IPL 2022: ಎಬಿಡಿ, ಕ್ರಿಸ್ ಗೇಲ್​ಗೆ RCB ಯ ಹಾಲ್ ಆಫ್ ಫೇಮ್ ಗೌರವ

| Updated By: ಝಾಹಿರ್ ಯೂಸುಫ್

Updated on: May 17, 2022 | 2:57 PM

RCB 'Hall of fame': ಹಾಲ್ ಆಫ್ ಫೇಮ್‌ಗೆ ಸೇರ್ಪಡೆಗೊಳ್ಳಲು ಕೆಲವು ಷರತ್ತುಗಳಿವೆ. ಇದರಲ್ಲಿ ಆಟಗಾರ ಕನಿಷ್ಠ 3 ವರ್ಷಗಳ ಕಾಲ RCB ಪರ ಆಡಿರಬೇಕು. ಪ್ರಸ್ತುತ, ಅವರು ಐಪಿಎಲ್‌ನ ಭಾಗವಾಗಿರಬಾರದು.

1 / 7
 RCB ತಂಡದ ದಂತಕಥೆಗಳಾದ  ಕ್ರಿಸ್ ಗೇಲ್ ಹಾಗೂ ಎಬಿ ಡಿವಿಲಿಯರ್ಸ್​ಗೆ ವಿಶೇಷ ಗೌರವ ನೀಡಲು ಆರ್​ಸಿಬಿ ಫ್ರಾಂಚೈಸಿ ಮುಂದಾಗಿದೆ. ಆರ್​ಸಿಬಿ ತಂಡವು ಇದೇ ಮೊದಲ ಬಾರಿಗೆ ಹಾಲ್ ಫೇಮ್ ಪ್ರಶಸ್ತಿಯನ್ನು ಪರಿಚಯಿಸಿದ್ದು, ಈ ಗೌರವಕ್ಕೆ ಎಬಿಡಿ ಹಾಗೂ ಕ್ರಿಸ್ ಗೇಲ್ ಭಾಜನರಾಗಿದ್ದಾರೆ. ಅದರಂತೆ ಮುಂದಿನ ವರ್ಷ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆಯಲಿರುವ ವಿಶೇಷ ಕಾರ್ಯಕ್ರಮದಲ್ಲಿ ಎಬಿ ಡಿವಿಲಿಯರ್ಸ್ ಹಾಗೂ ಕ್ರಿಸ್ ಗೇಲ್ ಅವರನ್ನು ಈ ಪ್ರಶಸ್ತಿ ಮೂಲಕ ಗೌರವಿಸಲಾಗುತ್ತದೆ.

2 / 7
ಈ ಬಗ್ಗೆ ಆರ್​ಸಿಬಿ ವಿಶೇಷ ಕಾರ್ಯಕ್ರಮ ಆಯೋಜಿಸಿದ್ದು, ಈ ವೇಳೆ ಎಬಿ ಡಿವಿಲಿಯರ್ಸ್ ಹಾಗೂ ಕ್ರಿಸ್ ಗೇಲ್ ಕೂಡ ವಿಡಿಯೋ ಕಾನ್ಫರೆನ್ಸ್ ಮೂಲಕ ತಂಡದೊಂದಿಗೆ ಮಾತನಾಡಿದ್ದರು. ಅಲ್ಲದೆ ಈ ಇಬ್ಬರೊಂದಿಗೆ ಡ್ರೆಸ್ಸಿಂಗ್ ರೂಮ್ ಹಂಚಿಕೊಂಡಿದ್ದ ವಿರಾಟ್ ಕೊಹ್ಲಿ ಕೂಡ ಸ್ಟಾರ್ ಕ್ರಿಕೆಟಿಗರ ಜೊತೆಗಿನ ಒಡನಾಟವನ್ನು ಸ್ಮರಿಸಿದರು.

3 / 7
ಎಬಿಡಿ ಹಾಲ್​ ಆಫ್​ ಫೇಮ್​ಗೆ ಆಯ್ಕೆಯಾಗಿರುವ ಬಗ್ಗೆ ಬರೆದುಕೊಂಡಿರುವ ಆರ್​ಸಿಬಿ,  'ತಮ್ಮ ಪ್ರತಿಭೆ, ಆಟದ ತಿಳುವಳಿಕೆ ಮತ್ತು ಉತ್ತಮ ಸ್ವಭಾವದಿಂದ ಆರ್‌ಸಿಬಿ ಮತ್ತು ಎಲ್ಲಾ ಕ್ರಿಕೆಟ್ ಅಭಿಮಾನಿಗಳನ್ನು ಸಮಾನವಾಗಿ ಸ್ಪರ್ಶಿಸಿದ ವಿಶೇಷ ಆಟಗಾರ. ಎಬಿ ಡಿವಿಲಿಯರ್ಸ್ ಆರ್‌ಸಿಬಿ ಹಾಲ್ ಆಫ್ ಫೇಮ್‌ಗೆ ಸೇರ್ಪಡೆಯಾದ ಮೊದಲ ಆಟಗಾರ ಎಂದು ತಿಳಿಸಿದೆ.

