IPL 2023: RCB ತಂಡಕ್ಕೆ ಸ್ಟಾರ್ ಆಟಗಾರ ಎಂಟ್ರಿ: ಹೊಸ ಚಿಂತೆ ಶುರು..!
IPL 2023 Kannada: RCB ತಂಡ ಹೀಗಿದೆ: ಫಾಫ್ ಡುಪ್ಲೆಸಿಸ್ (ನಾಯಕ), ವಿರಾಟ್ ಕೊಹ್ಲಿ, ರಜತ್ ಪಾಟಿದಾರ್, ಮೈಕೆಲ್ ಬ್ರೇಸ್ವೆಲ್, ದಿನೇಶ್ ಕಾರ್ತಿಕ್, ಅನೂಜ್ ರಾವತ್, ಫಿನ್ ಅಲೆನ್, ಜೋಶ್ ಹ್ಯಾಝಲ್ವುಡ್, ಮೊಹಮ್ಮದ್ ಸಿರಾಜ್, ಕರ್ಣ್ ಶರ್ಮಾ, ಸಿದ್ಧಾರ್ಥ್ ಕೌಲ್, ಹಿಮಾಂಶು ಶರ್ಮಾ, ರಜನ್ ಕುಮಾರ್.
Updated on: Apr 16, 2023 | 7:22 PM

IPL 2023: ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್ 16 ರಲ್ಲಿ ಆರ್ಸಿಬಿ ಗೆಲುವು-ಸೋಲು-ಗೆಲುವಿನೊಂದಿಗೆ ನಾಗಾಲೋಟ ಮುಂದುವರೆಸಿದೆ. ಮೊದಲ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ಭರ್ಜರಿ ಜಯ ಸಾಧಿಸಿದ್ದ ಆರ್ಸಿಬಿ, ಆ ಬಳಿಕ ಕೆಕೆಆರ್ ಹಾಗೂ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ಸೋಲನುಭವಿಸಿತ್ತು.

ಇದೀಗ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಗೆಲ್ಲುವ ಮೂಲಕ ಆರ್ಸಿಬಿ ಗೆಲುವಿನ ಲಯಕ್ಕೆ ಮರಳಿದೆ. ಈ ಗೆಲುವಿನ ಬೆನ್ನಲ್ಲೇ ತಂಡದ ಪ್ರಮುಖ ವೇಗಿ ಜೋಶ್ ಹ್ಯಾಝಲ್ವುಡ್ ಆರ್ಸಿಬಿ ಬಳಗವನ್ನು ಸೇರಿಕೊಂಡಿದ್ದಾರೆ.

ಈ ಬಾರಿಯ ಐಪಿಎಲ್ನ ಆರಂಭಿಕ ಪಂದ್ಯಗಳಿಂದ ಜೋಶ್ ಹ್ಯಾಝಲ್ವುಡ್ ಹೊರಗುಳಿದಿದ್ದರು. ಮೊಣಕಾಲಿನ ಗಾಯದ ಸಮಸ್ಯೆಯಿಂದ ಬಳಲುತ್ತಿರುವ ಹ್ಯಾಝಲ್ವುಡ್ ಮೊದಲ ನಾಲ್ಕು ಪಂದ್ಯಗಳಿಗೆ ಅಲಭ್ಯರಾಗಿದ್ದರು. ಇದೀಗ 5ನೇ ಪಂದ್ಯದ ವೇಳೆ ತಂಡವನ್ನು ಕೂಡಿಕೊಂಡಿದ್ದಾರೆ.

ಆರ್ಸಿಬಿ ಮುಂದಿನ ಪಂದ್ಯವನ್ನು ಸಿಎಸ್ಕೆ ವಿರುದ್ಧ ಆಡಲಿದ್ದು, ಇದಕ್ಕೂ ಮುನ್ನ ಜೋಶ್ ಹ್ಯಾಝಲ್ವುಡ್ ತಂಡವನ್ನು ಸೇರಿಕೊಂಡಿರುವುದು ಆರ್ಸಿಬಿ ಬಳಗದ ಬಲಿಷ್ಠತೆಯನ್ನು ಹೆಚ್ಚಿಸಿದೆ. ಆದರೆ ಆಸೀಸ್ ವೇಗಿಯ ಆಗಮನದ ಬೆನ್ನಲ್ಲೇ ಪ್ಲೇಯಿಂಗ್ ಇಲೆವೆನ್ ಆಯ್ಕೆಯೇ ದೊಡ್ಡ ಸವಾಲಾಗಿ ಪರಿಣಮಿಸಿದೆ.

ಏಕೆಂದರೆ ಆರ್ಸಿಬಿ ಪ್ಲೇಯಿಂಗ್ ಇಲೆವೆನ್ನಲ್ಲಿ ಫಾಫ್ ಡುಪ್ಲೆಸಿಸ್, ಗ್ಲೆನ್ ಮ್ಯಾಕ್ಸ್ವೆಲ್ ಹಾಗೂ ವನಿಂದು ಹಸರಂಗ ಇರುವುದು ಖಚಿತ. ಇನ್ನು ಬದಲಾವಣೆ ಮಾಡಬೇಕಿರುವುದು ವೇಯ್ನ್ ಪಾರ್ನೆಲ್ ಸ್ಥಾನದಲ್ಲಿ ಮಾತ್ರ. ಆದರೆ 2 ಪಂದ್ಯಗಳಲ್ಲಿ ಕಣಕ್ಕಿಳಿದಿರುವ ಪಾರ್ನೆಲ್ 4 ವಿಕೆಟ್ ಕಬಳಿಸುವ ಮೂಲಕ ಮಿಂಚಿದ್ದಾರೆ.

