IND vs NED: ನೆದರ್​ಲೆಂಡ್ಸ್ ವಿರುದ್ಧದ ಪಂದ್ಯಕ್ಕೆ ಭಾರತ ಸಜ್ಜು: ರೋಹಿತ್ ಪಡೆಯ ಅಭ್ಯಾಸ ಹೇಗಿದೆ ನೋಡಿ

| Updated By: Vinay Bhat

Updated on: Oct 27, 2022 | 10:08 AM

India vs Netherlands, T20 World Cup: ಇಂದು ಸಿಡ್ನಿಯ ಸಿಡ್ನಿ ಕ್ರಿಕೆಟ್ ಗ್ರೌಂಡ್​ನಲ್ಲಿ ಟೀಮ್ ಇಂಡಿಯಾ ನೆದರ್​ಲೆಂಡ್ಸ್ (India vs Netherlands) ವಿರುದ್ಧ ತನ್ನ ದ್ವಿತೀಯ ಪಂದ್ಯವನ್ನು ಆಡಲಿದೆ.

1 / 8
ಐಸಿಸಿ ಟಿ20 ವಿಶ್ವಕಪ್ 2022 (T20 World Cup) ಟೂರ್ನಿಯಲ್ಲಿ ಪಾಕಿಸ್ತಾನ ವಿರುದ್ಧ ರೋಚಕ ಗೆಲುವು ಸಾಧಿಸಿ ಶುಭಾರಂಭ ಮಾಡಿದ ಭಾರತ ಕ್ರಿಕೆಟ್ ತಂಡ ಇದೀಗ ಮತ್ತೊಂದು ಕದನಕ್ಕೆ ಸಜ್ಜಾಗಿದೆ. ಇಂದು ಸಿಡ್ನಿಯ ಸಿಡ್ನಿ ಕ್ರಿಕೆಟ್ ಗ್ರೌಂಡ್​ನಲ್ಲಿ ಟೀಮ್ ಇಂಡಿಯಾ ನೆದರ್​ಲೆಂಡ್ಸ್ (India vs Netherlands) ವಿರುದ್ಧ ತನ್ನ ದ್ವಿತೀಯ ಪಂದ್ಯವನ್ನು ಆಡಲಿದೆ.

2 / 8
ಮೊದಲ ಪಂದ್ಯವನ್ನು ಗೆದ್ದು ಆತ್ಮವಿಶ್ವಾಸದಲ್ಲಿರುವ ರೋಹಿತ್ (Rohit Sharma) ಪಡೆ ಈ ಮ್ಯಾಚ್ ಅನ್ನೂ ಜಯಿಸುವ ಯೋಜನೆಯಲ್ಲಿದೆ. ಅತ್ತ ನೆದರ್​ಲೆಂಡ್ಸ್ ತನ್ನ ಮೊದಲ ಪಂದ್ಯದಲ್ಲಿ ಬಾಂಗ್ಲಾದೇಶ ವಿರುದ್ಧ ಗೆಲುವಿನ ಅಂಚಿನಲ್ಲಿ ಎಡವಿತ್ತು. ಸೋತ ಪರಿಣಾಮ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿದೆ. ಭಾರತ ದ್ವಿತೀಯ ಸ್ಥಾನಕ್ಕೆ ಕುಸಿದಿದೆ.

3 / 8
ನೆದರ್​ಲೆಂಡ್ಸ್ ಭಾರತಕ್ಕೆ ಹೋಲಿಸಿದರೆ ದುರ್ಬಲ ಎಂದು ಹೇಳಬಹುದು. ಆದರೆ, ಬಾಂಗ್ಲಾದೇಶದ ವಿರುದ್ಧ ಅವರು ಯಾವ ರೀತಿ ಆಡಿದರು ಎನ್ನುವುದನ್ನು ಗಮನಿಸ ಬೇಕಿದೆ. ಯಾವುದೇ ತಂಡವನ್ನು ಹಗುರವಾಗಿ ಪರಿಣಿಸಲು ಸಾಧ್ಯವಿಲ್ಲದ ಕಾರಣ, ಭಾರತವು ಇನ್ನೂ ಜಾಗರೂಕತೆಯಿಂದ ಕೂಡಿರಬೇಕು.

