AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Ipl 2022: ಐಪಿಎಲ್ ಮೆಗಾ ಹರಾಜು ಪಟ್ಟಿಯಲ್ಲಿ ಪಶ್ಚಿಮ ಬಂಗಾಳದ ಕ್ರೀಡಾ ಸಚಿವರ ಹೆಸರು..!

Ipl 2022 mega auction: ಈ ಹಿಂದೆ ಕೆಕೆಆರ್​, ರೈಸಿಂಗ್ ಪುಣೆ ಜೈಂಟ್ಸ್​ ತಂಡದ ಪರ ಆಡಿದ್ದ ಮನೋಜ್ ತಿವಾರಿ 2018 ರಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ (ಈಗ ಪಂಜಾಬ್ ಕಿಂಗ್ಸ್) ತಂಡದಲ್ಲಿ ಕಾಣಿಸಿಕೊಂಡಿದ್ದರು.

TV9 Web
| Edited By: |

Updated on: Feb 01, 2022 | 10:09 PM

Share
ಈ ಬಾರಿಯ ಐಪಿಎಲ್ ಹರಾಜಿನಲ್ಲಿ 590 ಆಟಗಾರರ ಹೆಸರು ಕಾಣಿಸಿಕೊಳ್ಳಲಿದೆ. ಅದರಂತೆ ಈ ಆಟಗಾರರಿಂದ ತಮಗೆ ಬೇಕಾದ ಪ್ಲೇಯರ್ಸ್​ಗಾಗಿ 10 ತಂಡಗಳು ಬಿಡ್ಡಿಂಗ್​ ನಡೆಸಲಿದೆ. ಈ ಪಟ್ಟಿಯಲ್ಲಿ  ಶಿಖರ್ ಧವನ್, ಆರ್ ಅಶ್ವಿನ್, ಡೇವಿಡ್ ವಾರ್ನರ್, ಟ್ರೆಂಟ್ ಬೌಲ್ಟ್, ಮೊಹಮ್ಮದ್ ಶಮಿಯಂತಹ ಸ್ಟಾರ್ ಆಟಗಾರರ ದಂಡೇ ಇದೆ.

1 / 6
 ಇವೆಲ್ಲದರ ನಡುವೆ ಇದೀಗ ಎಲ್ಲರ ಗಮನ ಸೆಳೆದಿರುವುದು ಈ ಪಟ್ಟಿಯಲ್ಲಿರುವ ಪಶ್ಚಿಮ ಬಂಗಾಳದ ಕ್ರೀಡಾ ಸಚಿವರ ಹೆಸರು. ಹೌದು,  ಭಾರತ ಪರ ಆಡಿರುವ ಮನೋಜ್ ತಿವಾರಿ ಕೂಡ ಮೆಗಾ ಹರಾಜಿಗೆ ತಮ್ಮ ಹೆಸರನ್ನು ನೀಡಿದ್ದಾರೆ. ತಮ್ಮ ಮೂಲ ಬೆಲೆಯನ್ನು ಮನೋಜ್ ತಿವಾರಿ 50 ಲಕ್ಷ ರೂ. ಎಂದು ಘೋಷಿಸಿದ್ದಾರೆ.

2 / 6
ಈ ಹಿಂದೆ ಕೆಕೆಆರ್​, ರೈಸಿಂಗ್ ಪುಣೆ ಜೈಂಟ್ಸ್​ ತಂಡದ ಪರ ಆಡಿದ್ದ ಮನೋಜ್ ತಿವಾರಿ 2018 ರಲ್ಲಿ ಕಿಂಗ್ಸ್  ಇಲೆವೆನ್ ಪಂಜಾಬ್ (ಈಗ ಪಂಜಾಬ್ ಕಿಂಗ್ಸ್) ತಂಡದಲ್ಲಿ ಕಾಣಿಸಿಕೊಂಡಿದ್ದರು. ಇದಾದ ಬಳಿಕ ಮನೋಜ್ ತಿವಾರಿಯನ್ನು ಯಾವುದೇ ತಂಡ ಖರೀದಿಸಿರಲಿಲ್ಲ. ಕಳೆದ ಸೀಸನ್​ನಲ್ಲೂ 50 ಲಕ್ಷ ರೂ. ಮೂಲಬೆಲೆಯೊಂದಿಗೆ ಕಾಣಿಸಿಕೊಂಡ ತಿವಾರಿ ಅನ್​ಸೋಲ್ಡ್​ ಆಗಿದ್ದರು.

