R Ashwin Net Worth: ಐಷರಾಮಿ ಮನೆ, ದುಬಾರಿ ಕಾರುಗಳು; ಅಶ್ವಿನ್ ಎಷ್ಟು ಕೋಟಿಯ ಒಡೆಯ ಗೊತ್ತಾ?

R Ashwin Net Worth: ರವಿಚಂದ್ರನ್ ಅಶ್ವಿನ್ ಅವರು ಅಂತರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದಾರೆ. ಮೂರು ಮಾದರಿಯಲ್ಲಿ ಕ್ರಿಕೆಟ್​ನಲ್ಲಿ ಟೀಂ ಇಂಡಿಯಾವನ್ನು ಪ್ರತಿನಿಧಿಸಿರುವ ಅಶ್ವಿನ್ ಅವರ ಒಟ್ಟು ಸಂಪತ್ತು 100 ಕೋಟಿಗೂ ಹೆಚ್ಚು. ಇದರಲ್ಲಿ ಬಿಸಿಸಿಐ ವೇತನ, ಐಪಿಎಲ್ ಸಂಭಾವನೆ ಮತ್ತು ಜಾಹೀರಾತು ಆದಾಯ ಸೇರಿವೆ.

ಪೃಥ್ವಿಶಂಕರ
|

Updated on:Dec 18, 2024 | 4:34 PM

ಟೀಂ ಇಂಡಿಯಾದ ಅನುಭವಿ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಅಂತರಾಷ್ಟ್ರೀಯ ಕ್ರಿಕೆಟ್​ ಬದುಕಿಗೆ ವಿದಾಯ ಹೇಳಿದ್ದಾರೆ. ಪ್ರಸ್ತುತ ಟೀಂ ಇಂಡಿಯಾದೊಂದಿಗೆ ಆಸ್ಟ್ರೇಲಿಯಾ ಪ್ರವಾಸದಲ್ಲಿರುವ ಅಶ್ವಿನ್, ಗಾಬಾ ಟೆಸ್ಟ್ ಮುಗಿದ ನಂತರ ಅಂತರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸುತ್ತಿರುವುದಾಗಿ ಮಾಧ್ಯಮಗಳ ಮುಂದೆ ಹೇಳಿಕೊಂಡಿದ್ದಾರೆ.

1 / 8
ಇದರರ್ಥ ಇನ್ನು ಮುಂದೆ ಅಶ್ವಿನ್ ಟೀಂ ಇಂಡಿಯಾ ಜೆರ್ಸಿಯಲ್ಲಿ ಕಾಣಿಸಿಕೊಳ್ಳುವುದಿಲ್ಲ. ಆಸ್ಟ್ರೇಲಿಯಾ ವಿರುದ್ಧದ 2ನೇ ಟೆಸ್ಟ್ ಪಂದ್ಯದಲ್ಲಿ ಆಡುವ ಅವಕಾಶ ಪಡೆದಿದ್ದ ಅಶ್ವಿನ್​ಗೆ ಹೇಳಿಕೊಳ್ಳುವಂತಹ ಪ್ರದರ್ಶನ ನೀಡಲು ಸಾಧ್ಯವಾಗಿರಲಿಲ್ಲ. ಹೀಗಾಗಿ ಅವರನ್ನು 3ನೇ ಟೆಸ್ಟ್​ನಿಂದ ಕೈಬಿಡಲಾಗಿತ್ತು. ಇದೀಗ ಮಹತ್ವದ ನಿರ್ಧಾರ ತೆಗೆದುಕೊಂಡಿರುವ ಅಶ್ವಿನ್ ತಮ್ಮ ಸ್ಮರಣೀಯ ಕ್ರಿಕೆಟ್ ವೃತ್ತಿಜೀವನವನ್ನು ಕೊನೆಗೊಳಿಸಿದ್ದಾರೆ.

