IPL 2023: RCB ತಂಡದ ಆರಂಭಿಕರು ಯಾರು? ಸುಳಿವು ನೀಡಿದ ಮೈಕ್ ಹೆಸ್ಸನ್

| Updated By: ಝಾಹಿರ್ ಯೂಸುಫ್

Updated on: Dec 24, 2022 | 10:58 PM

IPL 2023 RCB Team: ಫಾಫ್ ಡುಪ್ಲೆಸಿಸ್ (ನಾಯಕ), ವಿರಾಟ್ ಕೊಹ್ಲಿ, ರಜತ್ ಪಾಟಿದಾರ್, ವಿಲ್ ಜಾಕ್ಸ್​, ದಿನೇಶ್ ಕಾರ್ತಿಕ್, ಅನೂಜ್ ರಾವತ್, ಫಿನ್ ಅಲೆನ್, ಜೋಶ್ ಹ್ಯಾಝಲ್​ವುಡ್​, ಮೊಹಮ್ಮದ್ ಸಿರಾಜ್, ಕರ್ಣ್​ ಶರ್ಮಾ, ಸಿದ್ಧಾರ್ಥ್​ ಕೌಲ್, ರೀಸ್ ಟೋಪ್ಲಿ, ಹಿಮಾಂಶು ಶರ್ಮಾ, ರಜನ್ ಕುಮಾರ್, ಅವಿನಾಶ್ ಸಿಂಗ್, ಗ್ಲೆನ್ ಮ್ಯಾಕ್ಸ್​ವೆಲ್.

1 / 7
ಐಪಿಎಲ್ 2023ರ ಸೀಸನ್​ಗಾಗಿ ರಾಯಲ್ ಚಾಲೆಂಜರ್ಸ್​ ಬೆಂಗಳೂರು ಫ್ರಾಂಚೈಸಿಯು ಬಲಿಷ್ಠ ತಂಡವನ್ನು ಕಟ್ಟಿದೆ. 25 ಸದಸ್ಯರನ್ನು ಒಳಗೊಂಡಿರುವ ಈ ತಂಡದಲ್ಲಿ ಸ್ಟಾರ್ ಆಟಗಾರರ ದಂಡೇ ಇದೆ. ಅದರಲ್ಲೂ ಈ ಬಾರಿಯ ಮಿನಿ ಹರಾಜಿನ ಮೂಲಕ ಆರ್​ಸಿಬಿ ಇಂಗ್ಲೆಂಡ್​ನ ಸ್ಪೋಟಕ ಬ್ಯಾಟರ್​ ವಿಲ್ ಜಾಕ್ಸ್​ ಹಾಗೂ ಎಡಗೈ ವೇಗಿ ರೀಸ್ ಟೋಪ್ಲಿಯನ್ನು ಖರೀದಿಸಿದೆ.

2 / 7
ಇದರೊಂದಿಗೆ ಆರ್​ಸಿಬಿ ತಂಡವು ಮತ್ತಷ್ಟು ಬಲಿಷ್ಠವಾಗಿದೆ ಎಂದೇ ಹೇಳಬಹುದು. ಏಕೆಂದರೆ ಜೋಶ್ ಹ್ಯಾಝಲ್​ವುಡ್​ ಬ್ಯಾಕಪ್ ಆಗಿ ಇಲ್ಲಿ ರೀಸ್ ಟೋಪ್ಲಿ ಇದ್ದರೆ, ಗ್ಲೆನ್ ಮ್ಯಾಕ್ಸ್​ವೆಲ್​ಗೆ ಬದಲಿಯಾಗಿ ಹೊಡಿಬಡಿ ದಾಂಡಿಗ ವಿಲ್ ಜಾಕ್ಸ್​ ಆರ್​ಸಿಬಿ ತಂಡದಲ್ಲಿದ್ದಾರೆ. ಹೀಗಾಗಿ ಸ್ಟಾರ್ ಆಟಗಾರರು ಕೆಲ ಪಂದ್ಯಗಳಿಗೆ ಅಲಭ್ಯರಾದರೂ ಬಲಿಷ್ಠ ಪ್ಲೇಯಿಂಗ್ ಇಲೆವೆನ್​ ಅನ್ನು ಕಣಕ್ಕಿಳಿಸುವ ಆಯ್ಕೆ ಆರ್​ಸಿಬಿ ಮುಂದಿದೆ.

3 / 7
ಇದಾಗ್ಯೂ ಆರ್​ಸಿಬಿ ಫ್ರಾಂಚೈಸಿ ಈ ಬಾರಿ ಕೂಡ ಅತ್ಯುತ್ತಮ ಆರಂಭಿಕ ಆಟಗಾರನನ್ನು ಖರೀದಿಸಿಲ್ಲ ಎಂಬುದು ವಿಶೇಷ. ಇದರ ಬೆನ್ನಲ್ಲೇ ಐಪಿಎಲ್​ ಸೀಸನ್​ 16 ನಲ್ಲಿ ಆರ್​ಸಿಬಿ ತಂಡದ ಆರಂಭಿಕ ಜೋಡಿ ಯಾರು ಎಂಬ ಪ್ರಶ್ನೆಯೊಂದು ಹುಟ್ಟಿಕೊಂಡಿದೆ. ಈ ಪ್ರಶ್ನೆಗೆ ಸಣ್ಣ ಸುಳಿವಿನ ಉತ್ತರ ನೀಡಿದ್ದಾರೆ ಆರ್​ಸಿಬಿ ತಂಡದ ಡೈರೆಕ್ಟರ್ ಮೈಕ್ ಹೆಸ್ಸನ್.

