IPL 2023 Final: ಫೈನಲ್ ಪಂದ್ಯಕ್ಕೂ ಮುನ್ನ ನಿವೃತ್ತಿ ಘೋಷಿಸಿದ CSK ಆಟಗಾರ

Ambati Rayudu Retirement: ಐಪಿಎಲ್​ನಲ್ಲಿ 204 ಪಂದ್ಯಗಳನ್ನಾಡಿರುವ ಅಂಬಾಟಿ ರಾಯುಡು ಒಟ್ಟು 4329 ರನ್ ಕಲೆಹಾಕಿದ್ದಾರೆ. ಈ ವೇಳೆ 1 ಶತಕ ಹಾಗೂ 22 ಅರ್ಧಶತಕಗಳನ್ನು ಬಾರಿಸಿದ್ದಾರೆ.

TV9 Web
| Updated By: ಝಾಹಿರ್ ಯೂಸುಫ್

Updated on:May 29, 2023 | 2:52 AM

IPL 2023 Final: ಅಹಮದಾಬಾದ್​ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯಲಿರುವ ಐಪಿಎಲ್​ನ ಫೈನಲ್​ ಪಂದ್ಯಕ್ಕೂ ಮುನ್ನ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಸ್ಟಾರ್ ಆಟಗಾರ ಅಂಬಾಟಿ ರಾಯುಡು ನಿವೃತ್ತಿ ಘೋಷಿಸಿದ್ದಾರೆ.

1 / 7
2018 ರಿಂದ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಭಾಗವಾಗಿರುವ ರಾಯುಡು ಕಳೆದ ಸೀಸನ್​ನಲ್ಲೇ ಐಪಿಎಲ್​ನಿಂದ ಹಿಂದೆ ಸರಿಯಲು ನಿರ್ಧರಿಸಿದ್ದರು. ಆದರೆ ಸಿಎಸ್​ಕೆ ಫ್ರಾಂಚೈಸಿ ಅವರ ಮನವೊಲಿಸುವಲ್ಲಿ ಯಶಸ್ವಿಯಾಗಿತ್ತು. ಅದರಂತೆ ಈ ಬಾರಿ ಕೂಡ ರಾಯುಡು ಸಿಎಸ್​ಕೆ ಪರ ಕಣಕ್ಕಿಳಿದಿದ್ದರು.

2 / 7
ಇದೀಗ ಸಿಎಸ್​ಕೆ ತಂಡವು ಫೈನಲ್ ಪ್ರವೇಶಿಸಿದ್ದು, ಗುಜರಾತ್ ಟೈಟಾನ್ಸ್ ವಿರುದ್ಧ ಆಡುವ ಪಂದ್ಯವು ನನ್ನ ಪಾಲಿಗೆ ಕೊನೆಯ ಪಂದ್ಯವಾಗಿರಲಿದೆ ಎಂದು ಅಂಬಾಟಿ ರಾಯುಡು ತಿಳಿಸಿದ್ದಾರೆ. ಅಲ್ಲದೆ ಈ ವಿಷಯದಲ್ಲಿ ಯಾವುದೇ ಯೂಟರ್ನ್ ತೆಗೆದುಕೊಳ್ಳುವುದಿಲ್ಲ ಎಂಬುದನ್ನು ಕೂಡ ಸ್ಪಷ್ಟಪಡಿಸಿದ್ದಾರೆ.

3 / 7
2010 ರಲ್ಲಿ ಮುಂಬೈ ಇಂಡಿಯನ್ಸ್ ಪರ ಕಣಕ್ಕಿಳಿಯುವ ಮೂಲಕ ಐಪಿಎಲ್ ಕೆರಿಯರ್ ಆರಂಭಿಸಿದ್ದ ರಾಯುಡು 2018 ರಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಆಯ್ಕೆಯಾಗಿದ್ದರು.

4 / 7
ಇದರ ನಡುವೆ 5 ಬಾರಿ ಚಾಂಪಿಯನ್ ತಂಡದ ಭಾಗವಾಗಿದ್ದರು.  ಮುಂಬೈ ಇಂಡಿಯನ್ಸ್ ಪರ 3 ಬಾರಿ ಕಪ್ ಗೆದ್ದ ತಂಡದ ಭಾಗವಾಗಿದ್ದ ರಾಯುಡು, ಸಿಎಸ್​ಕೆ ಪರ 2 ಬಾರಿ ಟ್ರೋಫಿ ಎತ್ತಿ ಹಿಡಿದಿದ್ದರು. ಹಾಗೆಯೇ ಈ ಬಾರಿ ಫೈನಲ್ ಪ್ರವೇಶಿಸಿದ ಸಿಎಸ್​ಕೆ ತಂಡದ ಭಾಗವಾಗಿದ್ದಾರೆ.

