IPL 2022: ಮತ್ತೊಂದು ದಾಖಲೆ ಬರೆದ ಧೋನಿ: ಈ ಸಾಧನೆ ಮಾಡಿದ್ದು ಇಬ್ಬರೇ ಇಬ್ಬರು ಭಾರತೀಯರು
TV9 Web | Updated By: ಝಾಹಿರ್ ಯೂಸುಫ್
Updated on:
Apr 04, 2022 | 2:21 PM
IPL 2022: ಟೀಮ್ ಇಂಡಿಯಾ ಪರ ವಿರಾಟ್ ಕೊಹ್ಲಿ(10,326 ರನ್ಸ್), ರೋಹಿತ್ ಶರ್ಮಾ (9,936 ರನ್ಸ್), ಶಿಖರ್ ಧವನ್ (8,818 ರನ್ಸ್), ರಾಬಿನ್ ಉತ್ತಪ್ಪ (7,070 ರನ್ಸ್) ಈ ಸಾಧನೆ ಮಾಡಿದ್ದರು.
1 / 6
ಐಪಿಎಲ್ ಸೀಸನ್ 15 ನಲ್ಲಿ (IPL 2022) ಮಹೇಂದ್ರ ಸಿಂಗ್ ಧೋನಿ (MS Dhoni) ಭರ್ಜರಿ ಪ್ರದರ್ಶನ ಮುಂದುವರೆಸಿದ್ದಾರೆ. ಮೊದಲ ಪಂದ್ಯದಲ್ಲೇ ಅರ್ಧಶತಕ ಬಾರಿಸಿ ಮಿಂಚಿದ್ದ ಧೋನಿ, 2ನೇ ಪಂದ್ಯದಲ್ಲಿ ಅಂತಿಮ ಹಂತದಲ್ಲಿ ಅಬ್ಬರಿಸಿದ್ದರು. ಇನ್ನು 3ನೇ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ವಿರುದ್ದ 23 ರನ್ಗಳಿಸಿದರೂ ತಂಡವನ್ನು ಸೋಲಿನಿಂದ ಪಾರು ಮಾಡಲು ಸಾಧ್ಯವಾಗಿಲ್ಲ.
2 / 6
ವಿಶೇಷ ಎಂದರೆ ಪಂಜಾಬ್ ಕಿಂಗ್ಸ್ ವಿರುದ್ದ ಕಣಕ್ಕಿಳಿಯುವ ಮೂಲಕ ಮಹೇಂದ್ರ ಸಿಂಗ್ ಧೋನಿ ವಿಶೇಷ ದಾಖಲೆಯೊಂದನ್ನು ತಮ್ಮದಾಗಿಸಿಕೊಂಡರು. PBKS ವಿರುದ್ದದ ಪಂದ್ಯದೊಂದಿಗೆ ಟಿ20 ಕ್ರಿಕೆಟ್ನಲ್ಲಿ 350 ಪಂದ್ಯವಾಡಿದ ಆಟಗಾರರ ಪಟ್ಟಿಗೆ ಧೋನಿ ಸೇರ್ಪಡೆಯಾಗಿದ್ದಾರೆ.
3 / 6
ಅಲ್ಲದೆ T20 ಕ್ರಿಕೆಟ್ನಲ್ಲಿ 350 ಪಂದ್ಯಗಳನ್ನು ಆಡಿದ ಎರಡನೇ ಭಾರತೀಯ ಆಟಗಾರ ಎಂಬ ದಾಖಲೆ ಕೂಡ ಧೋನಿ ಪಾಲಾಗಿದೆ. ಇದಕ್ಕೂ ಮುನ್ನ ರೋಹಿತ್ ಶರ್ಮಾ ಟಿ20 ಕ್ರಿಕೆಟ್ನಲ್ಲಿ 350 ಪಂದ್ಯವಾಡಿದ್ದರು. ಇದೀಗ 350 ಟಿ20 ಪಂದ್ಯವಾಡುವ ಮೂಲಕ ಈ ಸಾಧನೆ ಮಾಡಿದ ವಿಶ್ವದ 19 ನೇ ಆಟಗಾರ ಎನಿಸಿಕೊಂಡಿದ್ದಾರೆ.
4 / 6
ಇದಕ್ಕೂ ಮುನ್ನ ಮಹೇಂದ್ರ ಸಿಂಗ್ ಧೋನಿ ಟಿ20 ಕ್ರಿಕೆಟ್ನಲ್ಲಿ 7 ಸಾವಿರ ರನ್ ಪೂರೈಸಿದ ದಾಖಲೆ ಬರೆದಿದ್ದರು. ಅಲ್ಲದೆ ಟಿ20 ಕ್ರಿಕೆಟ್ನಲ್ಲಿ 7 ಸಾವಿರ ರನ್ ಪೂರೈಸಿದ 5ನೇ ಭಾರತೀಯ ಆಟಗಾರ ಎನಿಸಿಕೊಂಡಿದ್ದರು.
5 / 6
ವಿಶೇಷ ಎಂದರೆ ಕೆಳ ಕ್ರಮಾಂಕದಲ್ಲಿ ಕಣಕ್ಕಿಳಿದು 7 ಸಾವಿರ ರನ್ಗಳ ಸಾಧನೆ ಮಾಡಿದ ಮೊದಲ ಭಾರತೀಯ ಎಂಬ ದಾಖಲೆಯನ್ನೂ ಕೂಡ ಧೋನಿ ಬರೆದಿದ್ದರು.
6 / 6
ಇದಕ್ಕೂ ಮುನ್ನ ಟೀಮ್ ಇಂಡಿಯಾ ಪರ ವಿರಾಟ್ ಕೊಹ್ಲಿ(10,326 ರನ್ಸ್), ರೋಹಿತ್ ಶರ್ಮಾ (9,936 ರನ್ಸ್), ಶಿಖರ್ ಧವನ್ (8,818 ರನ್ಸ್), ರಾಬಿನ್ ಉತ್ತಪ್ಪ (7,070 ರನ್ಸ್) ಈ ಸಾಧನೆ ಮಾಡಿದ್ದರು. ಆದರೆ ಇವರೆಲ್ಲರೂ ಟೀಮ್ ಇಂಡಿಯಾ ಪರ ಮೇಲಿನ ಕ್ರಮಾಂಕದಲ್ಲೇ ಬ್ಯಾಟ್ ಬೀಸಿದ್ದರು. ಆದರೆ ಮಹೇಂದ್ರ ಸಿಂಗ್ 4ನೇ ಕ್ರಮಾಂಕಕ್ಕಿಂತ ಕೆಳಭಾಗದಲ್ಲೇ ಹೆಚ್ಚು ಬಾರಿ ಬ್ಯಾಟ್ ಬೀಸಿ 7 ಸಾವಿರ ರನ್ ಪೂರೈಸಿರುವುದು ವಿಶೇಷ.