IPL 2022 Mega Auction: ಐಪಿಎಲ್ ಮೆಗಾ ಹರಾಜು ಡೇಟ್ ಫಿಕ್ಸ್..!

| Updated By: ಝಾಹಿರ್ ಯೂಸುಫ್

Updated on: Jan 11, 2022 | 7:35 PM

IPL 2022 Mega Auction Date: ಈ ಬಾರಿ ಸಾವಿರಕ್ಕೂ ಅಧಿಕ ಆಟಗಾರರು ಮೆಗಾ ಹರಾಜಿಗಾಗಿ ಹೆಸರು ನೋಂದಣಿ ಮಾಡಿಕೊಳ್ಳುವ ನಿರೀಕ್ಷೆಯಿದೆ. ಈಗಾಗಲೇ ಎಲ್ಲಾ ಕ್ರಿಕೆಟ್ ಮಂಡಳಿಗೆ ಹಾಗೂ ರಾಜ್ಯ ಕ್ರಿಕೆಟ್ ಸಂಸ್ಥೆಗಳಿಗೆ ಐಪಿಎಲ್​ಗಾಗಿ ಹೆಸರು ನೀಡಿರುವ ಆಟಗಾರರ ಪಟ್ಟಿಯನ್ನು ಸಲ್ಲಿಸುವಂತೆ ಬಿಸಿಸಿಐ ತಿಳಿಸಿದೆ.

1 / 5
ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್ 15  ಗಾಗಿ 10 ಫ್ರಾಂಚೈಸಿ ಸಕಲ ಸಿದ್ದತೆಯಲ್ಲಿದೆ. ಈಗಾಗಲೇ ಹಳೆಯ 8 ಫ್ರಾಂಚೈಸಿಗಳು ಒಟ್ಟು 27 ಆಟಗಾರರನ್ನು ತಂಡದಲ್ಲೇ ಉಳಿಸಿಕೊಂಡಿದೆ. ಇನ್ನು ಹೊಸ ಎರಡು ಫ್ರಾಂಚೈಸಿಗಳಾದ ಲಕ್ನೋ ಹಾಗೂ ಅಹಮದಾಬಾದ್ ತಂಡಗಳು ಸ್ಪೆಷಲ್ ಪಿಕ್ ಆಯ್ಕೆಯ ಮೂಲಕ ತಲಾ ಮೂವರು ಆಟಗಾರರನ್ನು ಆಯ್ಕೆ ಮಾಡಬೇಕಿದೆ. ಇದಾದ ಬಳಿಕ ಮೆಗಾ ಹರಾಜು ನಡೆಯಲಿದೆ.

2 / 5
ಇದೀಗ ಮೆಗಾ ಹರಾಜು ದಿನಾಂಕವನ್ನು ಐಪಿಎಲ್ ಆಡಳಿತ ಮಂಡಳಿ ಖಚಿತಪಡಿಸಿದೆ. ಈ ಮೊದಲು ವರದಿ ಮಾಡಿದಂತೆ ಮೆಗಾ ಹರಾಜು ಫೆಬ್ರವರಿ 12 ಮತ್ತು 13 ರಂದು ಬೆಂಗಳೂರಿನಲ್ಲಿ ನಡೆಯಲಿದೆ  ಎಂಬುದನ್ನು ಐಪಿಎಲ್ ಆಡಳಿತ ಮಂಡಳಿಯು ದೃಢಪಡಿಸಿದೆ. ಅದರಂತೆ ಮುಂದಿನ ತಿಂಗಳ 2ನೇ ವಾರದ ಶನಿವಾರ ಮತ್ತು ಭಾನುವಾರ ಐಪಿಎಲ್​ ಮೆಗಾ ಹರಾಜು ನಡೆಯಲಿದೆ.