5 / 7
ಮುಂಬೈ ಇಂಡಿಯನ್ಸ್ ಹಾಗೂ ಸಿಎಸ್​ಕೆ 2 ಶೇಷ್ಠ ತಂಡಗಳು...204 ಪಂದ್ಯಗಳು, 14 ಸೀಸನ್‌ಗಳು, 11 ಪ್ಲೇಆಫ್‌ಗಳು, 8 ಫೈನಲ್‌ಗಳು, 5 ಟ್ರೋಫಿಗಳು. ಐಪಿಎಲ್​ನಲ್ಲಿ ಇಂದು ನನ್ನ ಕೊನೆಯ ಪಂದ್ಯವಾಡಲು ನಿರ್ಧರಿಸಿದ್ದೇನೆ. ಎಲ್ಲರಿಗೂ ಧನ್ಯವಾದಗಳು ಎಂದು ರಾಯುಡು ತಿಳಿಸಿದ್ದಾರೆ.

6 / 7
ಅಂದಹಾಗೆ ಈ ಬಾರಿಯ ಐಪಿಎಲ್​ನಲ್ಲಿ ಒಟ್ಟು 15 ಇನಿಂಗ್ಸ್​ಗಳಲ್ಲಿ ಬ್ಯಾಟ್ ಬೀಸಿರುವ 37 ವರ್ಷದ ರಾಯುಡು, ಒಟ್ಟು 139 ರನ್​ ಕಲೆಹಾಕಿದ್ದಾರೆ. ಹಾಗೆಯೇ ಒಟ್ಟಾರೆ ಐಪಿಎಲ್​ನಲ್ಲಿ 204 ಪಂದ್ಯಗಳನ್ನಾಡಿ 4329	 ರನ್ ಕಲೆಹಾಕಿದ್ದಾರೆ. ಈ ವೇಳೆ 1 ಶತಕ ಹಾಗೂ 22 ಅರ್ಧಶತಕಗಳನ್ನು ಬಾರಿಸಿದ್ದಾರೆ.

7 / 7

Published On - 6:36 pm, Sun, 28 May 23

Follow us
ಸಿದ್ದರಾಮಯ್ಯ ಪಾದಗಳಿಗೆ ನಮಸ್ಕರಿಸಿ ಆಶೀರ್ವಾದ ಪಡೆದ ಶಿವಣ್ಣ

ಡಾಮಿನೇಟ್ ಮಾಡುವ ಪ್ರವೃತ್ತಿ ರಜತ್​ಗೆ ಮುಳುವಾಯಿತೇ?

ಹೆದ್ದಾರಿಯಲ್ಲೇ ಕಾರು ಬೈಕ್ ನಿಲ್ಲಿಸಿ ರಂಪಾಟ, ಕಿ.ಮೀಗಟ್ಟಲೆ ಟ್ರಾಫಿಕ್ ಜಾಮ್

ಅಧಿಕಾರಿಗಳು ಕೇವಲ ಸಿದ್ದರಾಮಯ್ಯ ಪ್ರಕರಣದಲ್ಲಿ ತಪ್ಪು ಮಾಡ್ತಾರೆಯೇ? ಕೃಷ್ಣ

ರನ್ನಿಂಗ್ ಕ್ಯಾಚ್ ಹಿಡಿದು ಎಲ್ಲರನ್ನು ಚಕಿತರನ್ನಾಗಿಸಿದ ಡೊನೊವನ್ ಫೆರೇರಾ

‘ಭವ್ಯಾ ಗೌಡ ಪರಿಚಯ ಮೊದಲೇ ಇತ್ತು’; ಕೊನೆಗೂ ಒಪ್ಪಿಕೊಂಡ ತ್ರಿವಿಕ್ರಮ್

ನಂಜನಗೂಡು: ಹುಲಿ ವಿಡಿಯೋ ವೈರಲ್ ಬಗ್ಗೆ ಅರಣ್ಯ ಇಲಾಖೆ ಹೇಳಿದ್ದೇನು?

ಒಡಿಶಾದಲ್ಲಿ ಬಸ್ ಪಲ್ಟಿ, ಇಬ್ಬರು ಸಾವು, 30ಕ್ಕೂ ಅಧಿಕ ಮಂದಿಗೆ ಗಂಭೀರ ಗಾಯ

ನೈಜೀರಿಯಾದಲ್ಲಿ ತೈಲ ಟ್ಯಾಂಕರ್ ಸ್ಫೋಟ, 18 ಮಂದಿ ಸಾವು

’ಹನುಮಂತ ಗೆದ್ದಿದ್ದು ಬೇಸರ ಇಲ್ಲ’: ತ್ರಿವಿಕ್ರಂ ಫಸ್ಟ್ ರಿಯಾಕ್ಷನ್