2 / 8
ಈ ಮೂಲಕ ಪ್ರಪಂಚದಾದ್ಯಂತ ಇರುವ ಕ್ರಿಕೆಟ್ ಅಭಿಮಾನಿಗಳಿಗೆ ಶಾಕ್ ನೀಡಿರುವ ಅಶ್ವಿನ್ ಎಲ್ಲಾ ಮೂರು ಮಾದರಿಗಳಲ್ಲಿ ಟೀಂ ಇಂಡಿಯಾವನ್ನು ಪ್ರತಿನಿಧಿಸಿದ್ದರು. ಆದರೆ ಟೆಸ್ಟ್ ಕ್ರಿಕೆಟ್​ ಮೇಲೆ ಹೆಚ್ಚು ಒಲವು ಹೊಂದಿದ್ದ ಅಶ್ವಿನ್ ಟೀಂ ಇಂಡಿಯಾ ಪರ ಟೆಸ್ಟ್​ನಲ್ಲಿ 500ಕ್ಕೂ ಹೆಚ್ಚು ವಿಕೆಟ್ ಪಡೆದಿದ್ದಾರೆ.

3 / 8
ತನ್ನ ಕೈಚಳಕದಿಂದ ಕ್ರಿಕೆಟ್ ಮೈದಾನದಲ್ಲಿ ಸಾಕಷ್ಟು ಹೆಸರು ಗಳಿಸಿರುವ ಅಶ್ವಿನ್ ಸಂಪತ್ತಿನ ಗಳಿಕೆಯಲ್ಲೂ ಹಿಂದೆ ಬಿದ್ದವರಲ್ಲ. ಅಶ್ವಿನ್ ಅವರ ಒಟ್ಟು ಸಂಪತ್ತು 100 ಕೋಟಿಗೂ ಹೆಚ್ಚು ಎಂದು ಹೇಳಲಾಗುತ್ತದೆ. ಮಾಧ್ಯಮ ವರದಿಗಳ ಪ್ರಕಾರ, ಅಶ್ವಿನ್ ಒಟ್ಟು 132 ಕೋಟಿ ಮೌಲ್ಯದ ಆಸ್ತಿಯ ಒಡೆಯರಾಗಿದ್ದಾರೆ.

4 / 8
ರವಿಚಂದ್ರನ್ ಅಶ್ವಿನ್ ಕ್ರಿಕೆಟ್ ಜೊತೆಗೆ ಜಾಹೀರಾತಿನಿಂದಲೂ ಸಾಕಷ್ಟು ಸಂಪಾದಿಸುತ್ತಾರೆ. ಇದಲ್ಲದೆ ಬಿಸಿಸಿಐ ಕೇಂದ್ರ ಗುತ್ತಿಗೆಯಲ್ಲಿ ಎ ದರ್ಜೆಯ ಆಟಗಾರನಾಗಿರುವ ಅಶ್ವಿನ್ ಬಿಸಿಸಿಐನಿಂದ ಪ್ರತಿ ವರ್ಷ 5 ಕೋಟಿ ರೂ. ವೇತನ ಪಡೆಯುತ್ತಾರೆ. ಹಾಗೆಯೇ ಅಶ್ವಿನ್ ಐಪಿಎಲ್​ನಲ್ಲೂ ಭಾರಿ ಮೊತ್ತದ ಸಂಭಾವನೆ ಪಡೆಯುತ್ತಾರೆ.

5 / 8
2021 ರಿಂದ ರಾಜಸ್ಥಾನ್ ರಾಯಲ್ಸ್ ಪರ ಆಡುತ್ತಿದ್ದ ಅಶ್ವಿನ್​ಗೆ ಪ್ರತಿ ಆವೃತ್ತಿಗೆ 5 ಕೋಟಿ ರೂ. ವೇತನ ನೀಡಲಾಗುತ್ತಿತ್ತು. ಇದೀಗ ತನ್ನ ತವರು ತಂಡವನ್ನು ಸೇರಿಕೊಂಡಿರುವ ಅಶ್ವಿನ್​ಗೆ ಚೆನ್ನೈ ಸೂಪರ್​ಕಿಂಗ್ಸ್ ಫ್ರಾಂಚೈಸಿ ಪ್ರತಿ ಆವೃತ್ತಿಗೆ 9.75 ಕೋಟಿ ರೂ. ವೇತನ ನೀಡಲಿದೆ.