3 / 6
ಈ ವರ್ಷದ ರಣಜಿ ಟ್ರೋಫಿ ಬೆಂಗಾಲ್ ಪ್ರಕಟಿಸಿದ ತಂಡದಲ್ಲಿ ಮನೋಜ್ ತಿವಾರಿ ಕೂಡ ಇದ್ದರು. ಮನೋಜ್ ತಿವಾರಿ 2020 ರಲ್ಲಿ ರಣಜಿ ಟ್ರೋಫಿಯಲ್ಲಿ ಸೌರಾಷ್ಟ್ರ ವಿರುದ್ಧ ಬಂಗಾಳದ ಪರವಾಗಿ ತಮ್ಮ ಕೊನೆಯ ಪ್ರಥಮ ದರ್ಜೆ ಪಂದ್ಯವನ್ನು ಆಡಿದ್ದರು. ಈ ಬಾರಿಯೂ ಅವರು ಆಡುತ್ತಾರೆ ಎಂದು ನಿರೀಕ್ಷಿಸಲಾಗಿತ್ತು. ಆದರೆ ಕೊರೋನಾ ಕಾರಣದಿಂದ ಇದೀಗ ಟೂರ್ನಿಯನ್ನು ಮುಂದೂಡಲಾಗಿದೆ.

4 / 6
 ಮನೋಜ್ ತಿವಾರಿ ಪ್ರಸ್ತುತ ಪಶ್ಚಿಮ ಬಂಗಾಳದ ಕ್ರೀಡಾ ಸಚಿವರಾಗಿದ್ದು, ಕಳೆದ ವರ್ಷ ನಡೆದ ವಿಧಾನಸಭಾ ಚುನಾವಣೆಯಲ್ಲಿ ಶಿಬ್‌ಪುರ ಕ್ಷೇತ್ರದಿಂದ ಸ್ಪರ್ಧಿಸಿ ಗೆಲುವು ಸಾಧಿಸಿದ್ದರು. ಇದಾದ ನಂತರ ಅವರನ್ನು ಕ್ರೀಡಾ ಮತ್ತು ಯುವ ವ್ಯವಹಾರಗಳ ಸಚಿವರನ್ನಾಗಿ ಮಾಡಲಾಯಿತು. ಅದರಂತೆ ಇದೀಗ ಮನೋಜ್ ತಿವಾರಿ ಕ್ರೀಡಾ ಸಚಿವರಾಗಿ ಜೊತೆಗೆ ಆಟಗಾರನಾಗಿ ಕಾಣಿಸಿಕೊಳ್ಳುತ್ತಿದ್ದಾರೆ.

5 / 6
 ಇದೀಗ ಐಪಿಎಲ್ ಮೆಗಾ ಹರಾಜಿನಲ್ಲೂ ಮನೋಜ್ ತಿವಾರಿ ಹೆಸರು ನೀಡಿದ್ದು, ಈ ಬಾರಿ ಬಿಕರಿಯಾಗಲಿದ್ದಾರಾ ಕಾದು ನೋಡಬೇಕಿದೆ.

6 / 6
ಅರಸು ದಾಖಲೆ ಬ್ರೇಕ್ ಮಾಡಲಿರುವ ಸಿಎಂ ಸಿದ್ದರಾಮಯ್ಯಗೆ ​​ಜೋಶಿ ಟಕ್ಕರ್

ಡ್ರ್ಯಾಗನ್ ಬೋಟಿಂಗ್​​: ಮೈಸೂರಿಗೆ ಬರುವವರು ಇದನ್ನು ಮಿಸ್ ಮಾಡ್ಬೇಡಿ

ಆಂಧ್ರದ ಶ್ರೀಕಾಕುಳಂನಲ್ಲಿ ರೈಲಿನ ಮೇಲೆ ಹತ್ತಿದ ಯುವಕನ ಹುಚ್ಚಾಟ

ಚಿಕ್ಕಮಗಳೂರು ಅರಣ್ಯ ಪ್ರದೇಶದಲ್ಲಿ ಕಾಡ್ಗಿಚ್ಚು: ವಿಡಿಯೋ ನೋಡಿ

ಕುಡಿದ ಮತ್ತಿನಲ್ಲಿ ಮಗನನ್ನೇ ಕಡಿದ ಅಪ್ಪ, ಛಿದ್ರವಾದ ಕುಟುಂಬ

ಕೊಪ್ಪಳ ಅಜ್ಜನ ಜಾತ್ರೆ ದ್ರೋಣ್ ಕ್ಯಾಮೆರಾದಲ್ಲಿ ಕಂಡಿದ್ದು ಹೀಗೆ

ಬಿಗ್ ಬಾಸ್ ಫಿನಾಲೆಗೆ ಗಿಲ್ಲಿ, ಧನುಷ್: ಭವಿಷ್ಯ ನುಡಿದ ಸ್ಪಂದನಾ ಸೋಮಣ್ಣ

ಸಿದ್ದರಾಮಯ್ಯ ಹೊಸ ದಾಖಲೆ: ಬೆಂಬಲಿಗರಿಂದ ನಾಟಿ ಕೋಳಿ ಔತಣ

ಆಂಧ್ರದಲ್ಲಿ ಭಾರಿ ಅನಿಲ ಸೋರಿಕೆಯಾಗಿ ಬೆಂಕಿ ದುರಂತ; ಸ್ಥಳೀಯರ ಸ್ಥಳಾಂತರ

ಗವಿಸಿದ್ದೇಶ್ವರ ಮಹಾರಥೋತ್ಸವ: ಪುಣ್ಯ ಕ್ಷಣಕ್ಕೆ ಸಾಕ್ಷಿಯಾದ 5 ಲಕ್ಷ ಮಂದಿ