ಅದರಲ್ಲೂ ಪವರ್ಪ್ಲೇನಲ್ಲಿ ಉತ್ತಮ ದಾಳಿ ಸಂಘಟಿಸುವಲ್ಲಿ ಎಡಗೈ ವೇಗಿ ಪಾರ್ನೆಲ್ ಯಶಸ್ವಿಯಾಗಿದ್ದಾರೆ. ಇದೀಗ ಜೋಶ್ ಹ್ಯಾಝಲ್ವುಡ್ ಅವರಿಗೆ ಅವಕಾಶ ಕಲ್ಪಿಸಬೇಕಿದ್ದರೆ ಪಾರ್ನೆಲ್ ಅವರನ್ನು ಕೈ ಬಿಡಲೇಬೇಕು. ಇದುವೇ ಈಗ ಆರ್ಸಿಬಿ ಟೀಮ್ ಮ್ಯಾನೇಜ್ಮೆಂಟ್ನ ಚಿಂತೆಯನ್ನು ಹೆಚ್ಚಿಸಿದೆ.

ಅಂದರೆ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಜೋಶ್ ಹ್ಯಾಝಲ್ವುಡ್ ಅವರನ್ನು ಕಣಕ್ಕಿಳಿಸಬೇಕಿದ್ದರೆ, ವೇಯ್ನ್ ಪಾರ್ನೆಲ್ ಅವರನ್ನು ಕೈ ಬಿಡಬೇಕು. ಹೀಗಾದ್ರೆ ಆರ್ಸಿಬಿ ಆಡುವ ಬಳಗದಲ್ಲಿ ಎಡಗೈ ವೇಗಿ ಇರುವುದಿಲ್ಲ. ತಂಡದಲ್ಲಿರುವ ಹರ್ಷಲ್ ಪಟೇಲ್, ಮೊಹಮ್ಮದ್ ಸಿರಾಜ್, ವೈಶಾಕ್ ವಿಜಯಕುಮಾರ್...ಎಲ್ಲರೂ ಬಲಗೈ ವೇಗಿಗಳು.

ಇದೀಗ ಬಲಗೈ ವೇಗಿಯಾಗಿರುವ ಜೋಶ್ ಹ್ಯಾಝಲ್ವುಡ್ ಆಡುವ ಬಳಗ ಸೇರಿಕೊಂಡರೆ ಎಡಗೈ ವೇಗಿಯ ಸೇವೆಯನ್ನು ಕಳೆದುಕೊಳ್ಳಲಿದೆ. ಇದುವೇ ಈಗ ತಂಡದ ಚಿಂತೆಯನ್ನು ಹೆಚ್ಚಿಸಿದ್ದು, ಅಂತಿಮವಾಗಿ ಆರ್ಸಿಬಿ ಪ್ಲೇಯಿಂಗ್ ಇಲೆವೆನ್ನಲ್ಲಿ ಇವರಿಬ್ಬರಲ್ಲಿ (ಪಾರ್ನೆಲ್-ಹ್ಯಾಝಲ್ವುಡ್) ಯಾರಿಗೆ ಚಾನ್ಸ್ ಸಿಗಲಿದೆ ಎಂಬುದನ್ನು ಕಾದು ನೋಡಬೇಕಿದೆ.

RCB ತಂಡ ಹೀಗಿದೆ: ಫಾಫ್ ಡುಪ್ಲೆಸಿಸ್ (ನಾಯಕ), ವಿರಾಟ್ ಕೊಹ್ಲಿ, ರಜತ್ ಪಾಟಿದಾರ್, ಮೈಕೆಲ್ ಬ್ರೇಸ್ವೆಲ್, ದಿನೇಶ್ ಕಾರ್ತಿಕ್, ಅನೂಜ್ ರಾವತ್, ಫಿನ್ ಅಲೆನ್, ಜೋಶ್ ಹ್ಯಾಝಲ್ವುಡ್, ಮೊಹಮ್ಮದ್ ಸಿರಾಜ್, ಕರ್ಣ್ ಶರ್ಮಾ, ಸಿದ್ಧಾರ್ಥ್ ಕೌಲ್, ಹಿಮಾಂಶು ಶರ್ಮಾ, ರಜನ್ ಕುಮಾರ್, ಅವಿನಾಶ್ ಸಿಂಗ್, ಗ್ಲೆನ್ ಮ್ಯಾಕ್ಸ್ವೆಲ್, ವನಿಂದು ಹಸರಂಗ, ಮಹಿಪಾಲ್ ಲೋಮ್ರರ್, ಶಹಬಾಝ್ ಅಹ್ಮದ್, ಹರ್ಷಲ್ ಪಟೇಲ್, ಆಕಾಶ್ ದೀಪ್, ಡೇವಿಡ್ ವಿಲ್ಲಿ, ಸುಯಶ್ ಪ್ರಭುದೇಸಾಯಿ, ಮನೋಜ್ ಭಾಂಡಗೆ, ಸೋನು ಯಾದವ್, ವೇಯ್ನ್ ಪಾರ್ನೆಲ್, ವೈಶಾಕ್ ವಿಜಯಕುಮಾರ್.
























