- Kannada News Photo gallery Cricket photos IPL 2023: Naveen-ul-Haq Takes Another Indirect Dig At Virat Kohli
IPL 2023: ಸ್ವೀಟ್ ಮ್ಯಾಂಗೋಸ್…ಮತ್ತೆ ಕೊಹ್ಲಿಯನ್ನು ಕಿಚಾಯಿಸಿದ್ರಾ ನವೀನ್ ಉಲ್ ಹಕ್
IPL 2023 Kannada: ಈ ಪಂದ್ಯದಲ್ಲಿ ಟಾಸ್ ಸೋತ ಆರ್ಸಿಬಿ ತಂಡವು ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆಯಿತು. ಆದರೆ ಕೇವಲ 16 ರನ್ಗಳಿಗೆ 2 ವಿಕೆಟ್ ಕಳೆದುಕೊಂಡ ಆರ್ಸಿಬಿ ಆರಂಭಿಕ ಆಘಾತಕ್ಕೆ ಸಿಲುಕಿತ್ತು.
Updated on: May 10, 2023 | 10:06 PM

IPL 2023: ಐಪಿಎಲ್ನ 54ನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ದ ಆರ್ಸಿಬಿ ತಂಡವು ಹೀನಾಯವಾಗಿ ಸೋಲನುಭವಿಸಿದೆ. ಆದರೆ ಈ ಪಂದ್ಯದ ವೇಳೆ ಲಕ್ನೋ ಸೂಪರ್ ಜೈಂಟ್ಸ್ ತಂಡದ ಆಟಗಾರ ನವೀನ್ ಉಲ್ ಹಕ್ ಹಾಕಿದ ಇನ್ಸ್ಟಾಗ್ರಾಮ್ ಪೋಸ್ಟ್ ಇದೀಗ ಸಿಕ್ಕಾಪಟ್ಟೆ ವೈರಲ್ ಆಗಿದೆ.

ಈ ಪಂದ್ಯದಲ್ಲಿ ಟಾಸ್ ಸೋತ ಆರ್ಸಿಬಿ ತಂಡವು ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆಯಿತು. ಆದರೆ ಕೇವಲ 16 ರನ್ಗಳಿಗೆ 2 ವಿಕೆಟ್ ಕಳೆದುಕೊಂಡ ಆರ್ಸಿಬಿ ಆರಂಭಿಕ ಆಘಾತಕ್ಕೆ ಸಿಲುಕಿತ್ತು.

ಇತ್ತ ಆರ್ಸಿಬಿ ತಂಡವು ಆರಂಭಿಕ ಆಘಾತಕ್ಕೆ ಒಳಗಾಗುತ್ತಿದ್ದಂತೆ ಮಾವಿನ ಸವಿಯುತ್ತಾ ಈ ಪಂದ್ಯವನ್ನು ವೀಕ್ಷಿಸುತ್ತಿರುವ ಫೋಟೋ ಹಾಕಿದ ಲಕ್ನೋ ತಂಡದ ನವೀನ್ ಉಲ್ ಹಕ್ ಸ್ವೀಟ್ ಮ್ಯಾಂಗೋಸ್ ಎಂದು ಬರೆದಿದ್ದರು. ಮೇಲ್ನೋಟಕ್ಕೆ ಈ ಪೋಸ್ಟ್ ವಿರಾಟ್ ಕೊಹ್ಲಿಯ ಔಟ್ ಆಗಿರುವುದನ್ನು ಸಂಭ್ರಮಿಸಿದ್ದಾಗಿತ್ತು.

ಇದಾದ ಬಳಿಕ ಮುಂಬೈ ಇಂಡಿಯನ್ಸ್ ತಂಡದ ಬ್ಯಾಟಿಂಗ್ ವೇಳೆ ಮತ್ತೊಂದು ಪೋಸ್ಟ್ ಹಾಕಿದ್ದರು. ಈ ವೇಳೆ ಕೂಡ ನಾನು ತಿಂದಂತಹ ಅತ್ಯುತ್ತಮ ಮಾವಿನ ಹಣ್ಣು ಎಂದು ಬರೆದುಕೊಂಡಿದ್ದರು. ಇಲ್ಲಿ ಈ ಎರಡು ಪೋಸ್ಟ್ಗಳು ಈ ಹಿಂದೆ ವಿರಾಟ್ ಕೊಹ್ಲಿ ಮಾಡಿದ ಇನ್ಸ್ಟಾಗ್ರಾಮ್ ಪೋಸ್ಟ್ಗಳಿಗೆ ಸಾಮ್ಯತೆಯಿದೆ ಎಂಬುದು ವಿಶೇಷ.

ಏಕೆಂದರೆ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧದ ಪಂದ್ಯದಲ್ಲಿ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದ ವೃದ್ದಿಮಾನ್ ಸಾಹ ಅವರನ್ನು ಹೊಗಳಿ ವಿರಾಟ್ ಕೊಹ್ಲಿ ಎಂತಹ ಆಟಗಾರ ಎಂದು ಬರೆದುಕೊಂಡಿದ್ದರು.

ಅಷ್ಟೇ ಅಲ್ಲದೆ ಲಕ್ನೋ ವಿರುದ್ಧ ರಶೀದ್ ಖಾನ್ ಹಿಡಿದ ಅತ್ಯದ್ಭುತ ಕ್ಯಾಚ್ ಅನ್ನು ಹೊಗಳಿದ್ದ ವಿರಾಟ್ ಕೊಹ್ಲಿ, ನಾನು ನೋಡಿ ಅತ್ಯುತ್ತಮ ಕ್ಯಾಚ್ ಎಂದು ಇನ್ಸ್ಟಾಗ್ರಾಮ್ ಸ್ಟೋರಿ ಹಾಕಿದ್ದರು. ಇದೀಗ ಇದೇ ಮಾದರಿಯಲ್ಲಿ ನವೀನ್ ಉಲ್ ಹಕ್ ನಾನು ತಿಂದಂತಹ ಅತ್ಯುತ್ತಮ ಮಾವಿನ ಹಣ್ಣು..ಸ್ವೀಟ್ ಮ್ಯಾಂಗೋಸ್ ಎಂದು ಬರೆದುಕೊಂಡಿದ್ದಾರೆ.

ಇಲ್ಲಿ ಆರ್ಸಿಬಿ ಸೋಲನ್ನು ಸಂಭ್ರಮಿಸುತ್ತಿರುವುದನ್ನು ಮಾವಿನ ಹಣ್ಣಿನ ಸಿಹಿಯ ಮೂಲಕ ನವೀನ್ ಉಲ್ ಹಕ್ ಪರೋಕ್ಷವಾಗಿ ತಿಳಿಸಿದ್ದಾರೆ ಎಂದು ವಿಶ್ಲೇಷಿಸಲಾಗುತ್ತಿದೆ.

ಒಟ್ಟಿನಲ್ಲಿ ಆರ್ಸಿಬಿ-ಲಕ್ನೋ ನಡುವಣ ಪಂದ್ಯದ ವೇಳೆ ಕಿತ್ತಾಡಿಕೊಂಡಿದ್ದ ನವೀನ್ ಉಲ್ ಹಕ್ ಹಾಗೂ ವಿರಾಟ್ ಕೊಹ್ಲಿಯ ವಾಕ್ಸಮರ ಇದೀಗ ಸೋಷಿಯಲ್ ಮೀಡಿಯಾದಲ್ಲಿ ಮುಂದುವರೆದಿರುವುದು ವಿಶೇಷ.
