IND vs SA: ಭಾರತ- ಆಫ್ರಿಕಾ ಏಕದಿನ ಸರಣಿಯಲ್ಲಿ ಅತಿ ಹೆಚ್ಚು ರನ್ ಗಳಿಸಿರುವ ಟಾಪ್ 5 ಕ್ರಿಕೆಟಿಗರಿವರು…
TV9 Web | Updated By: ಪೃಥ್ವಿಶಂಕರ
Updated on:
Oct 06, 2022 | 5:03 PM
IND vs SA: ಲಿಟಲ್ ಮಾಸ್ಟರ್ ಪ್ರೋಟೀಸ್ ವಿರುದ್ಧ 2001 ರನ್ ಗಳಿಸಿದ್ದು, ದಕ್ಷಿಣ ಆಫ್ರಿಕಾ ವಿರುದ್ಧ 57 ಪಂದ್ಯಗಳನ್ನಾಡಿರುವ ಕ್ರಿಕೆಟ್ ದೇವರು, 35.73 ಬ್ಯಾಟಿಂಗ್ ಸರಾಸರಿ ಮತ್ತು 76.31 ಸ್ಟ್ರೈಕ್ ರೇಟ್‌ನಲ್ಲಿ ಈ ರನ್ ಗಳಿಸಿದ್ದಾರೆ.
1 / 6
IND vs SA
2 / 6
ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಏಕದಿನ ಪಂದ್ಯಗಳಲ್ಲಿ ಅತಿ ಹೆಚ್ಚು ರನ್ ಗಳಿಸಿದ ದಾಖಲೆ ಬರೆದಿದ್ದಾರೆ. ಲಿಟಲ್ ಮಾಸ್ಟರ್ ಪ್ರೋಟೀಸ್ ವಿರುದ್ಧ 2001 ರನ್ ಗಳಿಸಿದ್ದು, ದಕ್ಷಿಣ ಆಫ್ರಿಕಾ ವಿರುದ್ಧ 57 ಪಂದ್ಯಗಳನ್ನಾಡಿರುವ ಕ್ರಿಕೆಟ್ ದೇವರು, 35.73 ಬ್ಯಾಟಿಂಗ್ ಸರಾಸರಿ ಮತ್ತು 76.31 ಸ್ಟ್ರೈಕ್ ರೇಟ್‌ನಲ್ಲಿ ಈ ರನ್ ಗಳಿಸಿದ್ದಾರೆ. ಅವರು ದಕ್ಷಿಣ ಆಫ್ರಿಕಾ ವಿರುದ್ಧ 5 ಶತಕ ಮತ್ತು 8 ಅರ್ಧ ಶತಕಗಳನ್ನು ಗಳಿಸಿದ್ದಾರೆ. ಇದರಲ್ಲಿ ದ್ವಿಶತಕವೂ ಇದೆ.
3 / 6
ಈ ಪಟ್ಟಿಯಲ್ಲಿ ದಕ್ಷಿಣ ಆಫ್ರಿಕಾದ ದಿಗ್ಗಜ ಆಲ್‌ರೌಂಡರ್ ಜಾಕ್ವೆಸ್ ಕಾಲಿಸ್ ಎರಡನೇ ಸ್ಥಾನದಲ್ಲಿದ್ದಾರೆ. ಅವರು ಭಾರತದ ವಿರುದ್ಧ 37 ಪಂದ್ಯಗಳಲ್ಲಿ 61.40 ರ ಬ್ಯಾಟಿಂಗ್ ಸರಾಸರಿ ಮತ್ತು 72.37 ರ ಸ್ಟ್ರೈಕ್ ರೇಟ್‌ನಲ್ಲಿ 1535 ರನ್ ಗಳಿಸಿದ್ದಾರೆ. ಈ ಸಮಯದಲ್ಲಿ ಕಾಲಿಸ್ ಎರಡು ಶತಕ ಮತ್ತು 11 ಅರ್ಧ ಶತಕಗಳನ್ನು ಗಳಿಸಿದ್ದಾರೆ.
4 / 6
ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಏಕದಿನ ಪಂದ್ಯಗಳಲ್ಲಿ ಅತಿ ಹೆಚ್ಚು ರನ್ ಗಳಿಸಿದವರ ಪಟ್ಟಿಯಲ್ಲಿ ವಿರಾಟ್ ಕೊಹ್ಲಿ ಮೂರನೇ ಸ್ಥಾನದಲ್ಲಿದ್ದಾರೆ. ವಿರಾಟ್ 30 ಪಂದ್ಯಗಳಲ್ಲಿ 61 ಸರಾಸರಿಯೊಂದಿಗೆ, 85.91 ಸ್ಟ್ರೈಕ್ ರೇಟ್‌ನಲ್ಲಿ 1403 ರನ್ ಗಳಿಸಿದ್ದಾರೆ. ವಿರಾಟ್ ಕೊಹ್ಲಿ ಪ್ರೋಟೀಸ್ ವಿರುದ್ಧ 4 ಶತಕ ಮತ್ತು 8 ಅರ್ಧ ಶತಕಗಳನ್ನು ಗಳಿಸಿದ್ದಾರೆ.
5 / 6
ದಕ್ಷಿಣ ಆಫ್ರಿಕಾದ ಗ್ಯಾರಿ ಕಿಸ್ಟರ್ನ್ ಈ ಪಟ್ಟಿಯಲ್ಲಿ ನಾಲ್ಕನೇ ಸ್ಥಾನ ಪಡೆದಿದ್ದು, ಅವರು ಭಾರತದ ವಿರುದ್ಧ 26 ಪಂದ್ಯಗಳಲ್ಲಿ 62.59 ಸರಾಸರಿ ಮತ್ತು 76.62 ಸ್ಟ್ರೈಕ್ ರೇಟ್‌ನಲ್ಲಿ 1377 ರನ್ ಗಳಿಸಿದ್ದಾರೆ. ಜೊತೆಗೆ ಕಿಸ್ಟರ್ನ್ 4 ಶತಕ ಮತ್ತು 9 ಅರ್ಧಶತಕಗಳನ್ನು ಗಳಿಸಿದ್ದಾರೆ.
6 / 6
ಈ ಟಾಪ್-5 ಪಟ್ಟಿಯಲ್ಲಿ ಎಬಿ ಡಿವಿಲಿಯರ್ಸ್ ಕೂಡ ಇದ್ದಾರೆ. ಡಿವಿಲಿಯರ್ಸ್ ಭಾರತದ ವಿರುದ್ಧ 32 ಪಂದ್ಯಗಳಲ್ಲಿ 48.46 ಸರಾಸರಿ ಮತ್ತು 111.13 ಸ್ಟ್ರೈಕ್ ರೇಟ್‌ನಲ್ಲಿ 1357 ರನ್ ಗಳಿಸಿದ್ದಾರೆ. ಹಾಗೆಯೇ ಡಿವಿಲಿಯರ್ಸ್ 6 ಶತಕ ಹಾಗೂ 5 ಅರ್ಧ ಶತಕ ಸಿಡಿಸಿದ್ದಾರೆ.
Published On - 5:03 pm, Thu, 6 October 22