IPL 2022: ಆರ್‌ಸಿಬಿ ವಿರುದ್ಧದ ಪಂದ್ಯದಲ್ಲಿ 3 ವಿಕೆಟ್ ಪಡೆದು ಐಪಿಎಲ್‌ನಲ್ಲಿ ವಿಶಿಷ್ಟ ದಾಖಲೆ ಬರೆದ ಅಶ್ವಿನ್..!
IPL 2022: ಆರ್‌ಸಿಬಿ ವಿರುದ್ಧ ಅಶ್ವಿನ್ 4 ಓವರ್‌ಗಳ ಬೌಲಿಂಗ್‌ನಲ್ಲಿ 17 ರನ್ ನೀಡಿ 3 ವಿಕೆಟ್ ಪಡೆದರು. ಇದರಲ್ಲಿ ಅವರು ರಜತ್ ಪಾಟಿದಾರ್ ಅವರ ಮೊದಲ ವಿಕೆಟ್ ಪಡೆದರು. ಇದರೊಂದಿಗೆ ಐಪಿಎಲ್‌ನಲ್ಲಿ ತಮ್ಮ 150 ವಿಕೆಟ್‌ಗಳನ್ನು ಪೂರೈಸಿದರು.
ಐಪಿಎಲ್ 2022 ರ ಮೆಗಾ ಹರಾಜಿನಲ್ಲಿ ಅಶ್ವಿನ್ ಬೆಲೆ 5 ಕೋಟಿ ಆಗಿತ್ತು. ಆದರೆ ಅವರ ಆಟ ನೋಡಿದರೆ ಈ ಮೊತ್ತ ಕಡಿಮೆಯೇನೋ ಎನಿಸುತ್ತಿದೆ. ಏಕೆಂದರೆ, 5 ಕೋಟಿ ತಕ್ಕಂತ ಆಟವನ್ನು ಅಶ್ವಿನ್ ಆಡಿದ್ದಾರೆ. ಏಪ್ರಿಲ್ 26 ರ ಸಂಜೆ RCB ವಿರುದ್ಧ ನಡೆದ ಪಂದ್ಯದಲ್ಲಿ, ಅಶ್ವಿನ್ ವಿಶಿಷ್ಟ ದಾಖಲೆ ಬರೆದರು.
1 / 4
RCB ವಿರುದ್ಧದ ಪಂದ್ಯದಲ್ಲಿ ತಮ್ಮ 150 IPL ವಿಕೆಟ್‌ಗಳನ್ನು ಪೂರೈಸುವ ಮೊದಲು, ಅಶ್ವಿನ್ ಕೂಡ 188 ಸ್ಟ್ರೈಕ್ ರೇಟ್‌ನಲ್ಲಿ ಬ್ಯಾಟ್ ಮಾಡಿದರು. ಅವರ ಸ್ಟ್ರೈಕ್ ರೇಟ್ ಪಂದ್ಯದಲ್ಲಿ ಯಾವುದೇ ಬ್ಯಾಟ್ಸ್‌ಮನ್‌ಗಳಿಗಿಂತ ಹೆಚ್ಚಿತ್ತು. ಅಷ್ಟೇ ಅಲ್ಲ, ಪಂದ್ಯದಲ್ಲಿ ಅತಿ ಹೆಚ್ಚು ಬೌಂಡರಿಗಳನ್ನು ಬಾರಿಸಿದ ಬೌಲರ್ ಕೂಡ ಎನಿಸಿಕೊಂಡರು. ಅವರ ಎಕಾನಮಿ ಪಂದ್ಯದಲ್ಲಿ ಇತರ ಎಲ್ಲ ಬೌಲರ್‌ಗಳಿಗಿಂತ ಉತ್ತಮವಾಗಿತ್ತು. ಅವರು ತಮ್ಮ ಕೋಟಾದ 4 ಓವರ್‌ಗಳಲ್ಲಿ ಕೇವಲ ಒಂದು ಬೌಂಡರಿಯನ್ನು ಮಾತ್ರ ನೀಡಿ 11 ಡಾಟ್ ಎಸೆದರು.