AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

IPL 2023: ಸ್ವೀಟ್ ಮ್ಯಾಂಗೋಸ್…ಮತ್ತೆ ಕೊಹ್ಲಿಯನ್ನು ಕಿಚಾಯಿಸಿದ್ರಾ ನವೀನ್ ಉಲ್ ಹಕ್

IPL 2023 Kannada: ಈ ಪಂದ್ಯದಲ್ಲಿ ಟಾಸ್ ಸೋತ ಆರ್​ಸಿಬಿ ತಂಡವು ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆಯಿತು. ಆದರೆ ಕೇವಲ 16 ರನ್​ಗಳಿಗೆ 2 ವಿಕೆಟ್ ಕಳೆದುಕೊಂಡ ಆರ್​ಸಿಬಿ ಆರಂಭಿಕ ಆಘಾತಕ್ಕೆ ಸಿಲುಕಿತ್ತು.

TV9 Web
| Edited By: |

Updated on: May 10, 2023 | 10:06 PM

Share
IPL 2023: ಐಪಿಎಲ್​ನ 54ನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ದ ಆರ್​ಸಿಬಿ ತಂಡವು ಹೀನಾಯವಾಗಿ ಸೋಲನುಭವಿಸಿದೆ. ಆದರೆ ಈ ಪಂದ್ಯದ ವೇಳೆ ಲಕ್ನೋ ಸೂಪರ್ ಜೈಂಟ್ಸ್​ ತಂಡದ ಆಟಗಾರ ನವೀನ್ ಉಲ್ ಹಕ್ ಹಾಕಿದ ಇನ್​ಸ್ಟಾಗ್ರಾಮ್ ಪೋಸ್ಟ್ ಇದೀಗ ಸಿಕ್ಕಾಪಟ್ಟೆ ವೈರಲ್ ಆಗಿದೆ.

1 / 8
ಈ ಪಂದ್ಯದಲ್ಲಿ ಟಾಸ್ ಸೋತ ಆರ್​ಸಿಬಿ ತಂಡವು ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆಯಿತು. ಆದರೆ ಕೇವಲ 16 ರನ್​ಗಳಿಗೆ 2 ವಿಕೆಟ್ ಕಳೆದುಕೊಂಡ ಆರ್​ಸಿಬಿ ಆರಂಭಿಕ ಆಘಾತಕ್ಕೆ ಸಿಲುಕಿತ್ತು.

2 / 8
ಇತ್ತ ಆರ್​ಸಿಬಿ ತಂಡವು ಆರಂಭಿಕ ಆಘಾತಕ್ಕೆ ಒಳಗಾಗುತ್ತಿದ್ದಂತೆ ಮಾವಿನ ಸವಿಯುತ್ತಾ ಈ ಪಂದ್ಯವನ್ನು ವೀಕ್ಷಿಸುತ್ತಿರುವ ಫೋಟೋ ಹಾಕಿದ ಲಕ್ನೋ ತಂಡದ ನವೀನ್ ಉಲ್ ಹಕ್ ಸ್ವೀಟ್ ಮ್ಯಾಂಗೋಸ್ ಎಂದು ಬರೆದಿದ್ದರು. ಮೇಲ್ನೋಟಕ್ಕೆ ಈ ಪೋಸ್ಟ್ ವಿರಾಟ್ ಕೊಹ್ಲಿಯ ಔಟ್ ಆಗಿರುವುದನ್ನು ಸಂಭ್ರಮಿಸಿದ್ದಾಗಿತ್ತು.

3 / 8
ಇದಾದ ಬಳಿಕ ಮುಂಬೈ ಇಂಡಿಯನ್ಸ್ ತಂಡದ ಬ್ಯಾಟಿಂಗ್ ವೇಳೆ ಮತ್ತೊಂದು ಪೋಸ್ಟ್ ಹಾಕಿದ್ದರು. ಈ ವೇಳೆ ಕೂಡ ನಾನು ತಿಂದಂತಹ ಅತ್ಯುತ್ತಮ ಮಾವಿನ ಹಣ್ಣು ಎಂದು ಬರೆದುಕೊಂಡಿದ್ದರು. ಇಲ್ಲಿ ಈ ಎರಡು ಪೋಸ್ಟ್​ಗಳು ಈ ಹಿಂದೆ ವಿರಾಟ್ ಕೊಹ್ಲಿ ಮಾಡಿದ ಇನ್​ಸ್ಟಾಗ್ರಾಮ್ ಪೋಸ್ಟ್​ಗಳಿಗೆ ಸಾಮ್ಯತೆಯಿದೆ ಎಂಬುದು ವಿಶೇಷ.

4 / 8
ಏಕೆಂದರೆ ಲಕ್ನೋ ಸೂಪರ್ ಜೈಂಟ್ಸ್​ ವಿರುದ್ಧದ ಪಂದ್ಯದಲ್ಲಿ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದ ವೃದ್ದಿಮಾನ್ ಸಾಹ ಅವರನ್ನು ಹೊಗಳಿ ವಿರಾಟ್ ಕೊಹ್ಲಿ ಎಂತಹ ಆಟಗಾರ ಎಂದು ಬರೆದುಕೊಂಡಿದ್ದರು.

