ಟಿ20 ವಿಶ್ವಕಪ್ ಆರಂಭಕ್ಕೆ ಇನ್ನು ಕೆಲವೇ ದಿನಗಳು ಬಾಕಿ ಉಳಿದಿದ್ದು, ಅಕ್ಟೋಬರ್ 16 ರಿಂದ ಸೂಪರ್- 12 ಪಂದ್ಯಗಳು ಪ್ರಾರಂಭವಾಗಲಿವೆ. ಇದಕ್ಕಾಗಿ ಟೀಂ ಇಂಡಿಯಾ ಕೂಡ ಆಸ್ಟ್ರೇಲಿಯಾಕ್ಕೆ ಪ್ರಯಾಣ ಬೆಳೆಸಿದೆ. ಕ್ರಿಕೆಟ್ನ ಅತ್ಯಂತ ಕಡಿಮೆ ಸ್ವರೂಪದಲ್ಲಿ ಬ್ಯಾಟರ್ಸ್ಗಳೇ ಹೆಚ್ಚು ಸದ್ದು ಮಾಡುವುದನ್ನು ನಾವು ಕಾಣಬಹುದು. ಆದರೆ ಬೌಲರ್ಸ್ಗಳು ಕೂಡ ತಮ್ಮ ಚಾಣಾಕ್ಷ ಕೈಚಳಕದಿಂದ ಬ್ಯಾಟರ್ಗಳಿಗೆ ಚಳ್ಳೇ ಹಣ್ಣು ತಿನ್ನಿಸುವುದನ್ನು ನಾವು ಹಲವು ಬಾರಿ ನೋಡಿದ್ದೇವೆ. ಹೀಗೆ ತಮ್ಮ ಬೌಲಿಂಗ್ ಮ್ಯಾಜಿಕ್ನಿಂದ ಟಿ20 ವಿಶ್ವಕಪ್‌ನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ 10 ಬೌಲರ್‌ಗಳ ಬಗ್ಗೆ ಒಂದಿಷ್ಟು ಮಾಹಿತಿ ಇಲ್ಲಿದೆ.
ಶಕೀಬ್ ಅಲ್ ಹಸನ್: ಈ ಪಟ್ಟಿಯಲ್ಲಿ ಬಾಂಗ್ಲಾದೇಶದ ಆಲ್‌ರೌಂಡರ್ ಶಕೀಬ್ ಅಲ್ ಹಸನ್ ಮೊದಲ ಸ್ಥಾನದಲ್ಲಿದ್ದಾರೆ. ಟಿ20 ವಿಶ್ವಕಪ್‌ನಲ್ಲಿ ಒಟ್ಟು 31 ಪಂದ್ಯಗಳನ್ನು ಆಡಿದ್ದು, 41 ವಿಕೆಟ್‌ಗಳನ್ನು ಪಡೆದಿದ್ದಾರೆ. ಏತನ್ಮಧ್ಯೆ, ಶಕೀಬ್ 9 ರನ್ಗಳಿಗೆ 4 ವಿಕೆಟ್ ಪಡೆದಿರುವುದು ಅವರ ಅತ್ಯುತ್ತಮ ಬೌಲಿಂಗ್ ಪ್ರದರ್ಶನವಾಗಿದೆ.
Shahid Afridi-Gautam Gambhir
ಲಸಿತ್ ಮಾಲಿಂಗ: ಶ್ರೀಲಂಕಾದ ಮಾಜಿ ವೇಗದ ಬೌಲರ್ ಲಸಿತ್ ಮಾಲಿಂಗ ತಮ್ಮ ನಿಖರ ಯಾರ್ಕರ್‌ಗಳಿಗೆ ಹೆಸರುವಾಸಿಯಾಗಿದ್ದಾರೆ. ಟಿ20 ವಿಶ್ವಕಪ್‌ನಲ್ಲಿ ಮಾಲಿಂಗ ಒಟ್ಟು 31 ಪಂದ್ಯಗಳನ್ನು ಆಡಿದ್ದು, 38 ವಿಕೆಟ್‌ಗಳನ್ನು ಪಡೆದಿದ್ದಾರೆ. ಟಿ20 ವಿಶ್ವಕಪ್‌ನಲ್ಲಿ ಅವರ ಎಕಾನಮಿ 7.34 ಆಗಿದೆ.
ಸಯೀದ್ ಅಜ್ಮಲ್: ಪಾಕಿಸ್ತಾನದ ಮಾಜಿ ಸ್ಪಿನ್ನರ್ ಸಯೀದ್ ಅಜ್ಮಲ್ ತಮ್ಮ ಮ್ಯಾಜಿಕ್ ಬೌಲಿಂಗ್‌ಗೆ ಹೆಸರುವಾಸಿಯಾಗಿದ್ದಾರೆ. ಅವರು ತಮ್ಮ ವೃತ್ತಿಜೀವನದಲ್ಲಿ ಟಿ20 ವಿಶ್ವಕಪ್‌ನಲ್ಲಿ ಒಟ್ಟು 23 ಪಂದ್ಯಗಳನ್ನು ಆಡಿದ್ದಾರೆ. ಅದರಲ್ಲಿ ಅವರು 16.86 ಸರಾಸರಿಯಲ್ಲಿ 36 ವಿಕೆಟ್ ಪಡೆದಿದ್ದಾರೆ.
