- Kannada News Photo gallery Cricket photos Ipl 2022 wasim jaffer says virat kohli should take a break commentary like dinesh karthik zp
IPL 2022: ವಿರಾಟ್ ಕೊಹ್ಲಿ ಬ್ರೇಕ್ ಪಡೆದು ಕಾಮೆಂಟ್ರಿ ಮಾಡಲಿ ಎಂದ ಮಾಜಿ ಕ್ರಿಕೆಟಿಗ
IPL 2022: ಈ ಸೀಸನ್ನಲ್ಲಿ ವಿರಾಟ್ ಕೊಹ್ಲಿ ಕೇವಲ 23.80 ಸರಾಸರಿಯಲ್ಲಿ 119 ರನ್ ಗಳಿಸಿದ್ದಾರೆ. 6 ಪಂದ್ಯಗಳಲ್ಲಿ ಒಂದು ಅರ್ಧಶತಕ ಕೂಡ ಗಳಿಸಲು ಸಾಧ್ಯವಾಗಲಿಲ್ಲ.
Updated on: Apr 17, 2022 | 3:01 PM

ಐಪಿಎಲ್ ಸೀಸನ್ 15 ನಲ್ಲಿ ವಿರಾಟ್ ಕೊಹ್ಲಿ ಅವರ ಪ್ರದರ್ಶನ ಕಳಪೆಯಾಗಿದೆ. ತಮ್ಮ ಭರ್ಜರಿ ಫಾರ್ಮ್ ಅನ್ನು ಪ್ರದರ್ಶಿಸುವ ಕೊಹ್ಲಿ ಈ ಬಾರಿ ಕೂಡ ವಿಫಲರಾಗಿದ್ದಾರೆ. ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಕೇವಲ 12 ರನ್‌ಗಳಿಗೆ ರನೌಟ್ ಆಗಿದ್ದರು. ಈ ಪಂದ್ಯದ ಬಳಿಕ ಟೀಮ್ ಇಂಡಿಯಾದ ಮಾಜಿ ಆಟಗಾರ ವಾಸಿಂ ಜಾಫರ್ ನೀಡಿದ ಹೇಳಿಕೆಯೊಂದು ಇದೀಗ ಎಲ್ಲರ ಗಮನ ಸೆಳೆದಿದೆ.

ವಿರಾಟ್ ಕೊಹ್ಲಿ ಅವರ ಕಳಪೆ ಫಾರ್ಮ್ ಬಗ್ಗೆ ಮಾತನಾಡಿದ ವಾಸಿಂ ಜಾಫರ್, ನನ್ನ ಪ್ರಕಾರ ಕೊಹ್ಲಿ ಸ್ವಲ್ಪ ಸಮಯ ವಿರಾಮ ತೆಗೆದುಕೊಂಡು ಕಾಮೆಂಟರಿ ಮಾಡಬೇಕು. ಇದಾದ ನಂತರ ನೋಡಿ, ವಿರಾಟ್ ಕೊಹ್ಲಿ ಕೂಡ ರನ್ ಮಳೆ ಹರಿಸಲಿದ್ದಾರೆ ಎಂದು ಜಾಫರ್ ತಮಾಷೆಯಾಗಿ ಹೇಳಿದ್ದಾರೆ.

ವಾಸಿಂ ಜಾಫರ್, ದಿನೇಶ್ ಕಾರ್ತಿಕ್ ಅವರನ್ನು ಉಲ್ಲೇಖಿಸಿ ವಿರಾಟ್ ಕೊಹ್ಲಿಗೆ ಈ ಸಲಹೆಯನ್ನು ನೀಡಿದ್ದರು. ಏಕೆಂದರೆ ಕಳೆದ ಎರಡು ಐಪಿಎಲ್ ಸೀಸನ್‌ಗಳಲ್ಲಿ ದಿನೇಶ್ ಕಾರ್ತಿಕ್ ವಿಫಲರಾಗಿದ್ದರು. ಅಲ್ಲದೆ ಈ ಬಾರಿಯ ಐಪಿಎಲ್ಗೂ ಮುನ್ನ ಡಿಕೆ ಇಂಗ್ಲೆಂಡ್ ಪ್ರವಾಸದಲ್ಲಿ ಕಾಮೆಂಟರಿ ಮಾಡುತ್ತಿದ್ದರು. ಇದಾದ ಬಳಿಕ ದಿನೇಶ್ ಕಾರ್ತಿಕ್ ಅವರನ್ನು ಆರ್‌ಸಿಬಿ ಹರಾಜಿನಲ್ಲಿ ಖರೀದಿಸಿದ್ದು, ಇದೀಗ ಡಿಕೆ ಬೌಲರ್‌ಗಳ ನಿದ್ದೆಗೆಡಿಸಿದ್ದಾರೆ. ಹೀಗಾಗಿ ದಿನೇಶ್ ಕಾರ್ತಿಕ್ರಂತೆ ಕೊಹ್ಲಿ ಕಾಮೆಂಟರಿ ಮಾಡಿದ್ರೆ ಮತ್ತೆ ಫಾರ್ಮ್ಗೆ ಮರಳಬಹುದು ಎಂದು ವಾಸಿಂ ಜಾಫರ್ ತಮಾಷೆಯಾಗಿ ಹೇಳಿದ್ದಾರೆ.

ಈ ಸೀಸನ್ನಲ್ಲಿ ವಿರಾಟ್ ಕೊಹ್ಲಿ ಕೇವಲ 23.80 ಸರಾಸರಿಯಲ್ಲಿ 119 ರನ್ ಗಳಿಸಿದ್ದಾರೆ. 6 ಪಂದ್ಯಗಳಲ್ಲಿ ಒಂದು ಅರ್ಧಶತಕ ಕೂಡ ಗಳಿಸಲು ಸಾಧ್ಯವಾಗಲಿಲ್ಲ. ಅಲ್ಲದೆ ಎರಡು ಬಾರಿ ರನೌಟ್ ಆಗಿದ್ದರು ಎಂಬುದೇ ಅಚ್ಚರಿ.

ಇದಾಗ್ಯೂ ವಿರಾಟ್ ಕೊಹ್ಲಿಯ ವೈಫಲ್ಯವನ್ನು ಮರೆಮಾಚುವಂತೆ ದಿನೇಶ್ ಕಾರ್ತಿಕ್ ಬ್ಯಾಟ್ ಬೀಸಿ ಆರ್‌ಸಿಬಿ ತಂಡಕ್ಕೆ ಗೆಲುವು ತಂದುಕೊಡುತ್ತಿದ್ದಾರೆ. ಅದರಂತೆ ಇದೀಗ 6 ಪಂದ್ಯಗಳಲ್ಲಿ 4 ಗೆಲುವು ದಾಖಲಿಸಿ ಆರ್‌ಸಿಬಿ ಪಾಯಿಂಟ್ ಟೇಬಲ್ನಲ್ಲಿ 3ನೇ ಸ್ಥಾನ ಅಲಂಕರಿಸಿದೆ.




