ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್ 16 ಗಾಗಿ ಎಲ್ಲಾ ತಂಡಗಳು ಫೈನಲ್ ಆಗಿವೆ. ಡಿಸೆಂಬರ್ 23 ರಂದು ನಡೆದ ಮಿನಿ ಹರಾಜಿನಲ್ಲಿ ಒಟ್ಟು 80 ಆಟಗಾರರು ಐಪಿಎಲ್ಗೆ ಆಯ್ಕೆಯಾಗಿದ್ದಾರೆ. ವಿಶೇಷ ಎಂದರೆ ಈ ಪಟ್ಟಿಯಲ್ಲಿ ನಮೀಬಿಯಾ ದೇಶದ ಏಕೈಕ ಆಟಗಾರ ಕೂಡ ಸ್ಥಾನ ಪಡೆದಿದ್ದರು.
ಹೌದು, ನಬೀಯಾ ದೇಶದ ಆಟಗಾರ ಡೇವಿಡ್ ವೀಝ ಅವರನ್ನು ಈ ಬಾರಿ ಕೆಕೆಆರ್ ಫ್ರಾಂಚೈಸಿ 1 ಕೋಟಿ ರೂ. ಗೆ ಖರೀದಿಸಿದೆ. ಇದರೊಂದಿಗೆ ನಮೀಬಿಯಾ ದೇಶದಿಂದ ಐಪಿಎಲ್ಗೆ ಆಯ್ಕೆಯಾದ ಮೊದಲ ಆಟಗಾರ ಎಂಬ ಹಿರಿಮೆಗೆ ಪಾತ್ರರಾಗಿದ್ದಾರೆ. ಆದರೆ ಇದು ಡೇವಿಡ್ ವೀಝಗೆ ಚೊಚ್ಚಲ ಐಪಿಎಲ್ ಅವಕಾಶವಲ್ಲ ಎಂಬುದೇ ಇಲ್ಲಿ ವಿಶೇಷ.
ಅಂದರೆ ಡೇವಿಡ್ ವೀಝ 2015 ರಲ್ಲೇ ಐಪಿಎಲ್ನಲ್ಲಿ ಕಾಣಿಸಿಕೊಂಡಿದ್ದರು. ಆದರೆ ಅಂದು ಸೌತ್ ಆಫ್ರಿಕಾದ ಆಟಗಾರನಾಗಿ ಎಂಬುದು ವಿಶೇಷ. 2013 ರಿಂದ 2016 ರವರೆಗೆ ದಕ್ಷಿಣ ಆಫ್ರಿಕಾ ತಂಡವನ್ನು ಪ್ರತಿನಿಧಿಸಿದ್ದ ವೀಝ ಆ ಬಳಿಕ ನಮೀಬಿಯಾ ಪರ ಹೊಸ ಕೆರಿಯರ್ ಆರಂಭಿಸಿದ್ದರು.
ಇದರ ನಡುವೆ, ಅಂದರೆ 2015 ರಲ್ಲಿ ಐಪಿಎಲ್ನಲ್ಲಿ ಅವಕಾಶ ಪಡೆದಿದ್ದ ಡೇವಿಡ್ ವೀಝ ಆರ್ಸಿಬಿ ಪರ ಪಾದರ್ಪಣೆ ಮಾಡಿದ್ದರು. ಅಲ್ಲದೆ ಎರಡು ಸೀಸನ್ನಲ್ಲಿ ಒಟ್ಟು 15 ಪಂದ್ಯಗಳನ್ನಾಡಿ 16 ವಿಕೆಟ್ಗಳನ್ನು ಕಬಳಿಸಿದ್ದರು.
ಇದೀಗ ಬರೋಬ್ಬರಿ ಆರು ವರ್ಷಗಳ ಬಳಿಕ ಮತ್ತೊಮ್ಮೆ ಐಪಿಎಲ್ನಲ್ಲಿ ಅವಕಾಶ ಪಡೆದಿದ್ದಾರೆ. ಈ ಮೂಲಕ ಸೌತ್ ಆಫ್ರಿಕಾ ಹಾಗೂ ನಮೀಬಿಯಾ ರಾಷ್ಟ್ರೀಯ ತಂಡವನ್ನು ಪ್ರತಿನಿಧಿಸಿ ಐಪಿಎಲ್ನಲ್ಲಿ ಅವಕಾಶ ಪಡೆದ ಏಕೈಕ ಆಟಗಾರ ಎಂಬ ಹೆಗ್ಗಳಿಕೆಗೆ ಡೇವಿಡ್ ವೀಝ ಪಾತ್ರರಾಗಿದ್ದಾರೆ.
ವಿರಾಟ್ ಕೊಹ್ಲಿ ಜೊತೆ ಡೇವಿಡ್ ವೀಝ
Published On - 9:59 pm, Sat, 24 December 22