IPL 2023: ಐಪಿಎಲ್​ನಿಂದ ಬುಮ್ರಾ ಔಟ್: ಮುಂಬೈ ಇಂಡಿಯನ್ಸ್​ ಮುಂದಿದೆ 3 ಆಯ್ಕೆಗಳು

| Updated By: ಝಾಹಿರ್ ಯೂಸುಫ್

Updated on: Feb 28, 2023 | 7:54 PM

IPL 2023 Kannada News: ಯಾರ್ಕರ್ ಸ್ಪೆಷಲಿಸ್ಟ್ ಬುಮ್ರಾ ಸ್ಥಾನವನ್ನು ತುಂಬಬಲ್ಲ ಬದಲಿ ಬೌಲರ್ ಸಿಗುವುದು ಕಷ್ಟ. ಇದಾಗ್ಯೂ ಮುಂಬೈ ಇಂಡಿಯನ್ಸ್ ಮುಂದೆ ಮೂವರು ಅನುಭವಿ ಭಾರತೀಯ ಬೌಲರ್​ಗಳ ಆಯ್ಕೆಯಿದೆ. ಅವರೆಂದರೆ...

1 / 6
ಇಂಡಿಯನ್ ಪ್ರೀಮಿಯರ್ ಲೀಗ್​ನಿಂದ ಮುಂಬೈ ಇಂಡಿಯನ್ಸ್ ವೇಗಿ ಜಸ್​ಪ್ರೀತ್ ಬುಮ್ರಾ ಹೊರಬಿದ್ದಿದ್ದಾರೆ. ಬೆನ್ನು ನೋವಿನ ಸಮಸ್ಯೆಯಿಂದ ಬಳಲುತ್ತಿರುವ ಬುಮ್ರಾ ಕಳೆದ ಕೆಲ ತಿಂಗಳಿಂದ ಮೈದಾನಕ್ಕಿಳಿದಿರಲಿಲ್ಲ. ಇದೀಗ ಸಂಪೂರ್ಣ ಗುಣಮುಖರಾಗದ ಕಾರಣ ಐಪಿಎಲ್​ನಿಂದಲೂ ಹೊರಗುಳಿಯಲು ನಿರ್ಧರಿಸಿದ್ದಾರೆ.

2 / 6
ಇತ್ತ ತಂಡದ ಪ್ರಮುಖ ವೇಗಿ ಹೊರಗುಳಿಯುತ್ತಿದ್ದಂತೆ ಮುಂಬೈ ಇಂಡಿಯನ್ಸ್ ಫ್ರಾಂಚೈಸಿ ಕೂಡ ಚಿಂತೆಗೀಡಾಗಿದೆ. ಏಕೆಂದರೆ ಪ್ಲೇಯಿಂಗ್ ಇಲೆವೆನ್​ನ ಸದಸ್ಯರಾಗಿದ್ದ ವೇಗಿಯ ಬದಲಿಗೆ ಮತ್ತೋರ್ವ ಅತ್ಯುತ್ತಮ ಭಾರತೀಯ ಆಟಗಾರನನ್ನು ಆಯ್ಕೆ ಮಾಡಬೇಕಾದ ಅನಿವಾರ್ಯತೆ ಮುಂಬೈ ಫ್ರಾಂಚೈಸಿ ಮುಂದಿದೆ.

3 / 6
ಆದರೆ ಯಾರ್ಕರ್ ಸ್ಪೆಷಲಿಸ್ಟ್ ಸ್ಥಾನವನ್ನು ತುಂಬಬಲ್ಲ ಬದಲಿ ಬೌಲರ್ ಸಿಗುವುದು ಕಷ್ಟ. ಇದಾಗ್ಯೂ ಮುಂಬೈ ಇಂಡಿಯನ್ಸ್ ಮುಂದೆ ಮೂವರು ಅನುಭವಿ ಭಾರತೀಯ ಬೌಲರ್​ಗಳ ಆಯ್ಕೆಯಿದೆ. ಅವರೆಂದರೆ...

