇಯರ ದವಡೆಯಿಂದ ಗೆಲುವನ್ನು ಕಸಿದುಕೊಂಡಿತು. ಮೂರನೇ ಏಕದಿನ ಪಂದ್ಯದಲ್ಲಿ ಯೂಸುಫ್ ಪಠಾಣ್ ಅವರ ಅತ್ಯುತ್ತಮ ಆಟದ ಆಧಾರದ ಮೇಲೆ ಭಾರತ ಸರಣಿಯಲ್ಲಿ 2-1 ಮುನ್ನಡೆ ಸಾಧಿಸಿತು. ನಾಲ್ಕನೇ ಪಂದ್ಯವನ್ನು ಗೆಲ್ಲುವ ಮೂಲಕ ದಕ್ಷಿಣ ಆಫ್ರಿಕಾ ಸರಣಿಯನ್ನು ಸಮಬಲಗೊಳಿಸಿತು. ಕೊನೆಯ ಹಾಗೂ ನಿರ್ಣಾಯಕ ಪಂದ್ಯದಲ್ಲಿ ಭಾರತ ಸೋಲನುಭವಿಸಿ ಸರಣಿಯನ್ನು 2-3 ಅಂತರದಲ್ಲಿ ಕಳೆದುಕೊಂಡಿತು.
4 / 5
2013-14ರಲ್ಲಿ ಭಾರತ ಮತ್ತೊಮ್ಮೆ ದಕ್ಷಿಣ ಆಫ್ರಿಕಾ ಪ್ರವಾಸ ಕೈಗೊಂಡಿತ್ತು. ಈ ಬಾರಿ ಭಾರತ ತಂಡ ಸಾಕಷ್ಟು ಕ್ರಿಕೆಟ್ ಆಡಿದ ಬಳಿಕ ದಕ್ಷಿಣ ಆಫ್ರಿಕಾ ತಲುಪಿತು. ಈ ಸರಣಿಯು ಭಾರತೀಯ ಬೌಲರ್‌ಗಳನ್ನು ಕ್ವಿಂಟನ್ ಡಿ ಕಾಕ್ ಸರಿಯಾಗಿಯೇ ದಂಡಿಸಿದರು. ಈ ಸರಣಿಯ ಎಲ್ಲಾ ಮೂರು ಪಂದ್ಯಗಳಲ್ಲಿ ಡಿ ಕಾಕ್ ಶತಕ ಬಾರಿಸಿದ್ದರು. ಜೋಹಾನ್ಸ್‌ಬರ್ಗ್‌ನಲ್ಲಿ ನಡೆದ ಮೊದಲ ಏಕದಿನ ಪಂದ್ಯದಲ್ಲಿ ಡಿ ಕಾಕ್ 135 ರನ್ ಗಳಿಸಿ ಭಾರತದ ಸೋಲಿಗೆ ಕಾರಣರಾದರು. ಡರ್ಬನ್‌ನಲ್ಲಿ, ಅವರು 106 ರನ್‌ಗಳ ಇನ್ನಿಂಗ್ಸ್‌ಗಳನ್ನು ಆಡಿದರು ಮತ್ತು ಅವರ ತಂಡಕ್ಕೆ 2-0 ಮುನ್ನಡೆಯನ್ನು ನೀಡಿದರು. ಸೆಂಚುರಿಯನ್‌ನಲ್ಲಿ ನಡೆದ ಮೂರನೇ ಏಕದಿನ ಪಂದ್ಯದಲ್ಲಿ ಅವರು ಮತ್ತೊಂದು ಶತಕ ಬಾರಿಸಿದ್ದರು ಆದರೆ ಮಳೆಯಿಂದಾಗಿ ಈ ಪಂದ್ಯವನ್ನು ಪೂರ್ಣಗೊಳಿಸಲಾಗಲಿಲ್ಲ.
5 / 5
2017-18ರಲ್ಲಿ ವಿರಾಟ್ ಕೊಹ್ಲಿ ನಾಯಕತ್ವದಲ್ಲಿ ಭಾರತ ದಕ್ಷಿಣ ಆಫ್ರಿಕಾ ಪ್ರವಾಸ ಕೈಗೊಂಡಿತ್ತು. ಈ ಪ್ರವಾಸದಲ್ಲಿ, ಎರಡು ತಂಡಗಳ ನಡುವೆ ಆರು ಪಂದ್ಯಗಳ ODI ಸರಣಿಯನ್ನು ಆಡಲಾಯಿತು, ಇದರಲ್ಲಿ ಭಾರತವು 5-1 ರಲ್ಲಿ ಗೆದ್ದಿತು. ಡರ್ಬನ್‌ನಲ್ಲಿ ನಡೆದ ಮೊದಲ ಏಕದಿನ ಪಂದ್ಯದಲ್ಲಿ ಕೊಹ್ಲಿ ಶತಕದ ನೆರವಿನಿಂದ ಭಾರತ ಗೆಲುವು ಸಾಧಿಸಿತ್ತು. ಇಲ್ಲಿಂದ ಭಾರತ ಸತತ ಮೂರು ಪಂದ್ಯಗಳನ್ನು ಗೆದ್ದುಕೊಂಡಿತು. ನಾಲ್ಕನೇ ಪಂದ್ಯದಲ್ಲಿ ಸೋಲನುಭವಿಸಿದರೂ ನಂತರ ತಂಡ ಪುನರಾಗಮನ ಮಾಡಿ ಉಳಿದ ಎರಡು ಪಂದ್ಯಗಳನ್ನು ಗೆದ್ದು ಸರಣಿ ವಶಪಡಿಸಿಕೊಂಡಿತು.