- TV9 Kannada Kannada News Photos Cricket Photos IPL 2023 Final Shubman Gill eye on Virat Kohli big Record
IPL 2023: ‘ಮಿಷನ್ 123’; ಕಿಂಗ್ ಕೊಹ್ಲಿ ದಾಖಲೆಯ ಮೇಲೆ ಕಣ್ಣಿಟ್ಟ ಪ್ರಿನ್ಸ್ ಗಿಲ್..!
IPL 2023: ವಾಸ್ತವವಾಗಿ ಫೈನಲ್ ಪಂದ್ಯದಲ್ಲಿ ಗಿಲ್ 123 ರನ್ ಬಾರಿಸಿದರೆ, ಒಂದು ಆವೃತ್ತಿಯಲ್ಲಿ ಅತ್ಯಧಿಕ ರನ್ ಬಾರಿಸಿದ ಆಟಗಾರನೆಂಬ ದಾಖಲೆ ಬರೆದಿರುವ ಕಿಂಗ್ ಕೊಹ್ಲಿಯನ್ನು ಗಿಲ್ ಹಿಂದಿಕ್ಕಲಿದ್ದಾರೆ.
Updated on: May 27, 2023 | 4:40 PM

ಐದು ಬಾರಿಯ ಚಾಂಪಿಯನ್ ಮುಂಬೈ ತಂಡವನ್ನು 61 ರನ್ಗಳಿಂದ ಮಣಿಸಿದ ಗುಜರಾತ್ ಸತತ ಎರಡನೇ ಬಾರಿಗೆ ಐಪಿಎಲ್ ಫೈನಲ್ ತಲುಪಿದೆ. ಇದೀಗ ಭಾನುವಾರ ಮೋದಿ ಮೈದಾನದಲ್ಲಿ ನಡೆಯಲ್ಲಿರುವ ಫೈನಲ್ ಪಂದ್ಯದಲ್ಲಿ ಚೆನ್ನೈ ತಂಡವನ್ನು ಎದುರಿಸಲಿದೆ. ಇದೇ ಪಂದ್ಯದಲ್ಲಿ ಗುಜರಾತ್ ಆರಂಭಿಕ ಶುಭ್ಮನ್ ಗಿಲ್ ಅಪರೂಪದ ದಾಖಲೆ ಮುರಿಯಲು ಸಜ್ಜಾಗಿದ್ದಾರೆ.

ಇಡೀ ಆವೃತ್ತಿಯಲ್ಲಿ ಅದ್ಭುತ ಫಾರ್ಮ್ನಲ್ಲಿರುವ ಶುಭ್ಮನ್ ಗಿಲ್ ಕಳೆದ ನಾಲ್ಕು ಪಂದ್ಯಗಳಲ್ಲಿ ಬರೋಬ್ಬರಿ 3 ಶತಕ ಸಿಡಿಸಿ ಆರೆಂಜ್ ಕ್ಯಾಪ್ ಹೋಲ್ಡರ್ ಎನಿಸಿಕೊಂಡಿದ್ದಾರೆ. ಈ ಆವೃತ್ತಿಯಲ್ಲಿ ಇನ್ನೊಂದು ಪಂದ್ಯ ಬಾಕಿ ಇರುವಂತೆ 851 ರನ್ ಬಾರಿಸಿರುವ ಗಿಲ್ ಕಿಂಗ್ ಕೊಹ್ಲಿಯ ದಾಖಲೆ ಮೇಲೆ ಕಣ್ಣಿಟ್ಟಿದ್ದಾರೆ.

ಸಿಎಸ್ಕೆ ವಿರುದ್ಧದ ಫೈನಲ್ ಪಂದ್ಯದಲ್ಲಿ ಒಂದೇ ಕಲ್ಲಿನಲ್ಲಿ ಎರಡು ಹಕ್ಕಿ ಹೊಡೆಯಲು ಸಜ್ಜಾಗಿರುವ ಗಿಲ್, ಈ ಪಂದ್ಯದಲ್ಲಿ 123 ರನ್ ಬಾರಿಸಿದರೆ, ಕೊಹ್ಲಿ ಬರೆದ ಮಹತ್ವದ ದಾಖಲೆಯನ್ನು ಮುರಿಯಲಿದ್ದಾರೆ. ಅಲ್ಲದೆ ದಾಖಲೆಯ ಶತಕ ಸಿಡಿಸುವುದರೊಂದಿಗೆ ಗುಜರಾತ್ ತಂಡವನ್ನು ಮತ್ತೊಮ್ಮೆ ಚಾಂಪಿಯನ್ ಮಾಡಲು ಪ್ರಯತ್ನಿಸಲಿದ್ದಾರೆ.

ವಾಸ್ತವವಾಗಿ ಫೈನಲ್ ಪಂದ್ಯದಲ್ಲಿ ಗಿಲ್ 123 ರನ್ ಬಾರಿಸಿದರೆ, ಒಂದು ಆವೃತ್ತಿಯಲ್ಲಿ ಅತ್ಯಧಿಕ ರನ್ ಬಾರಿಸಿದ ಆಟಗಾರನೆಂಬ ದಾಖಲೆ ಬರೆದಿರುವ ಕಿಂಗ್ ಕೊಹ್ಲಿಯನ್ನು ಗಿಲ್ ಹಿಂದಿಕ್ಕಲಿದ್ದಾರೆ.

