IPL 2023: ಎಂತಹ ಆಟಗಾರ…ವಿರಾಟ್ ಕೊಹ್ಲಿಯ ಔಟ್ ಅನ್ನು ಸಂಭ್ರಮಿಸಿದ ಗೌತಮ್ ಗಂಭೀರ್
TV9 Web | Updated By: ಝಾಹಿರ್ ಯೂಸುಫ್
Updated on:
May 10, 2023 | 3:56 PM
IPL 2023 Kannada: ಈ ಹಿಂದೆ ಲಕ್ನೋ ವಿರುದ್ಧದ ಪಂದ್ಯದಲ್ಲಿ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದ್ದ ವೃದ್ಧಿಮಾನ್ ಸಾಹ ಅವರನ್ನು ಹೊಗಳಿ ವಿರಾಟ್ ಕೊಹ್ಲಿ ವಾಟ್ ಎ ಪ್ಲೇಯರ್ ಎಂದು ಪೋಸ್ಟ್ ಹಾಕಿದ್ದರು.
1 / 9
IPL 2023: ವಿರಾಟ್ ಕೊಹ್ಲಿ ಹಾಗೂ ಗೌತಮ್ ಗಂಭೀರ್ ನಡುವಣ ಜಟಾಪಟಿ ಸದ್ಯಕ್ಕಂತು ಮುಗಿಯುವ ಲಕ್ಷಣ ಕಾಣಿಸುತ್ತಿಲ್ಲ. 2013 ರಲ್ಲಿ ಮೈದಾನದಲ್ಲೇ ಕಿತ್ತಾಡುವ ಮೂಲಕ ಶುರು ಹಚ್ಚಿಕೊಂಡಿದ್ದ ಈ ವಾಕ್ಸಮರವು 2023 ರಲ್ಲೂ ಮುಂದುವರೆದಿದೆ.
2 / 9
ಈ ಬಾರಿ ವಿರಾಟ್ ಕೊಹ್ಲಿ ಆಟಗಾರನಾಗಿದ್ದರೆ, ಗೌತಮ್ ಗಂಭೀರ್ ಮೆಂಟರ್ ಸ್ಥಾನದಲ್ಲಿದ್ದಾರೆ. ಇದಾಗ್ಯೂ ಇಬ್ಬರ ನಡುವಣ ಕಿತ್ತಾಟವು ತಾರಕ್ಕೇರಿರುವುದು ವಿಶೇಷ.
3 / 9
ಏಪ್ರಿಲ್ 10 ರಂದು ಬೆಂಗಳೂರಿನಲ್ಲಿ ನಡೆದ ಆರ್ಸಿಬಿ ವಿರುದ್ಧದ ಪಂದ್ಯದ ಗೆಲುವಿನ ಬಳಿಕ ಲಕ್ನೋ ಸೂಪರ್ ಜೈಂಟ್ಸ್ ತಂಡದ ಮೆಂಟರ್ ಗೌತಮ್ ಗಂಭೀರ್ ಆಕ್ರೋಶಭರಿತರಾಗಿ ಸಂಭ್ರಮಿಸಿದ್ದರು. ಈ ಸಂಭ್ರಮದ ನಡುವೆ ಆರ್ಸಿಬಿ ಅಭಿಮಾನಿಗಳನ್ನು ಬಾಯಿ ಮುಚ್ಚಿಕೊಂಡಿರುವಂತೆ ಸೂಚಿಸಿದ್ದರು.
4 / 9
ಇದಾದ ಬಳಿಕ ಲಕ್ನೋದಲ್ಲಿ ನಡೆದ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧದ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಭರ್ಜರಿ ಸಂಭ್ರಮದ ಮೂಲಕ ತಿರುಗೇಟು ನೀಡಿದ್ದರು. ಇತ್ತ ಕೊಹ್ಲಿಯ ಸಂಭ್ರಮದಿಂದ ಕುಪಿತಗೊಂಡಿದ್ದ ಗಂಭೀರ್ ಪಂದ್ಯದ ಬಳಿಕ ಜಗಳಕ್ಕಿಳಿದಿದ್ದರು. ಇದಾದ ಬಳಿಕ ಇಬ್ಬರಿಗೂ ಬಿಸಿಸಿಐ ಪಂದ್ಯ ಶುಲ್ಕದ ಶೇ.100 ರಷ್ಟು ದಂಡ ವಿಧಿಸಿದ್ದರು.
