IPL 2023: ಹುದ್ದೆಯ ಘನತೆಯನ್ನೇ ಮರೆತ ಬಿಸಿಸಿಐ ಕಾರ್ಯದರ್ಶಿ ಜಯ್ ಶಾ
TV9 Web | Updated By: ಝಾಹಿರ್ ಯೂಸುಫ್
Updated on:
May 30, 2023 | 2:57 PM
IPL 2023 Final Csk vs Gt: ರಣರೋಚಕ ಕಾದಾಟಕ್ಕೆ ಸಾಕ್ಷಿಯಾಗಿದ್ದ ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಗುಜರಾತ್ ಟೈಟಾನ್ಸ್ ತಂಡವು ನಿಗದಿತ 20 ಓವರ್ಗಳಲ್ಲಿ 4 ವಿಕೆಟ್ ನಷ್ಟಕ್ಕೆ 214 ರನ್ ಕಲೆಹಾಕಿತು.
1 / 8
IPL 2023 Final CSK vs GT: ಅಹಮದಾಬಾದ್ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ಐಪಿಎಲ್ನ ಮೆಗಾ ಫೈನಲ್ನಲ್ಲಿ ಗುಜರಾತ್ ಟೈಟಾನ್ಸ್ ವಿರುದ್ಧ ರೋಚಕ ಜಯ ಸಾಧಿಸಿ ಚೆನ್ನೈ ಸೂಪರ್ ಕಿಂಗ್ಸ್ 5ನೇ ಬಾರಿ ಚಾಂಪಿಯನ್ ಆಗಿ ಹೊರಹೊಮ್ಮಿದೆ.
2 / 8
ರಣರೋಚಕ ಕಾದಾಟಕ್ಕೆ ಸಾಕ್ಷಿಯಾಗಿದ್ದ ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಗುಜರಾತ್ ಟೈಟಾನ್ಸ್ ತಂಡವು ನಿಗದಿತ 20 ಓವರ್ಗಳಲ್ಲಿ 4 ವಿಕೆಟ್ ನಷ್ಟಕ್ಕೆ 214 ರನ್ ಕಲೆಹಾಕಿತ್ತು. ಇದಕ್ಕುತ್ತರವಾಗಿ ಸಿಎಸ್ಕೆ ಇನಿಂಗ್ಸ್ ಆರಂಭಿಸಿದಾಗ ಮಳೆ ಬರಲಾರಂಭಿಸಿತು. ಇದರಿಂದ ಕೆಲ ಪಂದ್ಯ ಸ್ಥಗಿತವಾಯಿತು. ಅಲ್ಲದೆ ಆ ಬಳಿಕ ಡಕ್ವರ್ತ್ ಲೂಯಿಸ್ ನಿಯಮದ ಪ್ರಕಾರ ಸಿಎಸ್ಕೆ ತಂಡಕ್ಕೆ 15 ಓವರ್ಗಳಲ್ಲಿ 171 ರನ್ಗಳ ಟಾರ್ಗೆಟ್ ನೀಡಲಾಯಿತು.
3 / 8
171 ರನ್ಗಳ ಟಾರ್ಗೆಟ್ ಬೆನ್ನತ್ತಿದ ಸಿಎಸ್ಕೆ ತಂಡಕ್ಕೆ ಕೊನೆಯ ಓವರ್ನಲ್ಲಿ 13 ರನ್ಗಳ ಅವಶ್ಯಕತೆಯಿತ್ತು. ಅದರಲ್ಲೂ ಕೊನೆಯ 2 ಎಸೆತಗಳಲ್ಲಿ 10 ರನ್ ಬೇಕಿದ್ದ ವೇಳೆ ರವೀಂದ್ರ ಜಡೇಜಾ ಸಿಕ್ಸ್ ಹಾಗೂ ಫೋರ್ ಬಾರಿಸುವ ಮೂಲಕ ಸಿಎಸ್ಕೆ ತಂಡಕ್ಕೆ ರೋಚಕ ಜಯ ತಂದುಕೊಟ್ಟರು.
4 / 8
ಆದರೆ ಅತ್ತ ಸ್ಟೇಡಿಯಂನಲ್ಲಿ ಪಂದ್ಯ ವೀಕ್ಷಿಸುತ್ತಿದ್ದ ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಅವರು ಗುಜರಾತ್ ಟೈಟಾನ್ಸ್ ತಂಡದ ಗೆಲುವಿನ ನಿರೀಕ್ಷೆಯಲ್ಲಿದ್ದರು. ಪಂದ್ಯದ ಆರಂಭದಿಂದಲೂ ಗುಜರಾತ್ ಟೈಟಾನ್ಸ್ ತಂಡವನ್ನು ಬೆಂಬಲಿಸುತ್ತಿದ್ದ ಅವರು ಅಂತಿಮ ಓವರ್ನಲ್ಲಿ ತಮ್ಮ ಹುದ್ದೆಯ ಘನತೆಯನ್ನು ಮರೆತಿದ್ದು ವಿಪರ್ಯಾಸ.
