- Kannada News Photo gallery Cricket photos IPL 2021: England Stars Jonny Bairstow, Chris Woakes And Dawid Malan Pull Out Of UAE
IPL 2021: ಐಪಿಎಲ್ ತಂಡಗಳಿಗೆ ಬಿಗ್ ಶಾಕ್: ಟೂರ್ನಿಯಿಂದ ಹಿಂದೆ ಸರಿದ 3 ಸ್ಟಾರ್ ಆಟಗಾರರು
IPL 2021: ಈ ಮೂವರು ಆಟಗಾರರು ಕೊರೋನಾ ಸೋಂಕು ಭೀತಿ ಹಿನ್ನೆಲೆಯಲ್ಲಿ ಟೂರ್ನಿಯಿಂದ ಹೊರಗುಳಿಯುವ ನಿರ್ಧಾರ ಮಾಡಿದ್ದಾರೆ ಎಂದು ಹೇಳಲಾಗಿದೆ.
Updated on: Sep 11, 2021 | 5:05 PM

ಈ ಹಿಂದೆ ಹೊಸ ಎರಡು ತಂಡಗಳ ಮಾರಾಟದಿಂದ ಬಿಸಿಸಿಐ 10 ಸಾವಿರ ಕೋಟಿ ರೂ. ಆದಾಯಗಳಿಸುವ ಇರಾದೆಯಲ್ಲಿತ್ತು. ಆದರೆ ಈ ಹರಾಜಿನಲ್ಲಿನ ಪೈಪೋಟಿಯಿಂದಾಗಿ ನಿರೀಕ್ಷೆಗೂ ಮೀರಿ ಆದಾಯ ಬಂದಿದೆ. ಅದರಂತೆ ಎರಡು ಹೊಸ ತಂಡಗಳ ಮಾರಾಟದಿಂದ ಬಿಸಿಸಿಐ ಗಳಿಸಿದ್ದು ಬರೋಬ್ಬರಿ 12,715 ಕೋಟಿ. ರೂ.

ವೈಯುಕ್ತಿಕ ಕಾರಣಗಳನ್ನು ನೀಡಿ ಸನ್ರೈಸರ್ಸ್ ಹೈದರಾಬಾದ್ ತಂಡದ ಜಾನಿ ಬೈರ್ಸ್ಟೋ, ಡೆಲ್ಲಿ ಕ್ಯಾಪಿಟಲ್ಸ್ ತಂಡ ಕ್ರಿಸ್ ವೋಕ್ಸ್ ಹಾಗೂ ಪಂಜಾಬ್ ಕಿಂಗ್ಸ್ ತಂಡದ ಡೇವಿಡ್ ಮಲಾನ್ ಐಪಿಎಲ್ ದ್ವಿತಿಯಾರ್ಧದಿಂದ ಹೊರಗುಳಿದಿದ್ದಾರೆ.

ಈ ಮೂವರು ಆಟಗಾರರು ಕೊರೋನಾ ಸೋಂಕು ಭೀತಿ ಹಿನ್ನೆಲೆಯಲ್ಲಿ ಟೂರ್ನಿಯಿಂದ ಹೊರಗುಳಿಯುವ ನಿರ್ಧಾರ ಮಾಡಿದ್ದಾರೆ ಎಂದು ಹೇಳಲಾಗಿದೆ. ಈಗಾಗಲೇ ಇಂಗ್ಲೆಂಡ್ನಲ್ಲಿದ್ದ ಭಾರತೀಯ ಐಪಿಎಲ್ ಆಟಗಾರರನ್ನು ಫ್ರಾಂಚೈಸಿಗಳು ವಿಶೇಷ ಚಾರ್ಟೆಡ್ ವಿಮಾನಗಳ ಮೂಲಕ ಯುಎಇಗೆ ಕರೆಸಿಕೊಂಡಿದೆ.

ಒಟ್ಟಿನಲ್ಲಿ ಐಪಿಎಲ್ನಲ್ಲಿ 2011ರ ಬಳಿಕ ಮತ್ತೊಮ್ಮೆ 10 ತಂಡಗಳನ್ನು ಕಣಕ್ಕಿಳಿಯಲ್ಲಿದ್ದು, ಅದರಂತೆ ಯಾವ ಹೊಸ ತಂಡಗಳು ಸೇರ್ಪಡೆಯಾಗಲಿದೆ ಕಾದು ನೋಡಬೇಕಿದೆ.

