Updated on: Jun 25, 2023 | 10:08 PM
Indian Players In MLC 2023: ಕ್ರಿಕೆಟ್ ಅಂಗಳಕ್ಕೆ ಮತ್ತೊಂದು ಹೊಸ ಲೀಗ್ ಸೇರ್ಪಡೆಯಾಗುತ್ತಿದೆ. ಜುಲೈ 13 ರಿಂದ ಯುಎಸ್ಎನಲ್ಲಿ ಮೇಜರ್ ಲೀಗ್ ಕ್ರಿಕೆಟ್ ಟೂರ್ನಿ ಶುರುವಾಗುತ್ತಿದ್ದು, ಈ ಲೀಗ್ನಲ್ಲಿ ಒಟ್ಟು 6 ತಂಡಗಳು ಕಣಕ್ಕಿಳಿಯುತ್ತಿವೆ.
ವಿಶೇಷ ಎಂದರೆ ಈ ಆರು ತಂಡಗಳಲ್ಲಿ 4 ತಂಡಗಳು ಐಪಿಎಲ್ ಫ್ರಾಂಚೈಸಿ ಮಾಲೀಕರ ಒಡೆತನದಲ್ಲಿದೆ. ಟೆಕ್ಸಾಸ್ ಸೂಪರ್ ಕಿಂಗ್ಸ್ (CSK) , ಲಾಸ್ ಏಂಜಲೀಸ್ ನೈಟ್ ರೈಡರ್ಸ್ (KKR) , ಸಿಯಾಟಲ್ ಓರ್ಕಾಸ್ (ಡೆಲ್ಲಿ ಕ್ಯಾಪಿಟಲ್ಸ್), ಎಂಐ ನ್ಯೂಯಾರ್ಕ್ (ಮುಂಬೈ ಇಂಡಿಯನ್ಸ್) ತಂಡಗಳ ಜೊತೆ ಸ್ಯಾನ್ ಫ್ರಾನ್ಸಿಸ್ಕೋ ಯುನಿಕಾರ್ನ್ಸ್ ಮತ್ತು ವಾಷಿಂಗ್ಟನ್ ಫ್ರೀಡಮ್ ಟೀಮ್ಗಳು ಕಣಕ್ಕಿಳಿಯಲಿವೆ.
ಇನ್ನು ಈ ಲೀಗ್ನಲ್ಲಿ ಒಟ್ಟು 12 ಭಾರತೀಯ ಆಟಗಾರರು ಕಾಣಿಸಿಕೊಳ್ಳುತ್ತಿರುವುದು ವಿಶೇಷ. ಅಂದರೆ ಈ ಹಿಂದೆ ಕಿರಿಯರ ಭಾರತ ತಂಡ, ಐಪಿಎಲ್ ಹಾಗೂ ರಣಜಿ ಟೂರ್ನಿಗಳಲ್ಲಿ ಕಣಕ್ಕಿಳಿದಿದ್ದ ಕೆಲ ಆಟಗಾರರು ಇದೀಗ ಭಾರತೀಯ ಕ್ರಿಕೆಟ್ಗೆ ಗುಡ್ ಬೈ ಹೇಳಿ ವಿದೇಶಿ ಲೀಗ್ನತ್ತ ಮುಖ ಮಾಡಿದ್ದಾರೆ. ಹೀಗೆ ಚೊಚ್ಚಲ ಮೇಜರ್ ಲೀಗ್ ಕ್ರಿಕೆಟ್ ಟೂರ್ನಿಯಲ್ಲಿ ಕಣಕ್ಕಿಳಿಯುವ 12 ಭಾರತೀಯ ಮೂಲದ ಆಟಗಾರರ ಪಟ್ಟಿ ಇಲ್ಲಿದೆ.
ಅಂಬಾಟಿ ರಾಯುಡು - ಟೆಕ್ಸಾಸ್ ಸೂಪರ್ ಕಿಂಗ್ಸ್
ಸ್ಮಿತ್ ಪಟೇಲ್ - ಸ್ಯಾನ್ ಫ್ರಾನ್ಸಿಸ್ಕೋ ಯುನಿಕಾರ್ನ್ಸ್
ತೆಜೀಂದರ್ ಸಿಂಗ್ - ಸ್ಯಾನ್ ಫ್ರಾನ್ಸಿಸ್ಕೋ ಯುನಿಕಾರ್ನ್ಸ್
ಸರಬ್ಜಿತ್ ಲಡ್ಡಾ - MI ನ್ಯೂಯಾರ್ಕ್
ಹರ್ಮೀತ್ ಸಿಂಗ್ - ಸಿಯಾಟಲ್ ಓರ್ಕಾಸ್
ಸುಜಿತ್ ಗೌಡ - ವಾಷಿಂಗ್ಟನ್ ಫ್ರೀಡಮ್
ಉನ್ಮುಕ್ತ್ ಚಂದ್ - ಲಾಸ್ ಏಂಜಲೀಸ್ ನೈಟ್ ರೈಡರ್ಸ್
ಚೈತನ್ಯ ಬಿಷ್ಣೋಯ್ - ಸ್ಯಾನ್ ಫ್ರಾನ್ಸಿಸ್ಕೋ ಯುನಿಕಾರ್ನ್ಸ್
ಸೌರಭ್ ನೇತ್ರವಲ್ಕರ್ - ವಾಷಿಂಗ್ಟನ್ ಫ್ರೀಡಮ್
ಸಂಜಯ್ ಕೃಷ್ಣಮೂರ್ತಿ - ಸ್ಯಾನ್ ಫ್ರಾನ್ಸಿಸ್ಕೋ ಯುನಿಕಾರ್ನ್ಸ್
ಅಖಿಲೇಶ್ ಬೊಡುಗುಮ್ - ವಾಷಿಂಗ್ಟನ್ ಫ್ರೀಡಮ್
ಮಿಲಿಂದ್ ಕುಮಾರ್ - ಟೆಕ್ಸಾಸ್ ತಂಡ