MLC 2023: ಅಮೆರಿಕನ್ ಟಿ20 ಲೀಗ್ನಲ್ಲಿ ಕನ್ನಡಿಗ..!
MLC 2023 Teams: ಜುಲೈ 13 ರಿಂದ ಆರಂಭವಾಗಲಿರುವ ಚೊಚ್ಚಲ ಮೇಜರ್ ಕ್ರಿಕೆಟ್ ಲೀಗ್ನಲ್ಲಿ ಟೆಕ್ಸಾಸ್ ಸೂಪರ್ ಕಿಂಗ್ಸ್ (CSK) , ಲಾಸ್ ಏಂಜಲೀಸ್ ನೈಟ್ ರೈಡರ್ಸ್ (KKR) , ಸಿಯಾಟಲ್ ಓರ್ಕಾಸ್ (ಡೆಲ್ಲಿ ಕ್ಯಾಪಿಟಲ್ಸ್), ಎಂಐ ನ್ಯೂಯಾರ್ಕ್ (ಮುಂಬೈ ಇಂಡಿಯನ್ಸ್), ಸ್ಯಾನ್ ಫ್ರಾನ್ಸಿಸ್ಕೋ ಯುನಿಕಾರ್ನ್ಸ್ ಮತ್ತು ವಾಷಿಂಗ್ಟನ್ ಫ್ರೀಡಮ್ ತಂಡಗಳು ಪ್ರಶಸ್ತಿಗಾಗಿ ಸೆಣಸಲಿದೆ.
Updated on: Jun 25, 2023 | 8:32 PM

MLC 2023: ಜುಲೈ 13 ರಿಂದ ಶುರುವಾಗಲಿರುವ ಮೇಜರ್ ಲೀಗ್ ಕ್ರಿಕೆಟ್ ಟೂರ್ನಿಯಲ್ಲಿ ಕರ್ನಾಟಕದ ಆಟಗಾರರೊಬ್ಬರು ಕಾಣಿಸಿಕೊಳ್ಳಲಿದ್ದಾರೆ. ಯುಎಸ್ಎನಲ್ಲಿ ನಡೆಯಲಿರುವ ಈ ಟೂರ್ನಿಯಲ್ಲಿ ವಾಷಿಂಗ್ಟನ್ ಫ್ರೀಡಂ ತಂಡದಲ್ಲಿ ಕನ್ನಡಿಗ ಸುಜಿತ್ ಗೌಡ ಸ್ಥಾನ ಪಡೆದಿದ್ದಾರೆ.

ಸುಜಿತ್ ಗೌಡ ಈ ಹಿಂದೆ ಅಂಡರ್ 14 ರಿಂದ ಅಂಡರ್ 23 ರವರೆಗಿನ ಎಲ್ಲಾ ವಯೋಮಾನದ ತಂಡದಲ್ಲೂ ಕರ್ನಾಟಕವನ್ನು ಪ್ರತಿನಿಧಿಸಿದ್ದರು. ಅದರಲ್ಲೂ ಅಂಡರ್-23 ಟೂರ್ನಿಯ ಎರಡು ಸೀಸನ್ಗಳಲ್ಲಿ 500 ಕ್ಕೂ ಹೆಚ್ಚು ರನ್ ಕಲೆಹಾಕಿ ಮಿಂಚಿದ್ದರು. ಇದಾಗ್ಯೂ ಕರ್ನಾಟಕದ ಹಿರಿಯರ ತಂಡದಲ್ಲಿ ಅವಕಾಶ ಸಿಕ್ಕಿರಲಿಲ್ಲ.

ಹಾಗೆಯೇ ಪ್ರೀಮಿಯರ್ ಲೀಗ್ನಲ್ಲಿ (ಕೆಪಿಎಲ್) ಹುಬ್ಬಳ್ಳಿ ಟೈಗರ್ಸ್, ಶಿವಮೊಗ್ಗ ಸ್ಟ್ರೈಕರ್ಸ್ ಪರ ಆಡಿದ್ದರು. ಇದಾಗ್ಯೂ ಹಿರಿಯರ ತಂಡಕ್ಕೆ ಬುಲಾವ್ ಸಿಗದ ಕಾರಣ ಸುಜಿತ್ ಗೌಡ ಭಾರತೀಯ ಕ್ರಿಕೆಟ್ಗೆ ಗುಡ್ ಬೈ ಹೇಳಿದ್ದರು.

ಅಲ್ಲದೆ 2021 ರಲ್ಲಿ ಯುಎಸ್ಎನಲ್ಲಿ ನಡೆದ ಮೈನರ್ ಲೀಗ್ ಟಿ20 ಟೂರ್ನಿಯಲ್ಲಿ ಕಾಣಿಸಿಕೊಳ್ಳುವ ಮೂಲಕ ವಿದೇಶದಲ್ಲಿ ಹೊಸ ಇನಿಂಗ್ಸ್ ಆರಂಭಿಸಿದ್ದರು. ಇದೀಗ ಮೇಜರ್ ಕ್ರಿಕೆಟ್ ಲೀಗ್ನಲ್ಲೂ ಸುಜಿತ್ ಗೌಡ ಅವಕಾಶ ಪಡೆದಿದ್ದಾರೆ.

ವಿಶೇಷ ಎಂದರೆ ಮೇಜರ್ ಕ್ರಿಕೆಟ್ ಲೀಗ್ನಲ್ಲಿ ಒಟ್ಟು 6 ತಂಡಗಳು ಕಣಕ್ಕಿಳಿಯಲಿದ್ದು, ಈ ಆರು ತಂಡಗಳಲ್ಲಿ ನಾಲ್ಕು ತಂಡಗಳನ್ನು ಐಪಿಎಲ್ ಫ್ರಾಂಚೈಸಿಗಳು ಖರೀದಿಸಿವೆ.

ಅದರಂತೆ ಜುಲೈ 13 ರಿಂದ ಆರಂಭವಾಗಲಿರುವ ಚೊಚ್ಚಲ ಮೇಜರ್ ಕ್ರಿಕೆಟ್ ಲೀಗ್ನಲ್ಲಿ ಟೆಕ್ಸಾಸ್ ಸೂಪರ್ ಕಿಂಗ್ಸ್ (CSK) , ಲಾಸ್ ಏಂಜಲೀಸ್ ನೈಟ್ ರೈಡರ್ಸ್ (KKR) , ಸಿಯಾಟಲ್ ಓರ್ಕಾಸ್ (ಡೆಲ್ಲಿ ಕ್ಯಾಪಿಟಲ್ಸ್), ಎಂಐ ನ್ಯೂಯಾರ್ಕ್ (ಮುಂಬೈ ಇಂಡಿಯನ್ಸ್), ಸ್ಯಾನ್ ಫ್ರಾನ್ಸಿಸ್ಕೋ ಯುನಿಕಾರ್ನ್ಸ್ ಮತ್ತು ವಾಷಿಂಗ್ಟನ್ ಫ್ರೀಡಮ್ ತಂಡಗಳು ಪ್ರಶಸ್ತಿಗಾಗಿ ಸೆಣಸಲಿದೆ.