5 / 9
ಈ ದಂಡದ ಬಳಿಕ ಎಲ್ಲವೂ ಮುಗಿಯಿತು ಅಂದುಕೊಳ್ಳುವಾಗಲೇ, ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧದ ಪಂದ್ಯದಲ್ಲಿ ಉತ್ತಮ ಪ್ರದರ್ಶನ ನೀಡಿದ ಗುಜರಾತ್ ಟೈಟಾನ್ಸ್ ಆಟಗಾರರನ್ನು ವಿರಾಟ್ ಕೊಹ್ಲಿ ಸೋಷಿಯಲ್ ಮೀಡಿಯಾದಲ್ಲಿ ಹಾಡಿಹೊಗಳಿದ್ದರು.
6 / 9
ಇದೀಗ ಈ ಸೋಷಿಯಲ್ ಮೀಡಿಯಾ ಪೋಸ್ಟ್ಗೂ ಗೌತಮ್ ಗಂಭೀರ್ ತಿರುಗೇಟು ನೀಡಿದ್ದಾರೆ. ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಔಟ್ ಆಗುತ್ತಿದ್ದಂತೆ ಗಂಭೀರ್ ಇನ್ಸ್ಟಾಗ್ರಾಮ್ನಲ್ಲಿ ಪೋಸ್ಟ್ವೊಂದು ಹಾಕಿ ಸಂಭ್ರಮಿಸಿದ್ದರು. ಅದು ಕೂಡ ಥೇಟ್ ಕಿಂಗ್ ಕೊಹ್ಲಿ ಹಾಕಿದ ಪೋಸ್ಟ್ ಅನ್ನು ಹೋಲುವಂತೆ ಎಂಬುದೇ ವಿಶೇಷ.
7 / 9
ಹೌದು, ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಜೇಸನ್ ಬೆಹ್ರೆನ್ಡಾರ್ಫ್ ಎಸೆದ ಮೊದಲ ಓವರ್ನಲ್ಲೇ ವಿಕೆಟ್ ಕೀಪರ್ಗೆ ಕ್ಯಾಚ್ ನೀಡಿ ಔಟಾಗಿದ್ದರು. ಇತ್ತ ಕೊಹ್ಲಿ ಔಟಾಗುತ್ತಿದ್ದಂತೆ ಅತ್ತ ಗಂಭೀರ್ ಇನ್ಸ್ಟಾಗ್ರಾಮ್ನಲ್ಲಿ ವಾಟ್ ಎ ಪ್ಲೇಯರ್ ಎಂದು ಜೇಸನ್ ಬೆಹ್ರೆನ್ಡಾರ್ಫ್ ಅವರ ಫೋಟೋವನ್ನು ಸ್ಟೋರಿ ಹಾಕಿದ್ದರು.
8 / 9
ಈ ಕೌಂಟರ್ ಅಟ್ಯಾಕ್ ಪೋಸ್ಟ್ ವೈರಲ್ ಆಗುತ್ತಿದ್ದಂತೆ ಗಂಭೀರ್ ಪೋಸ್ಟ್ ಅನ್ನು ಡಿಲೀಟ್ ಮಾಡಿದ್ದಾರೆ. ಆದರೆ ಅಷ್ಟರಲ್ಲಾಗಲೇ ಗೌತಿಯ ಇನ್ಸ್ಟಾ ಸ್ಟೋರಿಯ ಸ್ಕ್ರೀನ್ ಶಾಟ್ಗಳು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡಲಾರಂಭಿಸಿದೆ.
9 / 9
ವಿಶೇಷ ಎಂದರೆ ಈ ಹಿಂದೆ ಲಕ್ನೋ ವಿರುದ್ಧದ ಪಂದ್ಯದಲ್ಲಿ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದ್ದ ವೃದ್ಧಿಮಾನ್ ಸಾಹ ಅವರನ್ನು ಹೊಗಳಿ ವಿರಾಟ್ ಕೊಹ್ಲಿ ವಾಟ್ ಎ ಪ್ಲೇಯರ್ ಎಂದು ಪೋಸ್ಟ್ ಹಾಕಿದ್ದರು. ಇದೀಗ ಕೊಹ್ಲಿಯ ವಿಕೆಟ್ ಅನ್ನು ಸಂಭ್ರಿಮಿಸುವ ಮೂಲಕ ಗೌತಮ್ ಗಂಭೀರ್ ತಿರುಗೇಟು ನೀಡಿದ್ದಾರೆ.