Updated on: May 29, 2023 | 9:14 PM
IPL 2023 Final CSK vs GT: ಅಹಮದಾಬಾದ್ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ಐಪಿಎಲ್ ಫೈನಲ್ ಪಂದ್ಯದಲ್ಲಿ ಕಣಕ್ಕಿಳಿಯುವ ಮೂಲಕ ಮಹೇಂದ್ರ ಸಿಂಗ್ ಧೋನಿ ಹಲವು ದಾಖಲೆಗಳನ್ನು ತಮ್ಮದಾಗಿಸಿಕೊಂಡಿದ್ದಾರೆ.
ಗುಜರಾತ್ ಟೈಟಾನ್ಸ್ ವಿರುದ್ಧದ ಈ ಪಂದ್ಯದಲ್ಲಿ ಕಣಕ್ಕಿಳಿಯುತ್ತಿದ್ದಂತೆ ಐಪಿಎಲ್ ಇತಿಹಾಸದಲ್ಲಿ 250 ಪಂದ್ಯಗಳನ್ನಾಡಿದ ಮೊದಲ ಆಟಗಾರ ಎಂಬ ದಾಖಲೆಯನ್ನು ಬರೆದರು.
ಹಾಗೆಯೇ ಅತೀ ಹೆಚ್ಚು ಐಪಿಎಲ್ ಫೈನಲ್ ಆಡಿದ ಆಟಗಾರ ಎಂಬ ಹೆಗ್ಗಳಿಕೆಗೂ ಧೋನಿ ಪಾತ್ರರಾದರು. ಧೋನಿ ಸಿಎಸ್ಕೆ ಪರ ಒಟ್ಟು 10 ಫೈನಲ್ ಪಂದ್ಯಗಳನ್ನಾಡಿದ್ದಾರೆ. ಹಾಗೆಯೇ ರೈಸಿಂಗ್ ಪುಣೆ ಜೈಂಟ್ಸ್ ಪರ 1 ಫೈನಲ್ ಪಂದ್ಯವಾಡಿದ್ದರು.
ಇನ್ನು ಐಪಿಎಲ್ ಇತಿಹಾಸದಲ್ಲಿ ಅತೀ ಹೆಚ್ಚು ಪ್ಲೇಆಫ್ಸ್ ಪಂದ್ಯಗಳನ್ನಾಡಿದ ದಾಖಲೆ ಕೂಡ ಧೋನಿ ಹೆಸರಿನಲ್ಲಿದೆ. ಎಂಎಸ್ಡಿ ಒಟ್ಟು 28 ಪ್ಲೇಆಫ್ಸ್ ಪಂದ್ಯಗಳನ್ನಾಡಿದರೆ, 2ನೇ ಸ್ಥಾನದಲ್ಲಿರುವ ಸುರೇಶ್ ರೈನಾ 24 ಪ್ಲೇಆಫ್ಸ್ ಪಂದ್ಯಗಳನ್ನಾಡಿದ್ದಾರೆ.
ಇದಲ್ಲದೆ ಐಪಿಎಲ್ ಇತಿಹಾಸದಲ್ಲಿ ಅತೀ ಹೆಚ್ಚು ಬಾರಿ ಫೈನಲ್ ಆಡಿದ ಕ್ಯಾಪ್ಟನ್ ಎಂಬ ದಾಖಲೆ ಕೂಡ ಧೋನಿ ಪಾಲಾಗಿದೆ. ಎಂಎಸ್ಡಿ ಒಟ್ಟು 10 ಬಾರಿ ಸಿಎಸ್ಕೆ ತಂಡವನ್ನು ಫೈನಲ್ ಪಂದ್ಯದಲ್ಲಿ ಮುನ್ನಡೆಸಿದ್ದಾರೆ.
ಇನ್ನು ಈ ಪಂದ್ಯದಲ್ಲಿ ಟಾಸ್ ಗೆದ್ದ ಸಿಎಸ್ಕೆ ತಂಡವು ಮೊದಲು ಬೌಲಿಂಗ್ ಆಯ್ದುಕೊಂಡಿತು. ಅದರಂತೆ ಮೊದಲು ಬ್ಯಾಟಿಂಗ್ ಮಾಡಿದ ಗುಜರಾತ್ ಟೈಟಾನ್ಸ್ ತಂಡವು ನಿಗದಿತ 20 ಓವರ್ಗಳಲ್ಲಿ 4 ವಿಕೆಟ್ ನಷ್ಟಕ್ಕೆ 214 ರನ್ ಕಲೆಹಾಕಿದೆ.