4 / 6
ಸಂದೀಪ್ ಶರ್ಮಾ: ಐಪಿಎಲ್​ನಲ್ಲಿ 104 ಪಂದ್ಯಗಳನ್ನಾಡಿರುವ ಸಂದೀಪ್ ಶರ್ಮಾ ಅತ್ಯುತ್ತಮ ಬೌಲರ್ ಎಂಬುದರಲ್ಲಿ ಅನುಮಾನವೇ ಇಲ್ಲ. ಇದಕ್ಕೆ ಸಾಕ್ಷಿಯೇ ಅವರು 7.77 ಎಕಾನಮಿ ರೇಟ್​ನಲ್ಲಿ ರನ್ ನೀಡಿ ಒಟ್ಟು 114 ವಿಕೆಟ್​ಗಳನ್ನು ಕಬಳಿಸಿರುವುದು. ಆದರೆ ಈ ಬಾರಿಯ ಹರಾಜಿನಲ್ಲಿ ಸಂದೀಪ್ ಖರೀದಿಗೆ ಯಾವುದೇ ಫ್ರಾಂಚೈಸಿಗಳು ಮುಂದಾಗಿರಲಿಲ್ಲ. ಈ ಬಗ್ಗೆ ಖುದ್ದು ಸಂದೀಪ್ ಶರ್ಮಾ ಕೂಡ ಅಚ್ಚರಿ ವ್ಯಕ್ತಪಡಿಸಿದ್ದರು. ಇದೀಗ ಜಸ್​ಪ್ರೀತ್ ಬುಮ್ರಾ ಹೊರಗುಳಿದಿರುವ ಕಾರಣ ಮಾಜಿ ಪಂಜಾಬ್ ಕಿಂಗ್ಸ್ ವೇಗಿಗೆ ಮುಂಬೈ ಇಂಡಿಯನ್ಸ್ ಮಣೆ ಹಾಕಲಿದೆಯಾ ಕಾದು ನೋಡಬೇಕಿದೆ.

5 / 6
ಧವಳ್ ಕುಲಕರ್ಣಿ: ಈ ಬಾರಿಯ ಐಪಿಎಲ್​ನಲ್ಲಿ ಮುಂಬೈ ಇಂಡಿಯನ್ಸ್ ತಂಡದ ಮಾಜಿ ವೇಗಿ ಧವಳ್ ಕುಲಕರ್ಣಿ ಅವರನ್ನು ಯಾವುದೇ ಫ್ರಾಂಚೈಸಿ ಖರೀದಿಸಿರಲಿಲ್ಲ. ಇದಾಗ್ಯೂ ಐಪಿಎಲ್​ನಲ್ಲಿ 84 ಪಂದ್ಯಗಳನ್ನಾಡಿರುವ ಅನುಭವ ಹೊಂದಿರುವ ಕುಲಕರ್ಣಿ ಒಟ್ಟು 86 ವಿಕೆಟ್ ಪಡೆದಿದ್ದಾರೆ. ಹೀಗಾಗಿ ಮುಂಬೈ ಫ್ರಾಂಚೈಸಿ ಮಾಜಿ ವೇಗಿಯನ್ನು ತಂಡಕ್ಕೆ ಸೇರಿಸಿಕೊಂಡರೂ ಅಚ್ಚರಿಪಡಬೇಕಿಲ್ಲ.

6 / 6
ವರುಣ್ ಆರೋನ್: ಕಳೆದ ಸೀಸನ್​ನಲ್ಲಿ ಗುಜರಾತ್ ಟೈಟಾನ್ಸ್ ತಂಡದಲ್ಲಿದ್ದ ವರೋನ್ ಆರೋನ್ ಅವರ ಖರೀದಿಗೆ ಈ ಬಾರಿ ಯಾವುದೇ ಫ್ರಾಂಚೈಸಿ ಮುಂದಾಗಿರಲಿಲ್ಲ. ಇದೀಗ ಬುಮ್ರಾ ಸ್ಥಾನದಲ್ಲಿ ಐಪಿಎಲ್ ಅವಕಾಶವನ್ನು ಎದುರು ನೋಡುತ್ತಿದ್ದಾರೆ. ಏಕೆಂದರೆ 52 ಐಪಿಎಲ್ ಪಂದ್ಯವಾಡಿರುವ ವರುಣ್ 44 ವಿಕೆಟ್ ಕಬಳಿಸಿದ್ದಾರೆ. ಹೀಗಾಗಿ ಬುಮ್ರಾ ಬದಲಿ ಆಟಗಾರನಾಗಿ ಮುಂಬೈ ಇಂಡಿಯನ್ಸ್ ಫ್ರಾಂಚೈಸಿಯು ವರುಣ್ ಆರೋನ್​ಗೆ ಮಣೆ ಹಾಕಬಹುದು.