5 / 8
ಸಿಎಸ್ಕೆ ತಂಡಕ್ಕೆ ಗೆಲ್ಲಲು ಕೊನೆಯ 4 ಎಸೆತಗಳಲ್ಲಿ 12 ರನ್ ಬೇಕಿತ್ತು. ಇದೇ ವೇಳೆ ವಿಐಪಿ ಗ್ಯಾಲರಿಯಲ್ಲಿ ಕೂತಿದ್ದ ಜಯ್ ಶಾ ಹೊಡೀತೀವಿ ಎಂಬಾರ್ಥದಲ್ಲಿ ಅನುಚಿತ ಕೈ ಸನ್ನೆ ಮಾಡುತ್ತಿರುವುದು ಕ್ಯಾಮೆರಾದಲ್ಲಿ ಸೆರೆಯಾಗಿದೆ. ಬಿಸಿಸಿಐ ಕಾರ್ಯದರ್ಶಿ ಅವರ ಈ ನಡೆಗೆ ಇದೀಗ ವ್ಯಾಪಕ ಆಕ್ರೋಶಗಳು ವ್ಯಕ್ತವಾಗುತ್ತಿದೆ.
6 / 8
ಏಕೆಂದರೆ ಜಯ್ ಶಾ ಅವರು ಬಿಸಿಸಿಐ ಕಾರ್ಯದರ್ಶಿ. ಯಾವ ತಂಡ ಗೆದ್ದರೂ ಪ್ರಶಸ್ತಿ ವಿತರಣಾ ಸಮಾರಂಭದಲ್ಲಿ ಅವರು ಕಾಣಿಸಿಕೊಳ್ಳಲಿದ್ದಾರೆ. ಆದರೆ ತಮ್ಮ ಹುದ್ದೆಯ ಘನತೆಯನ್ನೇ ಮರೆತು ಒಂದು ತಂಡಕ್ಕೆ ಬೆಂಬಲ ಸೂಚಿಸುವುದು ಎಷ್ಟು ಸರಿ ಎಂದು ಸೋಷಿಯಲ್ ಮೀಡಿಯಾದಲ್ಲಿ ಅನೇಕರು ಪ್ರಶ್ನಿಸಿದ್ದಾರೆ.
7 / 8
ಅದರಲ್ಲೂ ಅನುಚಿತ ಸನ್ನೆಯ ಮೂಲಕ ಎದುರಾಳಿ ತಂಡವನ್ನು ಸೋಲಿಸಲಿದ್ದೇವೆ ಎನ್ನುವುದು ಅವರ ಹುದ್ದೆಗೆ ಅಗೌರವ. ಒಂದು ಗೌರವಾನ್ವಿತ ಹುದ್ದೆಯಲ್ಲಿದ್ದು ತಟಸ್ಥ ನಿಲುವನ್ನು ಹೊಂದದೇ ಒಂದು ತಂಡದ ಗೆಲುವಿಗೆ ಹಾತೊರೆಯುವುದು ಐಪಿಎಲ್ ಮೇಲೆ ಅಪನಂಬಿಕೆ ಮೂಡಿಸುತ್ತದೆ ಎಂದು ಕೆಲವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
8 / 8
ಒಟ್ಟಿನಲ್ಲಿ ಜವಾಬ್ದಾರಿಯುತ ಸ್ಥಾನದಲ್ಲಿರುವ ಜಯ್ ಶಾ ಅವರ ಅನುಚಿತ ಸನ್ನೆಯ ಸಂಭ್ರಮದ ಬಗ್ಗೆ ಇದೀಗ ಸೋಷಿಯಲ್ ಮೀಡಿಯಾದಲ್ಲಿ ಭಾರೀ ಆಕ್ರೋಶಗಳು ವ್ಯಕ್ತವಾಗುತ್ತಿದೆ. ಅತ್ತ ಬಿಸಿಸಿಐ ಕಾರ್ಯದರ್ಶಿ ಅವರ ಸಂಭ್ರಮದ ನಡುವೆ ಚೆನ್ನೈ ಸೂಪರ್ ಕಿಂಗ್ಸ್ ಜಯ ಸಾಧಿಸಿದ್ದು, ಹೀಗಾಗಿ ಸಿಎಸ್ಕೆ ಫ್ಯಾನ್ಸ್ ಜಯ್ ಶಾ ಅವರನ್ನು ಟ್ರೋಲ್ ಮಾಡುತ್ತಿದ್ದಾರೆ.