4 / 7
 'ಪವರ್ ಹಿಟ್ಟಿಂಗ್, ಮನರಂಜನೆಯ ಪ್ರತೀಕ ಮತ್ತು ಅತ್ಯುತ್ತಮ T20 ಬ್ಯಾಟ್ಸ್‌ಮನ್‌ಗಳಲ್ಲಿ ಒಬ್ಬರಾಗಿರುವ ಯೂನಿವರ್ಸ್ ಬಾಸ್ ಕ್ರಿಸ್ ಗೇಲ್ RCB ಹಾಲ್ ಆಫ್ ಫೇಮ್‌ಗೆ ಸಹ ಸೇರ್ಪಡೆಯಾದ ಮತ್ತೋರ್ವ ಆಟಗಾರ ಎಂದು ಆರ್​ಸಿಬಿ ಫ್ರಾಂಚೈಸಿ ತಿಳಿಸಿದೆ.

5 / 7
ಹಾಲ್ ಆಫ್ ಫೇಮ್‌ಗೆ ಸೇರ್ಪಡೆಗೊಳ್ಳಲು ಕೆಲವು ಷರತ್ತುಗಳಿವೆ. ಇದರಲ್ಲಿ ಆಟಗಾರ ಕನಿಷ್ಠ 3 ವರ್ಷಗಳ ಕಾಲ RCB ಪರ ಆಡಿರಬೇಕು. ಪ್ರಸ್ತುತ, ಅವರು ಐಪಿಎಲ್‌ನ ಭಾಗವಾಗಿರಬಾರದು. ಮೈದಾನದಲ್ಲಿ ಮತ್ತು ಹೊರಗೆ RCB ಮೇಲೆ ಗಮನಾರ್ಹ ಪರಿಣಾಮ ಬೀರಬೇಕು. ಇಂತಹ ಸರ್ವ ಶ್ರೇಷ್ಠ ಆಟಗಾರರಿಗೆ ಮಾತ್ರ ಆರ್​ಸಿಬಿ ಹಾಲ್ ಆಫ್ ಫೇಮ್ ಗೌರವ ನೀಡಲಿದೆ.

6 / 7
ಎಬಿ ಡಿವಿಲಿಯರ್ಸ್ ಆರ್​ಸಿಬಿ ಪರ 11 ವರ್ಷಗಳ ಕಾಲ ಆಡಿದ್ದರು. ಈ ವೇಳೆ ವಿರಾಟ್ ಕೊಹ್ಲಿ ನಾಯಕತ್ವದಲ್ಲಿ ಆರ್​ಸಿಬಿ ತಂಡದ ತಂಡದ ಪ್ರಮುಖ ಭಾಗವಾಗಿದ್ದರು. ಎಬಿಡಿ-ಕೊಹ್ಲಿ ಜೋಡಿ ತಮ್ಮ ಉತ್ತಮ ಜೊತೆಯಾಟದ ಮೂಲಕ ಹಲವು ಬಾರಿ ಗೆಲುವು ತಂದುಕೊಟ್ಟಿದ್ದಾರೆ. ಎಬಿ ತಮ್ಮ ಐಪಿಎಲ್ ವೃತ್ತಿಜೀವನದಲ್ಲಿ 184 ಪಂದ್ಯಗಳನ್ನು ಆಡಿದ್ದಾರೆ. ಈ ವೇಳೆ  3 ಶತಕಗಳು, 40 ಅರ್ಧ ಶತಕಗಳನ್ನು ಗಳಿಸಿದ್ದಾರೆ. ಈ ಮೂಲಕ ಒಟ್ಟು 5162 ರನ್‌ ಕಲೆಹಾಕಿದ್ದಾರೆ.

7 / 7
ಕ್ರಿಸ್ ಗೇಲ್ ಆರ್​ಸಿಬಿ ಪರ 7 ವರ್ಷಗಳ ಕಾಲ ಆಡಿದ್ದರು. 2011 ರಿಂದ 2017ರವರೆಗೆ ಈ ತಂಡದಲ್ಲಿದ್ದರು.  ಗೇಲ್ ತಮ್ಮ ಐಪಿಎಲ್ ವೃತ್ತಿಜೀವನದಲ್ಲಿ 142 ಪಂದ್ಯಗಳಲ್ಲಿ 6 ಶತಕ ಮತ್ತು 31 ಅರ್ಧಶತಕಗಳನ್ನು ಗಳಿಸಿದ್ದಾರೆ.  ಈ ಮೂಲಕ ಒಟ್ಟು 4965 ರನ್ ಗಳಿಸಿ ಮಿಂಚಿದ್ದರು. ಅದರಲ್ಲೂ ಈ ಇಬ್ಬರು ಆಟಗಾರರು ಐಪಿಎಲ್​​ನ ಬಹುಭಾಗವನ್ನು ಆರ್​ಸಿಬಿ ಪರ ಆಡಿದ್ದರು ಎಂಬುದು ವಿಶೇಷ. ಇದೇ ಕಾರಣದಿಂದಾಗಿ ಇದೀಗ ಆರ್​ಸಿಬಿ ತಂಡದ ಹಾಲ್​ ಆಫ್​ ಫೇಮ್ ಗೌರವ ಇಬ್ಬರು ದಿಗ್ಗಜರಿಗೆ ಒಲಿದಿದೆ.

Published On - 2:57 pm, Tue, 17 May 22