ಸದ್ಯ ಐಪಿಎಲ್ನ ಒಂದು ಸೀಸನ್ನಲ್ಲಿ 973 ರನ್ಗಳ ದಾಖಲೆ ವಿರಾಟ್ ಕೊಹ್ಲಿ ಹೆಸರಿನಲ್ಲಿದೆ. ಐಪಿಎಲ್ 2016 ರಲ್ಲಿ ಕಿಂಗ್ ಕೊಹ್ಲಿ ಮಾಡಿದ ಮ್ಯಾಜಿಕಲ್ ಫಿಗರ್ ಅನ್ನು ಮೀರಿಸಲು ಶುಭ್ಮನ್ ಗಿಲ್ 123 ರನ್ಗಳ ಹಿಂದೆ ಇದ್ದಾರೆ.

ಗಿಲ್ ಈ ಐಪಿಎಲ್ನಲ್ಲಿ ಇದುವರೆಗೆ ಆಡಿದ 16 ಪಂದ್ಯಗಳಲ್ಲಿ 156.43 ಸ್ಟ್ರೈಕ್ ರೇಟ್ನಲ್ಲಿ 851 ರನ್ ಬಾರಿಸಿದ್ದಾರೆ. ಇದರಲ್ಲಿ 3 ಶತಕಗಳು ಸೇರಿವೆ. ಅತ್ಯಧಿಕ ರನ್ ಬಾರಿಸಿದ ದಾಖಲೆ ಮುರಿಯುವದರೊಂದಿಗೆ ಒಂದು ಆವೃತ್ತಿಯಲ್ಲಿ ಅತಿ ಹೆಚ್ಚು ಶತಕ ಬಾರಿಸಿದ ಕೊಹ್ಲಿ ದಾಖಲೆಯನ್ನು ಗಿಲ್ ಸರಿಗಟ್ಟಲಿದ್ದಾರೆ. ಕೊಹ್ಲಿ ಒಂದು ಸೀಸನ್ನಲ್ಲಿ 4 ಶತಕ ಸಿಡಿಸಿದ್ದು ಇದುವರೆಗಿನ ದಾಖಲೆಯಾಗಿದೆ.

ಇನ್ನು ಫೈನಲ್ನಲ್ಲಿ ಚೆನ್ನೈ ತಂಡವನ್ನು ಗುಜರಾತ್ ಎದುರಿಸುತ್ತಿದ್ದು ಧೋನಿ ತಂಡದ ವಿರುದ್ಧ ಶುಭಮನ್ ಗಿಲ್ ಪ್ರದರ್ಶನವನ್ನು ನೋಡುವುದಾದರೆ.. ಚೆನ್ನೈ ವಿರುದ್ಧ 12 ಪಂದ್ಯಗಳನ್ನಾಡಿರುವ ಗಿಲ್ 301 ರನ್ ಬಾರಿಸಿದ್ದಾರೆ. ಅಲ್ಲದೆ ಇದೇ ಆವೃತ್ತಿಯ ಮೊದಲ ಪಂದ್ಯದಲ್ಲಿ ಚೆನ್ನೈ ವಿರುದ್ಧ 63 ರನ್ಗಳ ಗೆಲುವಿನ ಇನ್ನಿಂಗ್ಸ್ ಆಡಿದ್ದರು. ಹಾಗೆಯೇ ಗಿಲ್ ಅವರ ಈ 12 ಪಂದ್ಯಗಳಲ್ಲಿ 3 ಅರ್ಧಶತಕಗಳು ಸೇರಿವೆ.

ಪೃಥ್ವಿಶಂಕರ ಅವರ ಹುಟ್ಟೂರು ಹಾಸನದ ಕೊಣನೂರು ಸಮೀಪದ ಲಕ್ಷ್ಮೀಪುರ. ಕಳೆದ 8 ವರ್ಷಗಳಿಂದ ಪತ್ರಿಕಾರಂಗದಲ್ಲಿ ಕೆಲಸ. ಟಿವಿ9 ಕನ್ನಡದಲ್ಲೇ ವೃತ್ತಿ ಜೀವನ ಆರಂಭಿಸಿದ ಇವರು, ಮೊದಲ 3 ವರ್ಷ ವಿಡಿಯೋ ಎಡಿಟರ್ ಆಗಿ ಕೆಲಸ ಮಾಡಿದ ಬಳಿಕ ಇವರ ಆಸಕ್ತಿಯ ವಿಷಯವಾದ ಕ್ರೀಡೆಯಲ್ಲಿ ಕಂಟೆಂಟ್ ಪ್ರೊಡ್ಯೂಸರ್ ಆಗಿ ವೃತ್ತಿ ಬದುಕಿನ ಎರಡನೇ ಇನ್ನಿಂಗ್ಸ್ ಆರಂಭಿಸಿದ್ದೇನೆ.
Read More



