IPL 2022: 3 ವರ್ಷಗಳವರೆಗೆ ಧೋನಿಯೇ ಕಿಂಗ್: ಡೆಲ್ಲಿಗೆ ಪಂಟರ್​ ನಾಯಕ

| Updated By: ಝಾಹಿರ್ ಯೂಸುಫ್

Updated on: Nov 25, 2021 | 2:45 PM

IPL 2022 Mega Auction: 2022ರ ಐಪಿಎಲ್​ ಮೆಗಾ ಹರಾಜಿಗೂ ಮುನ್ನ ಎಲ್ಲಾ ಫ್ರಾಂಚೈಸಿಗಳು ತಲಾ 4 ಆಟಗಾರರನ್ನು ರಿಟೈನ್ ಮಾಡಿಕೊಳ್ಳಬಹುದು. ಅದರಂತೆ 8 ಫ್ರಾಂಚೈಸಿಗೆ ಮೂವರು ಭಾರತೀಯ ಆಟಗಾರರು+ಒಬ್ಬರ ವಿದೇಶಿ ಆಟಗಾರನನ್ನು ಉಳಿಸಿಕೊಳ್ಳಬಹುದು.

1 / 5
ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್ 15 ಸಿದ್ಧತೆಗಳು ಶುರುವಾಗಿದೆ. ಮುಂದಿನ ಸೀಸನ್​ಗಾಗಿ ಮೆಗಾ ಹರಾಜು ನಡೆಯಲಿದ್ದು, ಅದಕ್ಕೂ ಮುನ್ನ 8 ಫ್ರಾಂಚೈಸಿಗಳು ಆಟಗಾರರ ರಿಟೈನ್ ಪ್ರಕ್ರಿಯೆಗೆ ಚಾಲನೆ ನೀಡಿದೆ. ಅದರಂತೆ ಬಹುತೇಕ ತಂಡಗಳು ಸ್ಟಾರ್ ಆಟಗಾರರನ್ನು ಉಳಿಸಿಕೊಳ್ಳುವುದು ಖಚಿತ. ಆದರೆ ಕೆಲ ಆಟಗಾರರು ಮೆಗಾ ಹರಾಜಿನಲ್ಲಿ ಕಾಣಿಸಿಕೊಳ್ಳಲು ಬಯಸಿದ್ದು, ಹೀಗಾಗಿ ಈ ಹಿಂದಿನ ತಂಡಗಳಿಂದ ಹೊರಬರಲಿದ್ದಾರೆ. ಈ ಪಟ್ಟಿಯಲ್ಲಿ ಕೆಎಲ್ ರಾಹುಲ್, ಶ್ರೇಯಸ್ ಅಯ್ಯರ್ ಹಾಗೂ ಡೇವಿಡ್ ವಾರ್ನರ್​ ಹೆಸರುಗಳಿವೆ.

2 / 5
ಮತ್ತೊಂದೆಡೆ ಮೆಗಾ ಹರಾಜಿಗೂ ಮುನ್ನ ಚೆನ್ನೈ ಸೂಪರ್ ಕಿಂಗ್ಸ್​ ತಂಡ ಪ್ರಮುಖ ಆಟಗಾರರನ್ನು ಉಳಿಸಿಕೊಳ್ಳಲಿದೆ. ಈ ಪಟ್ಟಿಯಲ್ಲಿ ಸಿಎಸ್​ಕೆ ನಾಯಕ ಮಹೇಂದ್ರ ಸಿಂಗ್ ಧೋನಿಯ ಹೆಸರು ಮುಂಚೂಣಿಯಲ್ಲಿದೆ. ಈ ಹಿಂದೆ ಧೋನಿ ಹರಾಜಿನಲ್ಲಿ ಕಾಣಿಸಿಕೊಳ್ಳುವುದಾಗಿ ತಿಳಿಸಿದ್ದರು. ಆದರೆ ಇದೀಗ ಅವರ ಮನವೊಲಿಸುವಲ್ಲಿ ಸಿಎಸ್​ಕೆ ಫ್ರಾಂಚೈಸಿ ಯಶಸ್ವಿಯಾಗಿದೆ ಎಂದು ತಿಳಿದು ಬಂದಿದೆ. ಅಷ್ಟೇ ಅಲ್ಲದೆ ಮುಂದಿನ 3 ವರ್ಷಗಳವರೆಗೆ ತಂಡದಲ್ಲೇ ಉಳಿಸಿಕೊಳ್ಳಲು ಅವರನ್ನು ಒಪ್ಪಿಸಿದ್ದಾರೆ. ಹೀಗಾಗಿ ಧೋನಿ ಮುಂದಿನ ಸೀಸನ್​ನಲ್ಲೂ ಸಿಎಸ್​ಕೆ ತಂಡದ ನಾಯಕನಾಗಿ ಮುಂದುವರೆಯಲಿದ್ದಾರೆ.