ಬಿಸಿಸಿಐ ಮೂಲಗಳ ಮಾಹಿತಿ ಪ್ರಕಾರ, 2 ತಂಡಗಳ ಫ್ರಾಂಚೈಸಿಗಾಗಿ ಒಟ್ಟು 6 ನಗರಗಳನ್ನು ಆಯ್ಕೆ ಮಾಡಲಾಗಿದೆ. ಈ ನಗರಗಳ ಸ್ಟೇಡಿಯಂಗಳನ್ನು ಕೇಂದ್ರೀಕರಿಸಿ ತಂಡಗಳ ಬಿಡ್ಡಿಂಗ್ ನಡೆಯಲಿದೆ. ಅದರಂತೆ ಹೊಸ 2 ತಂಡಗಳ ಕೇಂದ್ರಗಳಾಗಿ ಲಕ್ನೋ, ಅಹಮದಾಬಾದ್, ರಾಂಚಿ, ಕಟಕ್, ಗುವಾಹಟಿ ಮತ್ತು ಧರ್ಮಶಾಲಾ ನಗರಗಳ ಸ್ಟೇಡಿಯಂಗಳನ್ನು ಆಯ್ಕೆ ಮಾಡಲಾಗಿದೆ.

ಜಾನಿ ಬೈರ್‌ಸ್ಟೊ ಸನ್ರೈಸರ್ಸ್ ಹೈದರಾಬಾದ್ ತಂಡ ಖಾಯಂ ಸದಸ್ಯರಾಗಿದ್ದು, ಮೊದಲಾರ್ಧದಲ್ಲಿ ಎಲ್ಲಾ ಏಳು ಪಂದ್ಯಗಳನ್ನು ಆಡಿದ್ದರು. ಅಲ್ಲದೆ 248 ರನ್ ಕಲೆಹಾಕಿ ತಂಡಕ್ಕೆ ಉತ್ತಮ ಕಾಣಿಕೆ ನೀಡಿದ್ದರು.

ಇನ್ನೊಂದೆಡೆ ಇಂಗ್ಲೆಂಡ್ ಆಲ್ರೌಂಡರ್ ಕ್ರಿಸ್ ವೋಕ್ಸ್ ಡೆಲ್ಲಿ ಕ್ಯಾಪಿಟಲ್ಸ್ ಪರ ಒಪ್ಪಂದ ಮಾಡಿಕೊಂಡಿದ್ದರು. ಮೊದಲಾರ್ಧದಲ್ಲಿ ಹೊರಗುಳಿದಿದ್ದ ವೋಕ್ಸ್ ದ್ವಿತಿಯಾರ್ಧದಲ್ಲಿ ಕಣಕ್ಕಿಳಿಯುವುದಾಗಿ ತಿಳಿಸಿದ್ದರು. ಇದೀಗ ಟೂರ್ನಿಯಿಂದ ಹಿಂದೆ ಸರಿದಿದ್ದಾರೆ ಎನ್ನಲಾಗಿದೆ.

ಇನ್ನು ಪಂಜಾಬ್ ಕಿಂಗ್ಸ್ ಪರ 1 ಪಂದ್ಯದಲ್ಲಿ ಕಣಕ್ಕಿಳಿದಿದ್ದ ವಿಶ್ವದ ನಂ .1 ಟಿ20 ಬ್ಯಾಟ್ಸ್ಮನ್ ಡೇವಿಡ್ ಮಲಾನ್ ಸಹ ದ್ವಿತಿಯಾರ್ಧಕ್ಕೆ ಅಲಭ್ಯರಾಗಲಿದ್ದಾರೆ ಎಂದು ವರದಿ ತಿಳಿಸಿದೆ. ಒಟ್ಟಿನಲ್ಲಿ ಮೂವರು ಆಟಗಾರರು ವಾರಗಳು ಬಾಕಿ ಇರುವಾಗ ಹಿಂದೆ ಸರಿಯುತ್ತಿರುವುದು ಅಚ್ಚರಿ ಮೂಡಿಸಿದೆ.