6 / 8
ಇದಲ್ಲದೆ Spacemakers, Coco Studio Tamil, Bombay Shaving Company, Manna Foods, Aristocrat Bags, Myntra, Oppo, Move, and Dream11 ನ ಜಾಹೀರಾತುಗಳಿಂದಲೂ ಅಶ್ವಿನ್​ಗೆ ಸಾಕಷ್ಟು ಆದಾಯ ಬರುತ್ತಿದೆ.

7 / 8
17 ಸೆಪ್ಟೆಂಬರ್ 1986 ರಂದು ಜನಿಸಿದ ಅಶ್ವಿನ್ ಅವರು ಚೆನ್ನೈನಲ್ಲಿ ವಾಸವಿರುವ ಮನೆಯ ಬೆಲೆ 9 ಕೋಟಿ ಎಂದು ಹೇಳಲಾಗುತ್ತದೆ. ಹಾಗೆಯೇ ಅಶ್ವಿನ್ ಅವರಿಗೂ ಐಷಾರಾಮಿ ಕಾರುಗಳೆಂದರೆ ಒಲವು. ಅವರ ಬಳಿ ಐಷಾರಾಮಿ ಬ್ರಾಂಡ್ ಕಾರುಗಳಿವೆ. ಅವರ ಬಳಿ Audi Q7 SUV, ರೋಲ್ಸ್ ರಾಯ್ಸ್ ಕಾರು ಕೂಡ ಇದೆ. ಈ ಕಾರಿನ ಬೆಲೆ ಸುಮಾರು 6 ಕೋಟಿ ಎಂದು ಹೇಳಲಾಗುತ್ತಿದೆ.

8 / 8

Published On - 4:32 pm, Wed, 18 December 24

Follow us
ಬೆಂಗಳೂರು ಬೆಳೆದರೆ ಅದು ರಾಜ್ಯದ ಬೆಳವಣಿಗೆ ಅಲ್ಲ: ಲಕ್ಷ್ಮಣ ಸವದಿ

ಮತ್ತೇ ಮುನ್ನೆಲೆಗೆ ಬಂದ ಐಎಎಸ್ ಮತ್ತು ಐಪಿಎಸ್ ಅಧಿಕಾರಿಣಿಗಳ ಜಗಳ

ಯತ್ನಾಳ್ ಆರೋಪಗಳಿಗೆ ಕೌಂಟರ್ ನೀಡಿದ ಖರ್ಗೆ ಮತ್ತು ಎಂಬಿ ಪಾಟೀಲ್

ಉತ್ತರ ಕರ್ನಾಟಕದ ಭವ್ಯ ಪರಂಪರೆಯನ್ನು ಸದನದಲ್ಲಿ ವಿವರಿಸಿದ ಯತ್ನಾಳ್

ಬಿಳಿಗಿರಿರಂಗನಬೆಟ್ಟ ಮುಖ್ಯರಸ್ತೆಯಲ್ಲಿ ಕಾಡಾನೆಗಳ ಹಿಂಡು, ಹುಲಿ ಪ್ರತ್ಯಕ್ಷ

ನಿವೃತ್ತಿ ಘೋಷಣೆಗೂ ಮುನ್ನ ವಿರಾಟ್ ಕೊಹ್ಲಿ ಮುಂದೆ ಕಣ್ಣೀರಿಟ್ಟ ಅಶ್ವಿನ್

ಸರ್ಕಾರೀ ಆಸ್ಪತ್ರೆಗಳ ವಿಷಯದಲ್ಲಿ ನೆಗೆಟಿವ್ ಮಾತು ಸರಿಯಲ್ಲ: ಕೋನರೆಡ್ಡಿ

ಕಣ್ಣೀರು ಅದುಮಿಟ್ಟು ನಿವೃತ್ತಿ ಘೋಷಿಸಿದ ಅಶ್ವಿನ್

ದರ್ಶನ್​ಗೆ ನಡೆದಾಡಲು ಮಗನ ಆಸರೆ; ಕುಂಟುತ್ತಲೇ ಕಾರು ಏರಿದ ನಟ

ಆಸ್ಪತ್ರೆಯಿಂದ ದರ್ಶನ್ ಡಿಸ್ಚಾರ್ಜ್​; ಶಸ್ತ್ರಚಿಕಿತ್ಸೆ ಇಲ್ಲದೆ ಹೊರ ಬಂದ ನಟ