3 / 5
ಇನ್ನೊಂದೆಡೆ ಡೆಲ್ಲಿ ಕ್ಯಾಪಿಟಲ್ಸ್​ ಫ್ರಾಂಚೈಸಿ ರಿಷಭ್ ಪಂತ್ ಅವರನ್ನು ಉಳಿಸಿಕೊಳ್ಳುವುದು ಖಚಿತ. ಈಗಾಗಲೇ ಡೆಲ್ಲಿ ಕೂಡ ರಿಟೈನ್ ಪಟ್ಟಿ ಸಿದ್ಧಪಡಿಸಿದ್ದು, ಈ ಪಟ್ಟಿಯಲ್ಲಿ ಪ್ರಮುಖ ಆಟಗಾರ ಶ್ರೇಯಸ್ ಅಯ್ಯರ್ ಅವರ ಹೆಸರಿಲ್ಲ ಎಂದು ತಿಳಿದು ಬಂದಿದೆ. ಹೀಗಾಗಿ ಮುಂಬರುವ ಸೀಸನ್​ನಲ್ಲೂ ಜೂ. ಪಂಟರ್ ಖ್ಯಾತಿಯ ರಿಷಭ್ ಪಂತ್ ಡೆಲ್ಲಿ ಕ್ಯಾಪಿಟಲ್ಸ್​ ತಂಡವನ್ನು ಮುನ್ನಡೆಸಲಿದ್ದಾರೆ.

4 / 5
 ಹಾಗೆಯೇ ಪಂಜಾಬ್‌ ಕಿಂಗ್ಸ್‌ ತಂಡದಿಂದ ಕೆಎಲ್‌ ರಾಹುಲ್‌ ಹೊರಬರುತ್ತಿರುವುದು ಕೂಡ ಖಾತ್ರಿಯಾಗಿದೆ. ರಾಹುಲ್ ಅವರ ಖರೀದಿಗೆ ಲಕ್ನೋ ಫ್ರಾಂಚೈಸಿ ಆಸಕ್ತಿ ಹೊಂದಿದ್ದು, ಹೀಗಾಗಿ ಅವರು ಹೊಸ ತಂಡದ ಪರ ಕಣಕ್ಕಿಳಿಯಲಿದ್ದಾರೆ ಎಂದು ವರದಿಯಾಗಿದೆ. ಹೀಗಾಗಿ ಮೆಗಾ ಹರಾಜಿಗೂ ಮುನ್ನ ಕೆಎಲ್ ರಾಹುಲ್ ಹೊಸ ತಂಡದ ಪಾಲಾಗುವ ಸಾಧ್ಯತೆಯಿದೆ.

5 / 5
2022ರ ಐಪಿಎಲ್​ ಮೆಗಾ ಹರಾಜಿಗೂ ಮುನ್ನ ಎಲ್ಲಾ ಫ್ರಾಂಚೈಸಿಗಳು  ತಲಾ 4 ಆಟಗಾರರನ್ನು ರಿಟೈನ್ ಮಾಡಿಕೊಳ್ಳಬಹುದು.  ಅದರಂತೆ  8 ಫ್ರಾಂಚೈಸಿಗೆ  ಮೂವರು ಭಾರತೀಯ ಆಟಗಾರರು+ಒಬ್ಬರ ವಿದೇಶಿ ಆಟಗಾರನನ್ನು ಉಳಿಸಿಕೊಳ್ಳಬಹುದು. ಅಥವಾ ಇಬ್ಬರು ಭಾರತೀಯ ಆಟಗಾರರು+ಇಬ್ಬರು ವಿದೇಶಿ ಆಟಗಾರನನ್ನು ಉಳಿಸಿಕೊಳ್ಳಬಹುದು. ಇದರ ಹೊರತಾಗಿ ಮೂವರು, ಇಬ್ಬರು ಹಾಗೂ ಒಬ್ಬ ಆಟಗಾರನನ್ನು ಸಹ ಉಳಿಸಿಕೊಳ್ಳುವ ಆಯ್ಕೆಯಿದೆ. ಇಲ್ಲಿ ನಾಲ್ವರು ಆಟಗಾರರನ್ನು ಉಳಿಸಿಕೊಳ್ಳುವುದಾದರೆ 42 ಕೋಟಿ ರೂ., ಮೂವರು ಆಟಗಾರರಿಗೆ 33 ರೂ. ಕೋಟಿ, ಇಬ್ಬರು ಆಟಗಾರರಿಗೆ 24 ಕೋಟಿ ರೂ ಮತ್ತು ಓರ್ವ ಆಟಗಾರನಿಗೆ 14 ರೂ. ನೀಡಬೇಕಾಗುತ್ತದೆ.