5 / 8
ಅಷ್ಟೇ ಅಲ್ಲದೆ ಲಕ್ನೋ ವಿರುದ್ಧ ರಶೀದ್ ಖಾನ್ ಹಿಡಿದ ಅತ್ಯದ್ಭುತ ಕ್ಯಾಚ್​ ಅನ್ನು ಹೊಗಳಿದ್ದ ವಿರಾಟ್ ಕೊಹ್ಲಿ, ನಾನು ನೋಡಿ ಅತ್ಯುತ್ತಮ ಕ್ಯಾಚ್​ ಎಂದು ಇನ್​ಸ್ಟಾಗ್ರಾಮ್ ಸ್ಟೋರಿ ಹಾಕಿದ್ದರು. ಇದೀಗ ಇದೇ ಮಾದರಿಯಲ್ಲಿ ನವೀನ್ ಉಲ್ ಹಕ್ ನಾನು ತಿಂದಂತಹ ಅತ್ಯುತ್ತಮ ಮಾವಿನ ಹಣ್ಣು..ಸ್ವೀಟ್ ಮ್ಯಾಂಗೋಸ್ ಎಂದು ಬರೆದುಕೊಂಡಿದ್ದಾರೆ.

6 / 8
ಇಲ್ಲಿ ಆರ್​ಸಿಬಿ ಸೋಲನ್ನು ಸಂಭ್ರಮಿಸುತ್ತಿರುವುದನ್ನು ಮಾವಿನ ಹಣ್ಣಿನ ಸಿಹಿಯ ಮೂಲಕ ನವೀನ್ ಉಲ್ ಹಕ್ ಪರೋಕ್ಷವಾಗಿ ತಿಳಿಸಿದ್ದಾರೆ ಎಂದು ವಿಶ್ಲೇಷಿಸಲಾಗುತ್ತಿದೆ.

7 / 8
ಒಟ್ಟಿನಲ್ಲಿ ಆರ್​ಸಿಬಿ-ಲಕ್ನೋ ನಡುವಣ ಪಂದ್ಯದ ವೇಳೆ ಕಿತ್ತಾಡಿಕೊಂಡಿದ್ದ ನವೀನ್ ಉಲ್ ಹಕ್ ಹಾಗೂ ವಿರಾಟ್ ಕೊಹ್ಲಿಯ ವಾಕ್ಸಮರ ಇದೀಗ ಸೋಷಿಯಲ್ ಮೀಡಿಯಾದಲ್ಲಿ ಮುಂದುವರೆದಿರುವುದು ವಿಶೇಷ.

8 / 8
Web contact
Web contact

TV9 Kannada

Read More
Follow Us
ಮೊದಲ ಸಂಪುಟ ಸಭೆಯಲ್ಲೇ ಡಿಕೆ ಶಿವಕುಮಾರ್​​ ಗುಡ್​ ನ್ಯೂಸ್: 6 ಕೊಡುಗೆ ಘೋಷಣೆ

ಡಿಕೆ ಶಿವಕುಮಾರ್ ಸಿಎಂ ಆಗುತ್ತಿದ್ದಂತೆಯೇ ಹಲವು ಅಧಿಕಾರಿಗಳಿಗೆ ಗೇಟ್ ಪಾಸ್

ಟೆಸ್ಟ್ ಪಂದ್ಯಕ್ಕಾಗಿ ಅಭ್ಯಾಸ ಆರಂಭಿಸಿದ ಟೀಂ ಇಂಡಿಯಾ

ಪರಿಷತ್ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ

ವಿಧಾನಸೌಧದ ಮೆಟ್ಟಿಲುಗಳಿಗೆ ಸಿಎಂ ಡಿಕೆಶಿಯಿಂದ ದೀರ್ಘದಂಡ ನಮಸ್ಕಾರ

ಮುಂದಿನ ಪೀಳಿಗೆ ಕೂಡ ಡಿಕೆಶಿ ಸಾಧನೆ ಬಗ್ಗೆ ಮಾತಾಡುವಂತೆ ಕೆಲಸ ಆಗಲಿ: ರಮೇಶ್

ಡಿಕೆ ಶಿವಕುಮಾರ್ ಪದಗ್ರಹಣದ ಬಗ್ಗೆ ಶಿವರಾಜ್ ಕುಮಾರ್ ಮಾತು: ವಿಡಿಯೋ

ಸಚಿವರಾಗಿ ಪ್ರಮಾಣದ ಬೆನ್ನಲ್ಲೇ ತಂದೆ ಸಿದ್ದರಾಮಯ್ಯ ಆಶೀರ್ವಾದ ಪಡೆದ ಯತೀಂದ್ರ

ಡಿಕೆ ಶಿವಕುಮಾರ್ ಸಿಎಂ ಆಗಿದ್ದಕ್ಕೆ ತುಂಬಾ ಖುಷಿ ಆಗುತ್ತಿದೆ: ನಟಿ ರಮ್ಯಾ

ಡಿಕೆಶಿ ಪದಗ್ರಹಣದ ಬೆನ್ನಲ್ಲೇ ವಿಧಾನಸೌಧದಲ್ಲಿ ಬದಲಾದ ಸಿಎಂ ಕಚೇರಿ ನಾಮಫಲಕ