4 / 8
ಟೀಮ್ ಇಂಡಿಯಾ ಬ್ಯಾಟಿಂಗ್ ವಿಭಾಗದಲ್ಲಿ ಸುಧಾರಣೆ ಕಾಣಬೇಕಿದೆ. ಓಪನರ್​ಗಳಾದ ಕೆಎಲ್ ರಾಹುಲ್ ಹಾಗೂ ನಾಯಕ ರೋಹಿತ್ ಶರ್ಮಾ ತಂಡಕ್ಕೆ ಉತ್ತಮ ಆರಂಭ ಒದಗಿಸಬೇಕಿದೆ. ಸೂರ್ಯಕುಮಾರ್ ಯಾದವ್ ಕೂಡ ಎಚ್ಚರಿಕೆಯಿಂದ ಬ್ಯಾಟ್ ಬೀಸಬೇಕಿದೆ.

5 / 8
ಕೊಹ್ಲಿ ಹಾರ್ದಿಕ್ ಉತ್ತಮ ಫಾರ್ಮ್​ನಲ್ಲಿದ್ದಾರೆ. ದಿನೇಶ್ ಕಾರ್ತಿಕ್ ಕೊಡುಗೆ ತಂಡಕ್ಕೆ ಇನ್ನೂ ಬೇಕಾಗಿದೆ.

6 / 8
ಯುಜ್ವೇಂದ್ರ ಚಹಲ್, ಹರ್ಷಲ್ ಪಟೇಲ್, ರಿಷಭ್ ಪಂತ್, ದೀಪಕ್ ಹೂಡ ಅವಕಾಶಕ್ಕಾಗಿ ಕಾಯುತ್ತಿದ್ದಾರೆ. ಆದರೆ, ಇಂದಿನ ಪಂದ್ಯಕ್ಕೆ ಟೀಮ್ ಇಂಡಿಯಾದಲ್ಲಿ ಬದಲಾವಣೆ ಅನುಮಾನ.

7 / 8
ಭಾರತ ಮತ್ತು ನೆದರ್ಲೆಂಡ್ಸ್ ನಡುವಿನ ಪಂದ್ಯ ಮಧ್ಯಾಹ್ನ 12:30ಕ್ಕೆ ಆರಂಭವಾಗಲಿದೆ. 12 ಗಂಟೆಗೆ ಟಾಸ್ ನಡೆಯಲಿದೆ. ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್‌ನ ವಿವಿಧ ಚಾನೆಲ್‌ಗಳಲ್ಲಿ ಭಾರತ ಮತ್ತು ನೆದರ್ಲೆಂಡ್ಸ್ ನಡುವಿನ ಪಂದ್ಯದ ನೇರ ಪ್ರಸಾರವಾಗಲಿದೆ.

8 / 8
ಭಾರತ ಸಂಭಾವ್ಯ ತಂಡ: ರೋಹಿತ್ ಶರ್ಮಾ (ನಾಯಕ), ಕೆಎಲ್ ರಾಹುಲ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ಹಾರ್ದಿಕ್ ಪಾಂಡ್ಯ, ದಿನೇಶ್ ಕಾರ್ತಿಕ್ (ವಿಕೆಟ್ ಕೀಪರ್), ಅಕ್ಷರ್ ಪಟೇಲ್, ರವಿಚಂದ್ರನ್ ಅಶ್ವಿನ್/ಯುಜ್ವೇಂದ್ರ ಚಹಲ್, ಭುವನೇಶ್ವರ್ ಕುಮಾರ್, ಮೊಹಮ್ಮದ್ ಶಮಿ, ಅರ್ಷದೀಪ್ ಸಿಂಗ್.

Published On - 10:07 am, Thu, 27 October 22