3 / 5
ಇನ್ನು ಸಂಜೀವ್ ಗೋಯೆಂಕಾ ಅವರ ಆರ್‌ಪಿಎಸ್‌ಜಿ ಗ್ರೂಪ್ ಒಡೆತನದ ಲಕ್ನೋ  ತಂಡಕ್ಕೆ ಮತ್ತು ಸಿವಿಸಿ ಕ್ಯಾಪಿಟಲ್‌ನ ಅಹಮದಾಬಾದ್ ತಂಡಕ್ಕೆ ಮಂಗಳವಾರ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯಿಂದ (ಬಿಸಿಸಿಐ) ಔಪಚಾರಿಕ ಅನುಮತಿಯನ್ನು ನೀಡಲಾಗಿದೆ. ಹೀಗಾಗಿ ಈ ಎರಡು ತಂಡಗಳು ಸ್ಪೆಷಲ್ ಪಿಕ್ ಆಯ್ಕೆಯ ಮೂಲಕ ಆಟಗಾರರೊಂದಿಗೆ ಒಪ್ಪಂದ ಮಾಡಿಕೊಳ್ಳಬಹುದು. ಅದರಂತೆ 2  ವಾರದೊಳಗೆ (14 ದಿವಸ) ಉಭಯ ತಂಡಗಳು ಆಯ್ಕೆ ಮಾಡಲಾದ ಆಟಗಾರರ ಅಂತಿಮ ಪಟ್ಟಿಯನ್ನು ಸಲ್ಲಿಸಬೇಕಾಗಿದೆ.

4 / 5
ಅಷ್ಟೇ ಅಲ್ಲದೆ ಮುಂದಿನ ಸೀಸನ್​ ಐಪಿಎಲ್​ನಲ್ಲಿ ಶೀರ್ಷಿಕೆ ಪ್ರಾಯೋಜಕತ್ವ ಕೂಡ ಬದಲಾಗಲಿದೆ. ಕಳೆದ ಬಾರಿ ಇದ್ದ ವಿವೋ ಐಪಿಎಲ್ ಬದಲಿಗೆ ಟಾಟಾ ಗ್ರೂಪ್ ಶೀರ್ಷಿಕೆ ಪ್ರಾಯೋಜಕರಾಗಿ ಕಾಣಿಸಿಕೊಳ್ಳಲಿದ್ದಾರೆ. ಅದರಂತೆ ಮುಂದಿನ ಎರಡು ಸೀಸನ್​  TATA IPL 2022-23 ಹೆಸರಿನಲ್ಲಿ ಮೂಡಿ ಬರಲಿದೆ.

5 / 5
ಇನ್ನು ಈ ಬಾರಿ ಸಾವಿರಕ್ಕೂ ಅಧಿಕ ಆಟಗಾರರು ಮೆಗಾ ಹರಾಜಿಗಾಗಿ ಹೆಸರು ನೋಂದಣಿ ಮಾಡಿಕೊಳ್ಳುವ ನಿರೀಕ್ಷೆಯಿದೆ. ಈಗಾಗಲೇ ಎಲ್ಲಾ ಕ್ರಿಕೆಟ್ ಮಂಡಳಿಗೆ ಹಾಗೂ ರಾಜ್ಯ ಕ್ರಿಕೆಟ್ ಸಂಸ್ಥೆಗಳಿಗೆ ಐಪಿಎಲ್​ಗಾಗಿ ಹೆಸರು ನೀಡಿರುವ ಆಟಗಾರರ ಪಟ್ಟಿಯನ್ನು ಸಲ್ಲಿಸುವಂತೆ ಬಿಸಿಸಿಐ ತಿಳಿಸಿದೆ. ಅದರಂತೆ ಸಾವಿರಕ್ಕೂ ಅಧಿಕ ಆಟಗಾರರು ಹೆಸರು ನೀಡುವ ನಿರೀಕ್ಷೆಯಿದ್ದು, ಇವರಲ್ಲಿ 223 ಆಟಗಾರರಿಗೆ ಮಾತ್ರ ಬಿಡ್ಡಿಂಗ್ ನಡೆಯಲಿದೆ.

Published On - 3:36 pm, Tue, 11 January 22