ಅಜಂತಾ ಮೆಂಡಿಸ್: ಶ್ರೀಲಂಕಾದ ಬೌಲರ್ ಅಜಂತಾ ಮೆಂಡಿಸ್ ಟಿ20 ವಿಶ್ವಕಪ್‌ನಲ್ಲಿ ಒಟ್ಟು 21 ಪಂದ್ಯಗಳನ್ನು ಆಡಿದ್ದು, 15.02 ಸರಾಸರಿಯಲ್ಲಿ 35 ವಿಕೆಟ್‌ಗಳನ್ನು ಪಡೆದಿದ್ದಾರೆ.
ಉಮರ್ ಗುಲ್: ಪಾಕಿಸ್ತಾನದ ಮಾಜಿ ವೇಗದ ಬೌಲರ್ ಉಮರ್ ಗುಲ್ ಟಿ20 ವಿಶ್ವಕಪ್‌ನಲ್ಲಿ ಒಟ್ಟು 24 ಪಂದ್ಯಗಳನ್ನು ಆಡಿದ್ದಾರೆ. ಈ ಪಂದ್ಯಗಳಲ್ಲಿ ಅವರು 7.30ರ ಎಕಾನಮಿಯಲ್ಲಿ 35 ವಿಕೆಟ್ ಪಡೆದಿದ್ದಾರೆ.
ಡೇಲ್ ಸ್ಟೇನ್: ಮಾಜಿ ಆಫ್ರಿಕನ್ ವೇಗದ ಬೌಲರ್ ಡೇಲ್ ಸ್ಟೇನ್ ಅವರ ವೇಗ, ಸ್ವಿಂಗ್, ನಿಖರವಾದ ಲೈನ್ ಲೆಂಗ್ತ್‌ಗೆ ಹೆಸರುವಾಸಿಯಾಗಿದ್ದಾರೆ. ಸ್ಟೇಯ್ನ್ ಟಿ20 ವಿಶ್ವಕಪ್‌ನಲ್ಲಿ ಒಟ್ಟು 23 ಪಂದ್ಯಗಳನ್ನು ಆಡಿದ್ದು ಅದರಲ್ಲಿ ಅವರು 30 ಬ್ಯಾಟ್ಸ್‌ಮನ್‌ಗಳನ್ನು ಪೆವಿಲಿಯನ್‌ಗೆ ಕಳುಹಿಸಿದ್ದಾರೆ.
ಸ್ಟುವರ್ಟ್ ಬ್ರಾಡ್: ಇಂಗ್ಲೆಂಡ್ ವೇಗಿ ಸ್ಟುವರ್ಟ್ ಬ್ರಾಡ್ ಟಿ20 ವಿಶ್ವಕಪ್‌ನಲ್ಲಿ ಇದುವರೆಗೆ ಒಟ್ಟು 26 ಪಂದ್ಯಗಳನ್ನು ಆಡಿದ್ದು, 30 ವಿಕೆಟ್ ಪಡೆದಿದ್ದಾರೆ.
ಡ್ವೇನ್ ಬ್ರಾವೋ: ವೆಸ್ಟ್ ಇಂಡೀಸ್ನ ಸ್ಟಾರ್ ಆಲ್ ರೌಂಡರ್ ಡ್ವೇನ್ ಬ್ರಾವೋ ಟಿ20 ವಿಶ್ವಕಪ್‌ನಲ್ಲಿ ಇದುವರೆಗೆ ಒಟ್ಟು 34 ಪಂದ್ಯಗಳನ್ನು ಆಡಿದ್ದು, 27 ವಿಕೆಟ್ ಪಡೆದಿದ್ದಾರೆ.
ಟೆಸ್ಟ್ ಪಂದ್ಯದಲ್ಲಿ ತನ್ನನ್ನು ತೊಡಗಿಸಿಕೊಂಡಿರುವ ರವಿಚಂದ್ರನ್ ಅಶ್ವಿನ್ ಕೂಡ ಟಿ20 ಕ್ರಿಕೆಟ್ ನಿಂದ ಹಿಂದೆ ಸರಿಯಲಿದ್ದಾರೆ. ಸದ್ಯ ವೆಸ್ಟ್ ಇಂಡೀಸ್ ವಿರುದ್ಧದ ಸರಣಿಗೆ ಬಿಸಿಸಿಐ ಇವರನ್ನು ಆಯ್ಕೆ ಮಾಡಿದ್ದು ಇಲ್ಲಿ ವಿಕೆಟ್ ಕೀಳಲು ವಿಫಲರಾದರೆ ವೈಟ್ ಬಾಲ್ ಕ್ರಿಕೆಟ್ ಗೆ ಮತ್ತೆ ಇವರು ಆಯ್ಕೆ ಆಗುವುದು ಅನುಮಾನ.
Published On - 6:27 pm, Thu, 6 October 22