4 / 7
ಈ ಬಗ್ಗೆ ಮಾತನಾಡಿರುವ ಮೈಕ್ ಹೆಸ್ಸನ್, ಈ ಬಾರಿಯ ಹರಾಜಿನಲ್ಲಿ ನಾವು ರೀಸ್ ಟೋಪ್ಲಿಯನ್ನು ಟಾರ್ಗೆಟ್ ಮಾಡಿದ್ದೆವು. ಅದರಂತೆ 1.90 ಕೋಟಿಗೆ ಇಂಗ್ಲೆಂಡ್ ವೇಗಿಯನ್ನು ಖರೀದಿಸುವಲ್ಲಿ ಸಫಲರಾಗಿದ್ದೇವೆ. ಇನ್ನು ವಿಲ್ ಜ್ಯಾಕ್ಸ್ ಅವರನ್ನು ಕೂಡ ನಾವು ಖರೀದಿಸಿದ್ದೇವೆ. ಇದರಿಂದ ತಂಡವು ಮತ್ತಷ್ಟು ಸಮತೋಲನವಾಗಿದೆ ಎಂದರು.

5 / 7
ಇದೇ ವೇಳೆ ಮುಂದಿನ ಸೀಸನ್​ನಲ್ಲಿ ಆರ್​ಸಿಬಿ ಪರ ಯಾರು ಇನಿಂಗ್ಸ್​ ಆರಂಭಿಸುತ್ತಾರೆ ಎಂಬ ಪ್ರಶ್ನೆಗೆ ಉತ್ತರಿಸಿದ ಮೈಕ್ ಹೆಸ್ಸನ್, ಕಳೆದ ಸೀಸನ್​ನಲ್ಲಿ ಅನೂಜ್ ರಾವತ್ ಹಾಗೂ ಫಾಫ್ ಡುಪ್ಲೆಸಿಸ್ ಮ್ಯಾನೇಜ್ಮೆಂಟ್​ನ ಮೊದಲ ಆಯ್ಕೆಯಾಗಿತ್ತು. ಈ ಬಾರಿ ಫಾಫ್ ಹಾಗೂ ವಿರಾಟ್ ಕೊಹ್ಲಿ ಇನಿಂಗ್ಸ್​ ಆರಂಭಿಸಬಹುದು ಎಂದು ತಿಳಿಸಿದ್ದಾರೆ.

6 / 7
ಈ ಮೂಲಕ ಐಪಿಎಲ್ 2023 ರಲ್ಲಿ RCB ವಿರಾಟ್ ಕೊಹ್ಲಿಯನ್ನು ಆರಂಭಿಕರಾಗಿ ಕಣಕ್ಕಿಳಿಸುವ ಸುಳಿವು ನೀಡಿದ್ದಾರೆ ಮೈಕ್ ಹಸ್ಸೆನ್. ಈ ಹಿಂದೆ ಕಿಂಗ್ ಕೊಹ್ಲಿ ಆರ್​ಸಿಬಿ ಪರ ಆರಂಭಿಕರಾಗಿ ಆಡಿದ್ದರು. ಇದೀಗ ಮತ್ತೊಮ್ಮೆ ಓಪನರ್ ಆಗಿ ಇನಿಂಗ್ಸ್ ಆರಂಭಿಸುವ ಜವಾಬ್ದಾರಿಯೊಂದಿಗೆ ಬ್ಯಾಟ್ ಬೀಸಲಿದ್ದಾರಾ ಕಾದು ನೋಡಬೇಕಿದೆ.

7 / 7
RCB ಹೊಸ ತಂಡ ಹೀಗಿದೆ: ಫಾಫ್ ಡುಪ್ಲೆಸಿಸ್ (ನಾಯಕ), ವಿರಾಟ್ ಕೊಹ್ಲಿ, ರಜತ್ ಪಾಟಿದಾರ್, ವಿಲ್ ಜಾಕ್ಸ್​, ದಿನೇಶ್ ಕಾರ್ತಿಕ್, ಅನೂಜ್ ರಾವತ್, ಫಿನ್ ಅಲೆನ್, ಜೋಶ್ ಹ್ಯಾಝಲ್​ವುಡ್​, ಮೊಹಮ್ಮದ್ ಸಿರಾಜ್, ಕರ್ಣ್​ ಶರ್ಮಾ, ಸಿದ್ಧಾರ್ಥ್​ ಕೌಲ್, ರೀಸ್ ಟೋಪ್ಲಿ, ಹಿಮಾಂಶು ಶರ್ಮಾ, ರಜನ್ ಕುಮಾರ್, ಅವಿನಾಶ್ ಸಿಂಗ್, ಗ್ಲೆನ್ ಮ್ಯಾಕ್ಸ್​ವೆಲ್, ವನಿಂದು ಹಸರಂಗ, ಮಹಿಪಾಲ್ ಲೋಮ್ರರ್, ಶಹಬಾಝ್ ಅಹ್ಮದ್, ಹರ್ಷಲ್ ಪಟೇಲ್, ಆಕಾಶ್ ದೀಪ್, ಡೇವಿಡ್ ವಿಲ್ಲಿ, ಸುಯಶ್ ಪ್ರಭುದೇಸಾಯಿ, ಮನೋಜ್ ಭಾಂಡಗೆ, ಸೋನು ಯಾದವ್.